, : ಬಹು ಆಯ್ಕೆಯ ಪ್ರಶ್ನೆಗಳು ಸಂವಿಧಾನ 1. ರಾಜ್ಯದ ಮುಖ್ಯಮಂತ್ರಿಗಳನ್ನು ಈ ಕೆಳಗಿನ ಯಾರು ನೇಮಕ ಮಾಡುತ್ತಾರೆ ? ಎ) ಪ್ರಧಾನಿ ಬಿ) ರಾಷ್ಟ್ರಪತಿ ಸಿ) ರಾಜ್ಯಪಾಲ ಡಿ) ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರು ಉತ್ತರ : ಸಿ 2.ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ ? ಎ ) ರಾಜ್ಯ ಸರ್ಕಾರದ ಕಾರ್ಯಾಂಗೀಯ ಅಧಿಕಾರಗಳು ರಾಜ್ಯಪಾಲರ ಹೆಸರಿನಲ್ಲಿ ನಡೆಯುತ್ತವೆ. ಬಿ ) ಆದರೆ ನೈಜ ಕಾರ್ಯಾಂಗ ಮಾತ್ರ ಮುಖ್ಯಮಂತ್ರಿಗಳೇ ಆಗಿರುತ್ತಾರೆ. ಸಿ) ರಾಜ್ಯ ಸರ್ಕಾರದ ಸಾಂವಿಧಾನಿಕ ಮುಖ್ಯಸ್ಥರು ರಾಜ್ಯಪಾಲರಾಗಿರುತ್ತಾರೆ. ಡಿ) ಆದರೆ ನೈಜ ಮುಖ್ಯಸ್ಥರು ಮುಖ್ಯಮಂತ್ರಿಗಳೇ ಆಗಿರುತ್ತಾರೆ. 1) ಹೇಳಿಕೆ ಎ,ಬಿ ಸರಿಯಾಗಿದೆ ಆದರೆ ಸಿ,ಡಿ ತಪ್ಪಾಗಿದೆ 2 )ಹೇಳಿಕೆ ಎ,ಬಿ, ಸಿ ಸರಿಯಾಗಿದೆ ಆದರೆ ಡಿ ತಪ್ಪಾಗಿದೆ. 3 )ಎಲ್ಲಾ ಹೇಳಿಕೆಗಳು ತಪ್ಪಾಗಿವೆ. 4 ) ಎಲ್ಲಾ ಹೇಳಿಕೆಗಳು ಸರಿಯಾಗಿದೆ. ಉತ್ತರ : 4 3. ಭಾರತದ ಸರ್ವೋಚ್ಛ ನ್ಯಾಯಾಲಯವು ಪ್ರಥಮವಾಗಿ ಎಲ್ಲಿ ಸ್ಥಾಪಿತವಾಯಿತು ? ಎ ) ದೆಹಲಿ ಬಿ )ಕೋಲ್ಕತ್ತಾ ಸಿ )ಮದ್ರಾಸ್ ಡಿ ) ಉತ್ತರಾಖಂಡ್ ಉತ್ತರ : ಬಿ 4. ಬಂಗಾಳದ ಮೊದಲ ಗವರ್ನರ್ ಜನರಲ್ ಯಾರಾಗಿದ್ದರು ? ಎ ) ವಾರನ್ ಹೇಸ್ಟಿಂಗ್ಸ್ ಬಿ ) ಲಾರ್ಡ್ ಮೆಕಾಲೆ ಸಿ ) ರಾಬರ್ಟ್ ಕ್ಲೈವ್ ಡಿ ) ಲಾರ್ಡ್ ವಿಲಿಯಂ ಬೆಂಟಿಂಕ್ ಉತ್ತರ : ಎ 5 .ಈ ಕೆಳಗಿನ ಯಾವ ಕಾಯ್ದೆಯ ಮೂಲಕ ಭಾರತದಲ್ಲಿದ್ದ ಈಸ್ಟ್ ಇಂಡಿಯಾ ಕಂಪನಿಯ ಭೂಪ್ರದೇಶಗಳನ್ನು ಪ್ರಪ್ರಥಮವಾಗಿ ಬ್ರಿಟಿಷ್ ಸ್ವಾಮ್ಯಕ್ಕೆ ಒಳಪಟ್ಟ ಪ್ರದೇಶಗಳೆಂದು ಕರೆಯಲಾಯಿತು ? ಎ ) ರೆಗ್ಯುಲೇಟಿಂಗ್ ಕಾಯ್ದೆ 1773 ಬಿ ) ಪಿಟ್ಸ್ ಇಂಡಿಯಾ ಕಾಯ್ದೆ 1784 ಸಿ) ಮಿಂಟೋ ಮಾರ್ಲೆ ಕಾಯಿದೆ 1919 ಡಿ ) 1857 ರ ಭಾರತ ಸರಕಾರದ ಶಾಸನ ಉತ್ತರ: ಬಿ 6. ಈ ಕೆಳಗಿನ ಯಾವ ಕಾಯ್ದೆಯ ಮೂಲಕ ಬ್ರಿಟಿಷ್ ಸರಕಾರವು ಪ್ರಪ್ರಥಮ ಬಾರಿಗೆ ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ವ್ಯವಹಾರಗಳನ್ನು ನಿಯಂತ್ರಿಸಲು ಆರಂಭಿಸಿತು? ಎ) ಮಿಂಟೋ ಮಾರ್ಲೆ ಕಾಯಿದೆ 1919 ಬಿ) ರೆಗ್ಯುಲೇಟಿಂಗ್ ಕಾಯ್ದೆ 1773 ಸಿ ) ಪಿಟ್ಸ್ ಇಂಡಿಯಾ ಕಾಯ್ದೆ 1784 ಡಿ ) 1853ರ ಭಾರತ ಸರ್ಕಾರದ ಶಾಸನ ಉತ್ತರ :ಬಿ 7. ಸರಕಾರಿ ಸೇವೆಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಜಾರಿಗೆ ತಂದ ಶಾಸನ ಯಾವುದು ? ಎ) ಚಾರ್ಟರ್‌ ಕಾಯಿದೆ 1853 ಬಿ) ರೆಗ್ಯುಲೇಟಿಂಗ್ ಕಾಯಿದೆ 1773 ಸಿ )ಮಿಂಟೋ ಮಾರ್ಲೆ ಶಾಸನ 1919 ಡಿ ) 1935ರ ಭಾರತ ಸರ್ಕಾರದ ಕಾಯ್ದೆ ಉತ್ತರ:ಎ 8. ಈ ಕೆಳಗಿನ ಯಾವ ಕಾಯ್ದೆ ಮೂಲಕ ಭಾರತದಲ್ಲಿ ಚುನಾವಣಾ ಪದ್ಧತಿಯ ಆರಂಭಕ್ಕೆ ನಾಂದಿ ಹಾಡಲಾಯಿತು ? ಎ. ಭಾರತ ಸರ್ಕಾರ ಕಾಯ್ದೆ 1858 ಬಿ. ಭಾರತದ ಕೌನ್ಸಿಲ್ ಕಾಯ್ದೆ1861 ಸಿ. ಭಾರತದ ಕೌನ್ಸಿಲ್ ಕಾಯ್ದೆ 1892 ಡಿ. ಭಾರತದ ಕೌನ್ಸಿಲ್ ಕಾಯ್ದೆ 1909 ಉತ್ತರ :ಸಿ 9. ಈ ಕೆಳಗಿನ ಯಾವ ಕಾಯ್ದೆಯನ್ನು ಮಾರ್ಲೆ ಮಿಂಟೋ ಸುಧಾರಣೆಗಳು ಎನ್ನುತ್ತಾರೆ ? ಎ. ಭಾರತದ ಕೌನ್ಸಿಲ್ ಕಾಯ್ದೆ 1892 ಬಿ.ಭಾರತ ಸರ್ಕಾರ ಕಾಯ್ದೆ 1919 ಸಿ. ಭಾರತದಸರ್ಕಾರ ಕಾಯ್ದೆ 1935 ಡಿ. ಭಾರತದ ಕೌನ್ಸಿಲ್ ಕಾಯ್ದೆ 1909 ಉತ್ತರ :ಡಿ 10.ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ? ಎ. ಭಾರತ ಕೌನ್ಸಿಲ್ ಕಾಯ್ದೆ 1909 ಅನ್ನು ಮಾರ್ಲೆ ಮಿಂಟೋ ಸುಧಾರಣೆಗಳು ಎಂದು ಹೇಳುತ್ತಾರೆ. ಬಿ. ಈ ಕಾಯ್ದೆ ಜಾರಿಗೆ ಬಂದ ಸಂದರ್ಭದಲ್ಲಿ ಲಾರ್ಡ್ ಮಾರ್ಲೆ ಭಾರತದ ಕಾರ್ಯದರ್ಶಿ ಯಾಗಿದ್ದರು ಮತ್ತು ಲಾರ್ಡ್ ಮಿಂಟೋ ಭಾರತದ ವೈಸ್‌ರಾಯ್ ಆಗಿದ್ದರು. 1. ಹೇಳಿಕೆ ಎ ಸರಿಯಾಗಿದೆ ಬಿ ತಪ್ಪಾಗಿದೆ. 2.ಹೇಳಿಕೆ ಬಿ ಸರಿಯಾಗಿದೆ ಎ ತಪ್ಪಾಗಿದೆ. 3. ಎರಡೂ ಹೇಳಿಕೆಗಳು ತಪ್ಪಾಗಿವೆ 4. ಎರಡೂ ಹೇಳಿಕೆಗಳು ಸರಿಯಾಗಿವೆ. ಉತ್ತರ : 4 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.