ವಿದ್ಯಾರ್ಥಿ ವೇತನ ಕೈಪಿಡಿ: ಡಿಎಕ್ಸ್‌ಸಿ ಪ್ರೊಗ್ರೆಸ್ಸಿಂಗ್‌ ಮೈಂಡ್ಸ್‌ ಡಿಎಕ್ಸ್‌ಸಿ ಪ್ರೊಗ್ರೆಸ್ಸಿಂಗ್‌ ಮೈಂಡ್ಸ್‌ ವಿವರ ಡಿಎಕ್ಸ್‌ಸಿ ಪ್ರೊಗ್ರೆಸ್ಸಿಂಗ್‌ ಮೈಂಡ್ಸ್‌ ವಿದ್ಯಾರ್ಥಿವೇತನವು ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳ ಶೈಕ್ಷಣಿಕ/ಕ್ರೀಡಾ ವೆಚ್ಚಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ. ಅರ್ಹತೆ ಸ್ಟೆಮ್‌–ಸಂಬಂದಿತ ಕ್ಷೇತ್ರಗಳಲ್ಲಿ (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌, ಗಣಿತ) ಯಾವುದೇ ವರ್ಷದ ಪದವಿ ಪಡೆಯುತ್ತಿರುವ ಹುಡುಗಿಯರು ಮತ್ತು ಮಂಗಳಮುಖಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. 13 ರಿಂದ 25 ವರ್ಷ ವಯಸ್ಸಿನೊಳಗಿನ ಮತ್ತು ಕಳೆದ 2/3 ವರ್ಷಗಳಲ್ಲಿ ರಾಜ್ಯ/ರಾಷ್ಟ್ರೀಯ/ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ/ದೇಶವನ್ನು ಪ್ರತಿನಿಧಿಸಿರುವ ಮಹಿಳಾ ಕ್ರೀಡಾಪಟುಗಳೂ ಅರ್ಜಿ ಸಲ್ಲಿಸಬಹುದು. ಪದವಿ ವಿದ್ಯಾಭ್ಯಾಸ ಪಡೆಯುವ ವಿದ್ಯಾರ್ಥಿಗಳಾದರೆ, ಅವರು ತಮ್ಮ ಹಿಂದಿನ ತರಗತಿ/ ಸೆಮಿಸ್ಟರ್‌ನಲ್ಲಿ ಕನಿಷ್ಠ ಶೇ 60 ಅಂಕಗಳನ್ನು ಪಡೆದಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ₹4,00,000 (ಕ್ರೀಡಾಪಟುಗಳಿಗೆ ₹5,00,000) ಕ್ಕಿಂತ ಕಡಿಮೆ ಅಥವಾ ಸಮನಾಗಿರಬೇಕು. ಆರ್ಥಿಕ ಸಹಾಯ ಪದವಿಗೆ - ₹50,000 ಕ್ರೀಡಾಪಟುಗಳಿಗೆ - ₹1,25,000 ಅರ್ಜಿ ಸಲ್ಲಿಸಲು ಕೊನೆ ದಿನ : 31-10-2023 ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ. ಹೆಚ್ಚಿನ ಮಾಹಿತಿಗೆ: : .b4s.//DXCS2 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.