ವಿದ್ಯಾರ್ಥಿ ವೇತನ ಕೈಪಿಡಿ: ನೆಹರೂ ಟ್ರಸ್ಟ್‌ನ ಯುಕೆ ಟ್ರಾವೆಲ್ ಅವಾರ್ಡ್ಸ್ ನೆಹರೂ ಟ್ರಸ್ಟ್‌ನ ಯುಕೆ ಟ್ರಾವೆಲ್ ಅವಾರ್ಡ್ಸ್ ವಿವರ: ವಿಕ್ಟೋರಿಯಾ ಮತ್ತು ಆಲ್ಬರ್ಟ್‌ ಮ್ಯೂಸಿಯಂ (ಎನ್‌ಟಿಐಸಿವಿಎ) ಯಲ್ಲಿನ ನೆಹರೂ ಟ್ರಸ್ಟ್ ನೀಡುವ ಯುಕೆ ಟ್ರಾವೆಲ್ ಅವಾರ್ಡ್ಸ್ ಇದಾಗಿದೆ. ಯುಕೆಗೆ ಅಲ್ಪಕಾಲದಲ್ಲಿ ಭೇಟಿ ನೀಡಿ, ಸಾಂಸ್ಕೃತಿಕ ವಿನಿಯಮಕ್ಕೆ ಸಂಬಂಧಪಟ್ಟ ಸಂಶೋಧನೆ ಮಾಡಲು ಈ ಟ್ರಸ್ಟ್‌ ಅವಕಾಶ ನೀಡುತ್ತದೆ. ಅರ್ಹತೆ: ಭಾರತದ ಕಲೆ ಮತ್ತು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ, ಅಧ್ಯಯನ ಮತ್ತು ಪ್ರದರ್ಶನಕ್ಕೆ ಸಂಬಂಧಿಸಿದ ವಸ್ತುಸಂಗ್ರಹಾಲಯಗಳು, ಗ್ಯಾಲರಿಗಳು, ವಿಶ್ವವಿದ್ಯಾಲಯಗಳು ಅಥವಾ ಇತರ ನಿರ್ದಿಷ್ಟ ಸಂಸ್ಥೆಗಳಲ್ಲಿ ಕೆಲಸ ಮಾಡುವ ವಿದ್ವಾಂಸರು ಅಥವಾ ವೃತ್ತಿಪರ ಭಾರತೀಯ ನಾಗರಿಕರಿಗೆ ಈ ಮುಕ್ತವಾಗಿದೆ. ಆರ್ಥಿಕ ಸಹಾಯ: £1,000 ವರೆಗೆ (ಒಂದು ಬಾರಿ) ಅರ್ಜಿ ಸಲ್ಲಿಸಲು ಕೊನೆ ದಿನ: 15-02-2024 ಅರ್ಜಿ ಸಲ್ಲಿಸುವ ವಿಧಾನ: ಇಮೇಲ್ ಅಥವಾ ಪೋಸ್ಟ್ ಮೂಲಕ: ಕಾರ್ಯದರ್ಶಿ ನೆಹರೂ ಟ್ರಸ್ಟ್ ದಿ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಎಸ್ತೆಟಿಕ್ಸ್ ಎಸ್‌ಎಸ್‌ಎ ಬಿಲ್ಡಿಂಗ್ , ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ನವದೆಹಲಿ - 110067 ಭಾರತ; ಇಮೇಲ್ ಐಡಿ: @. ಮಾಹಿತಿಗೆ: : .b4s.//NUT1 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.