ಐಎಎಸ್‌, ಕೆಎಎಸ್‌ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಹು ಆಯ್ಕೆ ಪ್ರಶ್ನೆಗಳು ಐಎಎಸ್‌, ಕೆಎಎಸ್‌, ಕೆಪಿಎಸ್‌ಸಿ ಸೇರಿದಂತೆ ವಿವಿಧ ಹುದ್ದೆಗಳಿಗಾಗಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ‘ಸಾಮಾನ್ಯ ಜ್ಞಾನ’ ವಿಷಯಕ್ಕೆ ಸಂಬಂಧಿಸಿದ ಮಾದರಿ ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ. 1. ಲೋಕಸಭೆಯಲ್ಲಿ ಮಂಡನೆಯಾಗುವ ‘ಅವಿಶ್ವಾಸ ನಿಲುವಳಿ’ ಎಂದರೇನು ? ಎ. ಆಡಳಿತ ಸರ್ಕಾರದ ವಿರುದ್ಧ ವಿಶ್ವಾಸವಿಲ್ಲ ಎಂಬುದನ್ನು ಪ್ರತಿಪಕ್ಷಗಳು ಸಾಬೀತು ಪಡಿಸುವುದು ಬಿ. ಅವಿಶ್ವಾಸ ನಿಲುವಳಿ ಮಂಡನೆಗೆ ಲೋಕಸಭೆ ಸ್ಪೀಕರ್ ರವರ ಅನುಮತಿ ಪಡೆಯಬೇಕು ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ ಎ. ಹೇಳಿಕೆ ಎ ಮಾತ್ರ ಸರಿಯಾಗಿದೆ ಬಿ. ಹೇಳಿಕೆ ಬಿ ಮಾತ್ರ ಸರಿಯಾಗಿದೆ ಸಿ. ಮೇಲಿನ ಎರಡೂ ಹೇಳಿಕೆಗಳು ಸರಿಯಾಗಿವೆ ಡಿ. ಮೇಲಿನ ಎರಡೂ ಹೇಳಿಕೆಗಳು ತಪ್ಪಾಗಿವೆ ಉತ್ತರ: ಸಿ 2. ಭಾರತದಲ್ಲಿ(ಲೋಕಸಭೆಯಲ್ಲಿ) ಅವಿಶ್ವಾಸ ನಿರ್ಣಯದ ಇತಿಹಾಸವನ್ನು ಕುರಿತು ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿರಿ. ಎ. ಭಾರತ ಗಣರಾಜ್ಯವಾದ ನಂತರ ಲೋಕಸಭೆಯಲ್ಲಿ ಒಟ್ಟು 27 ಬಾರಿ ಅವಿಶ್ವಾಸ ನಿರ್ಣಯ ಮಂಡಿಸಲಾಗಿದೆ. ಬಿ. 1963ರಲ್ಲಿ ಮೊದಲ ಅವಿಶ್ವಾಸ ನಿರ್ಣಯ ಮಂಡನೆಯಾಗಿದೆ. ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ ಎ. ಹೇಳಿಕೆ ಎ ಮಾತ್ರ ಸರಿಯಾಗಿದೆ. ಬಿ. ಹೇಳಿಕೆ ಬಿ ಮಾತ್ರ ಸರಿಯಾಗಿದೆ. ಸಿ. ಮೇಲಿನ ಎರಡೂ ಹೇಳಿಕೆಗಳು ಸರಿಯಾಗಿವೆ. ಡಿ. ಮೇಲಿನ ಎರಡೂ ಹೇಳಿಕೆಗಳು ತಪ್ಪಾಗಿವೆ. ಉತ್ತರ:ಸಿ. 3. ಲೋಕಸಭೆಯಲ್ಲಿ ಅತಿ ಸುದೀರ್ಘವಾದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಯಾವ ಪ್ರಧಾನಮಂತ್ರಿಯ ಕಾಲದಲ್ಲಾಯಿತು ? ಎ. ಅಟಲ್ ಬಿಹಾರಿ ವಾಜಪೇಯಿ ಬಿ. ನರೇಂದ್ರ ಮೋ ದಿ ಸಿ. ಮೊರಾರ್ಜಿ ದೇಸಾಯಿ ಡಿ. ಲಾಲ್ ಬಹದ್ದೂರ್ ಶಾಸ್ತ್ರಿ ಉತ್ತರ: ಡಿ. 4) ಸಿಂಧೂ ನದಿಯು ಲಡಾಖ್‌ ಕೇಂದ್ರಾಡಳಿತ ಪ್ರದೇಶವನ್ನು ಪ್ರವೇಶಿಸುವಾಗ ಕೆಳಗಿನ ಯಾವ ಉಪನದಿಗಳು ಸಿಂಧೂ ನದಿಯನ್ನು ಸೇರುತ್ತವೆ? 1) ಝಸ್ಕಾರ್ (). 2) ನುಬ್ರಾ (). 3) ಶ್ಯೋಕ್ () 4) ರಾವಿ (). ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ ಎ) 1, 2, 3 ಮತ್ತು 4 ಬಿ) 1, 2 ಮತ್ತು 3 ಸಿ) 1 ಮತ್ತು 3 ಡಿ) 3 ಮತ್ತು 4. ಉತ್ತರ : ಬಿ 5) ಜೇಲಂ ನದಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ ? 1) ಜೇಲಂ ನದಿಯು ಕಾಶ್ಮೀರ ಕಣಿವೆ ಪ್ರದೇಶದ ಪಿರ್ ಪಂಜಲ್ ಪರ್ವತಶ್ರೇಣಿಯ ವೆರಿನಾಗ್ ಎಂಬ ಸ್ಥಳದಲ್ಲಿ ಉಗಮವಾಗುತ್ತದೆ. 2) ಜೇಲಂ ನದಿಯ ಒಟ್ಟು ಉದ್ದ 729 ಕಿಲೋಮೀಟರ್. 3) ಜೇಲಂ ನದಿಯು ಪಾಕಿಸ್ತಾನವನ್ನು ಸೇರುವ ಮುನ್ನ ಶ್ರೀನಗರದಲ್ಲಿ ಹರಿಯುತ್ತದೆ. ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ ಎ) 1 ಮತ್ತು 2 ಬಿ) 1 ಮತ್ತು 3 ಸಿ) 2 ಮತ್ತು 3 ಡಿ) 1, 2 ಮತ್ತು 3. ಉತ್ತರ : ಡಿ 6) ಮೌಂಟ್ ಎವರೆಸ್ಟ್ ಪರ್ವತವನ್ನು ನೇಪಾಳದಲ್ಲಿ ಏನೆಂದು ಕರೆಯುತ್ತಾರೆ ? ಎ) ಸಾಗರಮಾತಾ ಬಿ) ಚೋಮೊಳುಂಗ್ಮ () ಸಿ) ಅಕ್ಸಾಯ್ ಚಿನ್ ಡಿ) ನುಬ್ರಾ ಪರ್ವತ. ಉತ್ತರ : ಎ 7) ಪ್ರಸಿದ್ಧ ಸಿಹಿ ನೀರಿನ ಸರೋವರಗಳಾದ ವುಲಾರ್ () ಮತ್ತು ದಾಲ್ () ಸರೋವರಗಳನ್ನು ಯಾವ ಹಿಮಾಲಯದ ಶ್ರೇಣಿಯಲ್ಲಿ ಕಾಣಬಹುದಾಗಿದೆ? ಎ) ಕಿರಿಯ ಹಿಮಾಲಯ ಶ್ರೇಣಿ. ಬಿ) ಶಿವಾಲಿಕ್ ಶ್ರೇಣಿಗಳು. ಸಿ) ಗಡಿಯಾಚೆಗಿನ ಹಿಮಾಲಯ. ಡಿ) ಮಹಾ ಹಿಮಾಲಯ ಮತ್ತು ಪಿರ್ ಪಂಜಲ್ ( ) ಶ್ರೇಣಿಯ ನಡುವಿನ ಪ್ರದೇಶ. ಉತ್ತರ : ಡಿ 8) ಸಾರಾಮತಿ ಶಿಖರವು ಯಾವ ಪರ್ವತಗಳಲ್ಲಿ ಕಂಡುಬರುತ್ತದೆ? ಎ) ಮಿಜೋ ಬೆಟ್ಟಗಳು. ಬಿ) ನಾಗ ಬೆಟ್ಟಗಳು. ಸಿ) ಮಣಿಪುರ ಬೆಟ್ಟಗಳು. ಡಿ) ಕಾರಕೋರಂ ಪರ್ವತಶ್ರೇಣಿ. ಉತ್ತರ : ಬಿ. 9) ಮಹಿಳಾ ಮೀಸಲಾತಿ ಮಸೂದೆಯ ಐತಿಹಾಸಿಕ ಹೆಜ್ಜೆಗಳಿಗೆ ಸಂಬಂಧಿಸಿದ ಸೂಕ್ತ ಅಂಶಗಳನ್ನು ಗುರುತಿಸಿ? 1) ಮಹಿಳೆಯರಿಗೆ ಶಾಸಕಾಂಗಗಳಲ್ಲಿ ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಮೊಟ್ಟಮೊದಲ ಬಾರಿಗೆ 1996 ರಲ್ಲಿ ಮಂಡಿಸಲಾಯಿತು. 2) 2008 ರಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿ 2010 ರಲ್ಲಿ ಅಂಗೀಕರಿಸಲಾಗಿದೆ. ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ ಎ. 1 ಮಾತ್ರ ಬಿ. 2 ಮಾತ್ರ ಸಿ. 1 ಮತ್ತು 2 ಡಿ. ಮೇಲಿನ ಎರಡು ಹೇಳಿಕೆಗಳು ತಪ್ಪಾಗಿವೆ. ಉತ್ತರ : ಸಿ 10) ಸ್ಥಳೀಯ ಸಂಸ್ಥೆಗಳಲ್ಲಿ ಕೆಳಗಿನ ಯಾವ ರಾಜ್ಯಗಳು ಶೇ 50 ರಷ್ಟು ಮಹಿಳಾ ಮೀಸಲಾತಿಯನ್ನು ಕಲ್ಪಿಸಿವೆ? 1. ಕೇರಳ 2. ಮಹಾರಾಷ್ಟ್ರ 3. ಬಿಹಾರ್ 4. ಆಂಧ್ರಪ್ರದೇಶ 5. ಜಾರ್ಖಂಡ್ 6. ಮಧ್ಯಪ್ರದೇಶ ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ ಎ. 1, 2, 3, 4 ಮತ್ತು 5 ಬಿ. 2 ಮತ್ತು 3 ಸಿ. 1 ಮತ್ತು 3 ಡಿ. 3 ಮತ್ತು 5 ಉತ್ತರ : ಎ 11) ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವನ್ನು ಕೆಳಗಿನ ಯಾವ ಸ್ವರೂಪದ ಸಂಸ್ಥೆಯೆಂದು ಪರಿಗಣಿಸಬಹುದು? ಎ. ಸಂವಿಧಾನಾತ್ಮಕ ಸಂಸ್ಥೆ ಬಿ. ಶಾಸನೀಯ ಸಂಸ್ಥೆ ಸಿ. ಕಾರ್ಯಾಂಗದ ಆದೇಶದ ಮೇಲೆ ಸ್ಥಾಪನೆಯಾಗಿರುವ ಸಂಸ್ಥೆ ಡಿ. ಸಾರ್ವಜನಿಕ ವಲಯದ ಕಂಪನಿಯ ಸ್ಥಾನಮಾನ ಉತ್ತರ : ಬಿ 12. ಕೆಳಗಿನ ಯಾವ ಬುಡಕಟ್ಟುಗಳು ಗ್ರೇಟ್ ನಿಕೋಬಾರ್ ದ್ವೀಪದಲ್ಲಿ ವಾಸಿಸುತ್ತಿವೆ? 1. ನಿಕೋಬಾರಿ 2. ಶಾಂಪೆನ್ 3. ಅಪಟಾಮಿ 4. ಕುಕಿ ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ ಎ. 1 ಮತ್ತು 2 ಬಿ. 1 ಮತ್ತು 3 ಸಿ. 1 ಮತ್ತು 4 ಡಿ. 2 ಮತ್ತು 4 ಉತ್ತರ : ಎ 13) ರಾಷ್ಟ್ರೀಯ ಅಂಧತ್ವ ಮತ್ತು ದೃಷ್ಟಿಮಾಂದ್ಯತೆ ನಿಯಂತ್ರಣ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ? 1. ಈ ಕಾರ್ಯಕ್ರಮವು ಸಂಪೂರ್ಣವಾಗಿ ಕೇಂದ್ರ ಸರ್ಕಾರ ಪ್ರಾಯೋಜಿತ ಕಾರ್ಯಕ್ರಮವಾಗಿ ಜಾರಿಗೆ ಬರುತ್ತಿದೆ. 2. ಈ ಕಾರ್ಯಕ್ರಮವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಪ್ರಾಯೋಜಿತ ಕಾರ್ಯಕ್ರಮವಾಗಿ ಜಾರಿಗೆ ಬರುತ್ತಿದೆ. 3. ಕಾರ್ಯಕ್ರಮದಡಿಯಲ್ಲಿ ಕೇಂದ್ರ ಮಟ್ಟದ ಮಂಡಳಿಯನ್ನು ಸ್ಥಾಪಿಸಲಾಗಿದೆ. ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ ಎ. 1 ಮಾತ್ರ ಬಿ. 2 ಮಾತ್ರ ಸಿ. 3 ಮಾತ್ರ ಡಿ. 1 ಮತ್ತು 2 ಉತ್ತರ : ಎ 14) ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಕಾರ್ಯಕ್ರಮಕ್ಕೆ ಕೆಳಗಿನ ಯಾವ ಅಂತರರಾಷ್ಟ್ರೀಯ ಸಂಸ್ಥೆಗಳು ಹಣಕಾಸಿನ ನೆರವನ್ನು ಕಲ್ಪಿಸುತ್ತಿವೆ? ಎ. ಅಂತರರಾಷ್ಟ್ರೀಯ ಹಣಕಾಸು ನಿಧಿ. ಬಿ. ವಿಶ್ವಬ್ಯಾಂಕ್. ಸಿ. ಅಂತರರಾಷ್ಟ್ರೀಯ ಕೃಷಿ ಸಂಘಟನೆ. ಡಿ. ಜಪಾನ್ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ. ಉತ್ತರ : ಡಿ 15. ಕೆಳಗಿನ ಯಾವ ಸಂಸ್ಥೆಗಳು ಮತ್ತು ವ್ಯಕ್ತಿಗಳು ಕೇಂದ್ರ ಸರ್ಕಾರದ ದೀಕ್ಷಾ ಪೋರ್ಟಲ್ ಬಳಕೆಗೆ ಅರ್ಹರಾಗಿರುತ್ತಾರೆ? 1. ಶಿಕ್ಷಕರು 2. ಸರ್ಕಾರಿ ಸಂಸ್ಥೆಗಳು 3. ಖಾಸಗಿ ಸಂಸ್ಥೆಗಳು 4. ಸರ್ಕಾರೇತರ ಸಂಸ್ಥೆಗಳು ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ ಎ. 1, 2 ಮತ್ತು 3 ಬಿ. 1 ಮತ್ತು 3 ಸಿ. 2 ಮತ್ತು 4 ಡಿ. 3 ಮಾತ್ರ ಉತ್ತರ: ಎ 16. ಇತ್ತೀಚೆಗೆ ಕೇಂದ್ರ ಶಿಕ್ಷಣ ಸಚಿವರು ಅಖಿಲ ಭಾರತೀಯ ಶಿಕ್ಷ ಸಮಾಗಮದ ಅಂಗವಾಗಿ ಯಾವ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದ್ದಾರೆ? ಎ. ದೀಕ್ಷಾ ಬಿ. ರಾಷ್ಟ್ರೀಯ ಕಲಿಕಾ ಕಾರ್ಯಕ್ರಮ ಸಿ. ಉಲ್ಲಾಸ್ ಡಿ. ಮನಸ್ ಉತ್ತರ: ಸಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.