ಪರೀಕ್ಷಾ ಆತಂಕದಿಂದ ಹೊರಬರುವುದು ಹೇಗೆ? ಇಲ್ಲಿದೆ ಮಾಹಿತಿ ಎಲ್ಲ ಓದಿದ್ದರೂ ಕೆಲವೊಮ್ಮೆ ಪರೀಕ್ಷೆ ಎಂದೊಡನೆ ಭಯವಾಗುತ್ತದೆ. ಪರೀಕ್ಷಾ ಕೇಂದ್ರಕ್ಕೆ ಹೋದಾಗ ಎಲ್ಲ ಮರೆತಂತೆ ಆಗುತ್ತದೆ. ಪೂರ್ಣ ತಯಾರಿ ಇಲ್ಲದಿದ್ದಲ್ಲಿ, ಆತ್ಮವಿಶ್ವಾಸದ ಕೊರತೆ ಇದ್ದಲ್ಲಿ ಇಂಥ ಸಮಸ್ಯೆಯನ್ನು ಎದುರಿಸುತ್ತಾರೆ. ಇದಕ್ಕೆ ಪರೀಕ್ಷಾ ಆತಂಕ ಎನ್ನುತ್ತಾರೆ. ನಿಮ್ಮಲ್ಲಿಯೂ ಈ ಲಕ್ಷಣಗಳಿವೆಯೇ? ಆತಂಕವಾಗುತ್ತಿದೆಯೇ? ಪರೀಕ್ಷೆ ಎಂದೊಡನೆ ಮೈ ಬೆವರುವುದು ಅಂಗೈ ಬೆವರುವುದು ತೊಡೆಗಳಲ್ಲಿ ನಡುಕ ಉಂಟಾಗುವುದು ಬಾಯಾರಿಕೆ ಆಗುವುದು ತುಟಿ ಒಣಗಿದಂತಾಗುವುದು ಓದಿರುವುದು ಮರೆತಂತಾಗುವುದು ಹೀಗೆಲ್ಲ ಆಗುತ್ತಿದ್ದರೆ ಪಾಲಕರ ಬಳಿ, ಶಿಕ್ಷಕರ ಬಳಿ ಚರ್ಚಿಸಿ. ನಿಮ್ಮ ಸಮಸ್ಯೆಯನ್ನು ಹೇಳಿಕೊಳ್ಳಿ. ಇಂಥ ಸಮಸ್ಯೆಗೆ ಸಮಾಲೋಚನೆ ಮತ್ತು ಆತ್ಮಸ್ಥೈರ್ಯವೇ ಚಿಕಿತ್ಸೆಯಾಗಿದೆ. ಒಳಗೊಳಗೇ ಆತಂಕ ಪಟ್ಟರೆ ಮುಖ್ಯ ಪರೀಕ್ಷೆ ಬಂದಾಗ ಆ ಆತಂಕ ಇನ್ನೂ ಹೆಚ್ಚುತ್ತದೆ. ಪರೀಕ್ಷಾ ಆತಂಕದಿಂದ ಹೊರ ಬರಲು, ಇದೇ ಸೂಕ್ತ ಸಮಯವಾಗಿದೆ. ಈ ಹಿಂದಿನ ಪ್ರಶ್ನೆಪತ್ರಿಕೆಗಳಿಗೆ ನಿಗದಿತ ಸಮಯದಲ್ಲಿ ಉತ್ತರಿಸಲು ಪ್ರಯತ್ನಿಸಿ. ಪ್ರತಿದಿನ ಸಾಕಷ್ಟು ನೀರು ಕುಡಿಯಿರಿ. ಒಂದರ್ಧ ಗಂಟೆಯಾದರೂ ವಾಕ್‌, ಯೋಗ ಮಾಡಿ. ಸಮಾಧಾನದಿಂದಿರಲು ಯೋಜಿತ ಅಭ್ಯಾಸ ಮಾಡಿ. ಪರೀಕ್ಷಾ ಕೇಂದ್ರದಲ್ಲಿ ಸುದೀರ್ಘವಾಗಿ ಉಸಿರಾಡಿ. ನಿಗದಿತ ಸಮಯದಲ್ಲಿ ಅಭ್ಯಾಸ ಮಾಡಿ ಹೆಚ್ಚು ಹೆಚ್ಚು ಬರೆಯುವುದನ್ನು ರೂಢಿಸಿಕೊಳ್ಳಿ ಪ್ರತಿದಿನವೂ ಓದಿರುವುದನ್ನು ಸ್ನೇಹಿತರ ಜೊತೆ, ಗುರುಗಳ ಜೊತೆಗೆ ಚರ್ಚಿಸಿ ಕ್ರಮೇಣ ಪರೀಕ್ಷೆಯ ಕುರಿತ ಭಯ ಕಡಿಮೆಯಾಗುತ್ತ ಹೋಗುವುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.