ವಿದ್ಯಾರ್ಥಿ ವೇತನ ಕೈಪಿಡಿ: ಅಮೆಜಾನ್ ಫ್ಯೂಚರ್ ಎಂಜಿನಿಯರ್‌ ವಿದ್ಯಾರ್ಥಿ ವೇತನ ಕೈಪಿಡಿ: ಅಮೆಜಾನ್ ಫ್ಯೂಚರ್ ಎಂಜಿನಿಯರ್‌ ವಿವರ: ಅಮೆಜಾನ್ ಪ್ರಸ್ತುತ ಕಂಪ್ಯೂಟರ್ ವಿಜ್ಞಾನ, ಐಟಿ ಮತ್ತು ಇತರ ಸಂಬಂಧಿತ ಶಾಖೆಗಳಲ್ಲಿ ಕೋರ್ಸ್‌ಗಳು ಮಾಡುತ್ತಿರುವ ಮೊದಲ ವರ್ಷದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತದೆ. ಈ ವಿದ್ಯಾರ್ಥಿವೇತನವು ಭಾರತದಲ್ಲಿನ ಯುವತಿಯರಿಗೆ ಕಂಪ್ಯೂಟರ್ ವಿಜ್ಞಾನ ಕಲಿಕೆ ಮತ್ತು ವೃತ್ತಿ ಅವಕಾಶಗಳಿಗೆ ಪ್ರವೇಶವನ್ನು ಸಕ್ರಿಯಗೊಳಿಸುವ ಗುರಿಯನ್ನು ಹೊಂದಿದೆ. ಅರ್ಹತೆ: ಬಿ.ಇ. / ಬಿ. ಟೆಕ್ ಓದುತ್ತಿರುವ ಭಾರತೀಯ ವಿದ್ಯಾರ್ಥಿನಿಯರು. ಕುಟುಂಬದ ವಾರ್ಷಿಕ ಆದಾಯ ₹ 3,00,000 ಕ್ಕಿಂತ ಕಡಿಮೆ. ರಾಜ್ಯ ಅಥವಾ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯ ಮೂಲಕ ಪ್ರವೇಶವನ್ನು ತೆಗೆದುಕೊಳ್ಳಬೇಕು. ಆರ್ಥಿಕ ನೆರವು: ಪದವಿ ಪಡೆಯುವವರೆಗೂ ವರ್ಷಕ್ಕೆ₹ 50,000 ಅರ್ಜಿ ಸಲ್ಲಿಸಲು ಕೊನೆ ದಿನ: 31-12-2023 ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌ನಲ್ಲಿ ಮಾಹಿತಿಗೆ: : .b4s.//AFES1 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.