ವಿದ್ಯಾರ್ಥಿ ವೇತನ ಕೈಪಿಡಿ | ‘ಕಾನೂನು’ ವಿದ್ಯಾರ್ಥಿಗಳಿಗೆ ವಾಲಂಟರಿ ಇಂಟರನ್‌ಷಿಪ್ ವಿವರ: ಕಾನೂನು ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಶಾಸಕಾಂಗದ ಕರಡು ರಚನೆ ವೃತ್ತಿಯಲ್ಲಿ ಆಸಕ್ತಿ ಬೆಳೆಸಲು ಐಎಲ್‌ಡಿಆರ್ ಸಂಸ್ಥೆ ವಾಲಂಟರಿ ಇಂಟರನ್‌ಷಿಪ್ ಫಾರ್ ಲಾ ಸ್ಟುಡೆಂಟ್ಸ್ ಎಂಬ ಇಂಟರನ್‌ಷಿಪ್ ಯೋಜನೆಯನ್ನು ರೂಪಿಸಿದೆ. ಅರ್ಹತೆ: ಐದು ವರ್ಷಗಳ ಅವಧಿಯ ಇಂಟಿಗ್ರೇಟೆಡ್ ಕಾನೂನು ಪದವಿ ಕೋರ್ಸ್‌ನಲ್ಲಿ 4 ಮತ್ತು 5ನೇ ವರ್ಷದಲ್ಲಿರುವ ಅಥವಾ ಮೂರು ವರ್ಷದ ಕಾನೂನು ಪದವಿ‌ಕೋರ್ಸ್‌ನಲ್ಲಿ ಅಂತಿಮ ವರ್ಷದಲ್ಲಿರುವ ವಿದ್ಯಾರ್ಥಿಗಳು ಈ ಇಂಟರನ್‌ಷಿಪ್‌ಗೆ ಅರ್ಜಿ ಸಲ್ಲಿಸಬಹುದು. ಆರ್ಥಿಕ ನೆರವು/ಪ್ರಯೋಜನ: ಇನ್‌ಸ್ಟಿಟ್ಯೂಟ್ ಆಫ್ ಲೆಜಿಸ್ಲೇಟಿವ್ ಡ್ರಾಫ್ಟಿಂಗ್ ಆ್ಯಂಡ್ ರಿಸರ್ಚ್(ಐಎಲ್‌ ಡಿಆರ್) ಸಂಸ್ಥೆಯಿಂದ ಪ್ರಮಾಣ ಪತ್ರ ಅರ್ಜಿ ಸಲ್ಲಿಸಲು ಕೊನೆ ದಿನ: ವರ್ಷಪೂರ್ತಿ ಅರ್ಜಿ ಸಲ್ಲಿಸುವ ವಿಧಾನ: ಇಮೇಲ್ ಅಥವಾ ಅಂಚೆ ಮೂಲಕ: ಬ್ರಾಂಚ್ ಆಫೀಸರ್, ಐಎಲ್‌ಡಿಆರ್, 416 ‘ಡಿ’ ವಿಂಗ್, ಲೆಜಿಸ್ಲೇಟಿವ್ ಡಿಪಾರ್ಟ್‌ಮೆಂಟ್, ಮಿನಿಸ್ಟ್ರಿ ಆಫ್ ಲಾ ಅಂಡ್ ಜಸ್ಟೀಸ್, ಶಾಸ್ತ್ರಿ ಭವನ, ನವದೆಹಲಿ – 110001. ಹೆಚ್ಚಿನ ಮಾಹಿತಿಗೆ : :.b4s.// ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.