ಸ್ಪರ್ಧಾವಾಣಿ: ಭಾರತ- ತಾಂಜಾನಿಯ ಸಂಬಂಧಗಳು ಯಪಿಎಸ್‌ಸಿ -ಪ್ರಿಲಿಮ್ಸ್, ಕೆಪಿಎಸ್‌ಸಿ –ಪ್ರಿಲಿಮ್ಸ್ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ರಾಷ್ಟ್ರೀಯ ಪ್ರಚಲಿತ ವಿದ್ಯಮಾನ ಕುರಿತ ಮಾಹಿತಿ ಇಲ್ಲಿದೆ. ಭಾರತ- ತಾಂಜಾನಿಯ ಸಂಬಂಧಗಳು ಸುದ್ದಿಯಲ್ಲಿರುವ ಕಾರಣ? ಇತ್ತೀಚೆಗೆ ನವದೆಹಲಿಯಲ್ಲಿ ಭಾರತ–ತಾಂಜಾನಿಯ ಹೂಡಿಕೆ ವೇದಿಕೆಯ ಸಮಾವೇಶವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ತಂಜಾನಿಯದ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದರು ಮತ್ತು ಭಾರತ ಮತ್ತು ತಂಜಾನಿಯ ರಾಷ್ಟ್ರಗಳು ದ್ವಿಪಕ್ಷೀಯ ಸಂಬಂಧಗಳನ್ನು ಕಾರ್ಯತಂತ್ರದ ಸಹಭಾಗಿತ್ವ ಮಟ್ಟಕ್ಕೆ ಬದಲಾಯಿಸಿಕೊಂಡಿತು. ತಂಜಾನಿಯ ಅಧ್ಯಕ್ಷರ ಭೇಟಿಯ ಸಂದರ್ಭದಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳು * ಎರಡು ರಾಷ್ಟ್ರಗಳು ವಿವಿಧ ವಲಯಗಳಲ್ಲಿ ಸಹಕಾರವನ್ನು ಮತ್ತಷ್ಟು ಸಬಲೀಕರಣಗೊಳಿಸಲು 6 ಒಪ್ಪಂದಗಳಿಗೆ ಸಹಿ ಹಾಕಿದ್ದು ಮುಂದಿನ ದಿನಗಳಲ್ಲಿ ಎರಡು ರಾಷ್ಟ್ರಗಳು ಡಿಜಿಟಲ್ ವಲಯ, ಸಾಂಸ್ಕೃತಿಕ ವಲಯ, ಕ್ರೀಡಾ ವಲಯ, ಸಮುದ್ರಯಾನ ಕೈಗಾರಿಕೆಗಳು, ಪರಸ್ಪರ ಮಾಹಿತಿಯ ಹಂಚಿಕೆ ಮತ್ತು ಶ್ವೇತ ಹಡಗು ಯಾನ ವಲಯದಲ್ಲಿ ಜಂಟಿಯಾಗಿ ಕಾರ್ಯನಿರ್ವಹಿಸಲು ಮುಂದಾಗಿವೆ. ಶ್ವೇತ ಹಡಗು ಯಾನ ಒಪ್ಪಂದ * ಸಮುದ್ರದಲ್ಲಿ ಮಿಲಿಟರಿಯೇತರ ವಾಣಿಜ್ಯ ವಾಹನಗಳು ಸರಕು ಸಾಮಾಗ್ರಿಗಳನ್ನು ಹೊತ್ತು ಸಂಚರಿಸುತ್ತವೆ. ಇವುಗಳಿಗೆ ಸಂಬಂಧಿಸಿದಂತೆ ಎರಡು ರಾಷ್ಟ್ರಗಳ ನಡುವೆ ಮಾಹಿತಿಯನ್ನು ಸಂಪೂರ್ಣವಾಗಿ ಹಂಚಿಕೊಳ್ಳಲಾಗುತ್ತದೆ. ಹಡಗು ಯಾನ ವಲಯದಲ್ಲಿ ಹಡಗುಗಳನ್ನು ಮೂರು ವರ್ಣಗಳಾಗಿ ವಿಂಗಡಿಸಲಾಗುತ್ತದೆ. ಶ್ವೇತ ವರ್ಣದ ಹಡಗುಗಳು ಎಂದರೆ ವಾಣಿಜ್ಯ ಹಡಗುಗಳು, ಬೂದು ಬಣ್ಣದ ಹಡಗುಗಳು ಎಂದರೆ ಮಿಲಿಟರಿ ಹಡಗುಗಳು ಮತ್ತು ಕಪ್ಪುವರ್ಣದ ಹಡಗುಗಳು ಎಂದರೆ ಅಕ್ರಮವಾಗಿ ಸಂಚರಿಸುತ್ತಿರುವ ಹಡಗುಗಳು ಎಂದು ವರ್ಗೀಕರಿಸಲಾಗುತ್ತದೆ. * ಸರಕುಗಳ ಸಾಗಾಣಿಕೆಗೆ ಸಂಬಂಧಿಸಿದಂತೆ ವಾಣಿಜ್ಯ ಸ್ವರೂಪದ ಹಡಗುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಕ್ತವಾಗಿ ಸಂಚರಿಸುವ ಅವಕಾಶವನ್ನು ಹೊಂದಿರುತ್ತವೆ. ಇವುಗಳಿಗೆ ಸಂಬಂಧಿಸಿದಂತೆ ಪರಸ್ಪರ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಎರಡು ರಾಷ್ಟ್ರಗಳು ಸಹಮತವನ್ನು ಸೂಚಿಸಿದೆ. ವ್ಯಾಪಾರಿ ವಲಯದಲ್ಲಿ ಎರಡು ರಾಷ್ಟ್ರಗಳ ನಡುವಿನ ಮುಕ್ತ ವ್ಯಾಪಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಭಾರತೀಯ ರೂಪಾಯಿ ಮತ್ತು ತಾಂಜಾನಿಯಾದ ಶಿಲ್ಲಿಂಗ್ ನಲ್ಲಿ ರಫ್ತು ಮತ್ತು ಆಮದನ್ನು ನಡೆಸಲು ಎರಡು ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲ ಬ್ಯಾಂಕುಗಳಿಗೆ ಅಧಿಕೃತವಾಗಿ ಒಪ್ಪಿಗೆಯನ್ನು ನೀಡಲು ಭಾರತ ಮತ್ತು ತಂಜಾನಿಯ ಒಪ್ಪಿಕೊಂಡಿದೆ. ರಕ್ಷಣಾ ವಲಯದಲ್ಲಿ ಐದು ವರ್ಷಗಳ ಅಧಿಕೃತ ಕಾರ್ಯಸೂಚಿಯನ್ನು ಜಾರಿಗೆ ತಂದಿದ್ದು ಎರಡು ರಾಷ್ಟ್ರಗಳ ನಡುವಿನ ಮಿಲಿಟರಿ ತರಬೇತಿ, ಸಮುದ್ರಯಾನ ಸಮನ್ವಯತೆ, ಸಾಮರ್ಥ್ಯ ಅಭಿವೃದ್ಧಿ ರಕ್ಷಣಾ ವಲಯದ ಉತ್ಪನ್ನಗಳ ಉತ್ಪಾದನೆಗೆ ಸಂಬಂಧಿಸಿದಂತೆ ಜಂಟಿಯಾಗಿ ಕಾರ್ಯನಿರ್ವಹಿಸಲು ಎರಡು ರಾಷ್ಟ್ರಗಳು ಮುಂದಾಗಿವೆ. * ಇದೇ ಸಂದರ್ಭದಲ್ಲಿ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ತಾಂಜಾನಿಯಾದ ಅಧ್ಯಕ್ಷರಾದ “ಸಮಯ್ಯ ಸುಳುಹು ಹಸನ್” ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿತು. ಎರಡು ರಾಷ್ಟ್ರಗಳ ನಡುವೆ ಆರ್ಥಿಕ ಮತ್ತು ರಾಜತಾಂತ್ರಿಕ ಸಹಭಾಗಿತ್ವ, ಪ್ರಾದೇಶಿಕ ಸಮನ್ವಯತೆ ಮತ್ತು ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಮುಖ ಪಾತ್ರವನ್ನು ಇವರು ವಹಿಸಿದ್ದರು. ಈ ಕಾರಣಕ್ಕಾಗಿ ಇವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಸನ್ಮಾನಿಸಲಾಯಿತು. ತಾಂಜಾನಿಯ ಸಂಬಂಧಿತ ಮಾಹಿತಿ * ಪೂರ್ವ ಆಫ್ರಿಕಾದ ಅತಿದೊಡ್ಡ ರಾಷ್ಟ್ರ ಮತ್ತು ಅತಿ ಹೆಚ್ಚು ನೆರೆಹೊರೆ ರಾಷ್ಟ್ರಗಳನ್ನು ಹೊಂದಿರುವ ಪ್ರಪಂಚದ 10 ರಾಷ್ಟ್ರಗಳಲ್ಲಿ ತಾಂಜಾನಿಯಾ ಕೂಡ ಒಂದಾಗಿದ್ದು, ಸರಿಸುಮಾರು ಎಂಟು ರಾಷ್ಟ್ರಗಳೊಂದಿಗೆ ತನ್ನ ಗಡಿರೇಖೆಯನ್ನು ಹಂಚಿಕೊಂಡಿದೆ. ತಾಂಜಾನಿಯಾದೊಂದಿಗೆ ಗಡಿರೇಖೆ ಹೊಂದಿರುವ ರಾಷ್ಟ್ರಗಳು- ಉಗಾಂಡ, ಕೀನ್ಯಾ, ರವಾಂಡ, ಬುರುಂಡಿ, ಜಾಂಬಿಯ, ಮಲಾವಿ, ಮಾಜಾಂಬಿಕ್ ಮತ್ತು ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋ. * ತಾಂಜಾನಿಯಾದ ರಾಜಧಾನಿ - ದಾರಾ-ಉಸ್‌-ಸಲಾಂ ಆದರೆ ಶಾಸಕಾಂಗದ ರಾಜಧಾನಿಯಾಗಿ ದೊಡೋಮ ಕಾರ್ಯನಿರ್ವಹಿಸುತ್ತದೆ. ತಾಂಜಾನಿಯಾದ ಉತ್ತರ ಭಾಗದಲ್ಲಿ ವಿಕ್ಟೋರಿಯಾ ಸರೋವರ, ಪಶ್ಚಿಮ ಭಾಗದಲ್ಲಿ ಟಾಂಗಾನಿಕ ಸರೋವರ ಮತ್ತು ದಕ್ಷಿಣ ಭಾಗದಲ್ಲಿ ನ್ಯಾಸ ಸರೋವರದಿಂದ ಆವೃತವಾಗಿದ್ದು ಪೂರ್ವಭಾಗದಲ್ಲಿ ಹಿಂದೂ ಮಹಾಸಾಗರ ದಿಂದ ಆವೃತವಾಗಿದೆ. * ತಾಂಜಾನಿಯಾಗೆ ಭಾರತದ ಪ್ರಮುಖ ರಫ್ತುಗಳು- ಪೆಟ್ರೋಲಿಯಂ ಉತ್ಪನ್ನ, ಔಷಧ ಉತ್ಪನ್ನಗಳು, ಯಂತ್ರೋಪಕರಣ, ಅಣುಸ್ಥಾವರ, ವಿದ್ಯುನ್ಮಾನ ಉಪಕರಣಗಳು, ಸಕ್ಕರೆ ಮತ್ತು ಸಿಹಿ ತಿನಿಸುಗಳು. ಭಾರತಕ್ಕೆ ತಾಂಜಾನಿಯಾ ರಫ್ತುಗಳು- ಚಿನ್ನದ ಅದಿರು, ಗೋಡಂಬಿ, ಏಲಕ್ಕಿ ಮತ್ತು ಇತರೆ ಉತ್ಪನ್ನಗಳನ್ನು ರಫ್ತು ಮಾಡುತ್ತದೆ. ಭಾರತದ ಕೊಡುಗೆಗಳು * ತಾಂಜಾನಿಯಾದ, ಜಂಜಿಬಾರ್ ನಲ್ಲಿ ಭಾರತದ ಐ.ಐ.ಟಿ. ಮದ್ರಾಸ್ ಶೈಕ್ಷಣಿಕ ಸಂಸ್ಥೆಯು ತನ್ನ ಮೊಟ್ಟ ಮೊದಲ ಸಾಗರೋತ್ತರ ಶೈಕ್ಷಣಿಕ ಸಂಸ್ಥೆಯನ್ನು ಸ್ಥಾಪಿಸಿದೆ. * 2023 ರಲ್ಲಿ ಭಾರತ ಸರ್ಕಾರ 10 ಅಂಬುಲೆನ್ಸ್ ಗಳನ್ನು ತಾಂಜಾನಿಯಾಗೆ ಉಡುಗೊರೆಯಾಗಿ ನೀಡಿತು. * 2018,2020 ಮತ್ತು 2021 ರಲ್ಲಿ ಭಾರತ ತಾಂಜಾನಿಯಾಗೆ ಅವಶ್ಯಕ ಔಷಧಿಗಳನ್ನು ಉಡುಗೊರೆಯಾಗಿ ನೀಡಿದೆ. * ತಾಂಜಾನಿಯಾದಲ್ಲಿ ಭಾರತ ಸರ್ಕಾರದ ವತಿಯಿಂದ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ತಂತ್ರಜ್ಞಾನದ ಎರಡು ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಈ ಸ್ಥಳದಲ್ಲಿ ಭಾರತದಲ್ಲಿನ ಸೂಪರ್ ಕಂಪ್ಯೂಟರ್ "ಪರಂ" ಅನ್ನು ಅನುಷ್ಠಾನಗೊಳಿಸಿದೆ. * ತಾಂಜಾನಿಯಾದ ದ್ವಿತೀಯ ಹಂತದ ಶಿಕ್ಷಣ ಸಂಸ್ಥೆಗಳಿಗೆ ಗಣಿತ ಮತ್ತು ವಿಜ್ಞಾನದ ಎನ್.ಸಿ.ಇ.ಆರ್.ಟಿ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದೆ. ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆಯನ್ನು ನೀಡುವ ಉದ್ದೇಶದಿಂದ ಕ್ಯಾನ್ಸರ್ ಆಸ್ಪತ್ರೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.