ವಿದ್ಯಾರ್ಥಿ ವೇತನ: ಎಟಿಐಎನ್‌ಎಫ್‌–2023 ಎಟಿಐಎನ್‌ಎಫ್‌–2023 ಅಬ್ದುಲ್‌ ಕಲಾಂ ಟೆಕ್ನಾಲಜಿ ಇನ್ನೋವೇಷನ್‌ ನ್ಯಾಷನಲ್‌ ಫೆಲೊಷಿಪ್‌–2023(ಎಟಿಐಎನ್‌ಎಫ್‌), – ಇದು ಎಂಜಿನಿಯರಿಂಗ್, ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಉನ್ನತ ಸಾಧನೆ ಮಾಡುವಂತಹ ಎಂಜಿನಿಯರ್‌ಗಳನ್ನು ಗುರುತಿಸಿ, ಪ್ರೋತ್ಸಾಹಿಸಿ, ಅವರ ಸಂಶೋಧನೆಗೆ ನೆರವು ನೀಡುವುದಕ್ಕಾಗಿ ಇಂಡಿಯನ್‌ ನ್ಯಾಷನಲ್‌ ಅಕಾಡೆಮಿ ಆಫ್ ಎಂಜಿನಿಯರಿಂಗ್‌ (ಐಎನ್‌ಎಇ) ಸಂಸ್ಥೆ ರೂಪಿಸಿರುವ ಫೆಲೊಷಿಪ್‌ ಕಾರ್ಯಕ್ರಮ. ಅರ್ಹತೆ: ಭಾರತ ಅಥವಾ ವಿದೇಶದಲ್ಲಿ ವೃತ್ತಿಪರ ಶಿಕ್ಷಣ ಕಲಿತಿರುವ ಅಭ್ಯರ್ಥಿಗಳು ಈ ಫೆಲೊಷಿಪ್‌ಗೆ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಎಂಜಿನಿಯ ರಿಂಗ್ ಪದವಿ ಪಡೆದಿರಬೇಕು. ಫೆಲೊಷಿಪ್‌ ನೀಡುವ ಸಮಯದಲ್ಲಿ ತಾವು ಕೆಲಸ ಮಾಡುವ ಸಂಸ್ಥೆಯಲ್ಲಿ ಐದು ವರ್ಷಗಳ ಸೇವೆ ಬಾಕಿ ಇರಬೇಕು. ಅಭ್ಯರ್ಥಿಗಳು ಫೆಲೊಷಿಪ್‌ ಪಡೆಯುವ ಅವಧಿಯಲ್ಲಿ, ಬೇರೆ ಯಾವುದೇ ಫೆಲೊಷಿಪ್‌ ಹೊಂದಿರಬಾರದು. ಆರ್ಥಿಕ ನೆರವು: ಮಾಸಿಕ ₹25 ಸಾವಿರ ಮತ್ತು ಇತರೆ ಸೌಲಭ್ಯಗಳು ಅರ್ಜಿ ಸಲ್ಲಿಸಲು ಕೊನೆ ದಿನ: 30-06-2023 ಅರ್ಜಿ ಸಲ್ಲಿಸುವ ವಿಧಾನ: ಇಮೇಲ್‌ ಮೂಲಕ ಮಾತ್ರ(@.) ಹೆಚ್ಚಿನ ಮಾಹಿತಿಗೆ: .b4s.//AKTINF2 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.