ಮಹೀಂದ್ರಾ ಫೈನಾನ್ಸ್ ಸಕ್ಷಮ್ ಸ್ಕಾಲರ್‌ಶಿಪ್: ಚಾಲಕರ ಮಕ್ಕಳಿಗೆ ಸಹಾಯ ವಿವರ: ಮಹೀಂದ್ರಾ ಫೈನಾನ್ಸ್ ಸಕ್ಷಮ್ ಸ್ಕಾಲರ್‌ಶಿಪ್ ಯೋಜನಯಡಿ ಚಾಲಕರ ಮಕ್ಕಳಿಂದ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನಿಸಿದೆ. 1ನೇ ತರಗತಿಯಿಂದ ಸ್ನಾತಕೋತ್ತರ ಹಂತದವರೆಗೆ ಓದುತ್ತಿರುವ ಅವಕಾಶ ವಂಚಿತ ಮಕ್ಕಳಿಗೆ ಪ್ರಾಮುಖ್ಯ ನೀಡಲಾಗುವುದು. ಅರ್ಹತೆ: ವಿದ್ಯಾರ್ಥಿಗಳು ಕರ್ನಾಟಕ, ಆಂಧ್ರಪ್ರದೇಶ, ತಮಿಳನಾಡು, ತೆಲಂಗಾಣ ಪ್ರದೇಶ ವ್ಯಾಪ್ತಿಯಲ್ಲಿರಬೇಕು. ಚಾಲನಾ ಪರವಾನಗಿ ಹೊಂದಿರುವ ಚಾಲಕರ (ಎಲ್ಲಾ ಲಘು ಮೋಟಾರು ವಾಹನಗಳು ಮತ್ತು ಟ್ಯಾಕ್ಸಿ, ಜೀಪ್, ಕಾರು ಮತ್ತು ಪಿಕಪ್, ಮ್ಯಾಜಿಕ್, ಸ್ಕೂಲ್ ವ್ಯಾನ್ ಇತ್ಯಾದಿ ಡೆಲಿವರಿ ವ್ಯಾನ್‌ಗಳಂತಹ ಸಣ್ಣ ವಾಣಿಜ್ಯ ವಾಹನ ಚಾಲಕರ ಮಕ್ಕಳು ಅರ್ಜಿ ಸಲ್ಲಿಸಬಹುದು. ಶೇ 60 ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ₹ 3,00,000 ಕ್ಕಿಂತ ಹೆಚ್ಚಿರಬಾರದು. ಪೋಷಕರಲ್ಲಿ ಒಬ್ಬರು ಚಾಲಕರಾಗಿರಬೇಕು . ಆರ್ಥಿಕ ಸಹಾಯ: ವರ್ಷಕ್ಕೆ ₹ 5,000 ರಿಂದ ₹. 20,000 ವರೆಗಿನ ವಿದ್ಯಾರ್ಥಿವೇತನ ಅರ್ಜಿ ಸಲ್ಲಿಸಲು ಕೊನೆ ದಿನ: 30-10-2023 ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌ ಅರ್ಜಿ ಹಾಕಿ. ಹೆಚ್ಚಿನ ಮಾಹಿತಿಗೆ: : .b4s.//SKSP5 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.