ವಿದ್ಯಾರ್ಥಿ ವೇತನ ಕೈಪಿಡಿ: ಕೋರ್ಟೇವಾ ಅಗ್ರಿಸೈನ್ಸ್ ಸ್ಕಾಲರ್‌ಶಿಪ್ ಇದು ಕೋರ್ಟೇವಾ ಅಗ್ರಿಸೈನ್ಸ್ ಇಂಡಿಯಾ ಉಪಕ್ರಮವಾಗಿದ್ದು, ಕೃಷಿ ಕ್ಷೇತ್ರದಲ್ಲಿ ಸ್ನಾತಕೋತ್ತರ, ಡಾಕ್ಟರಲ್ ಅಥವಾ ಪದವಿ ಕೋರ್ಸ್‌ಗಳಲ್ಲಿ ಮತ್ತು ಸ್ಟೆಮ್ ವಿಷಯಗಳೊಂದಿಗೆ 11 ಮತ್ತು 12ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡಲಿದೆ. ಅರ್ಹತೆ: ಸ್ನಾತಕೋತ್ತರ (ಎಂಬಿಎ/ಎಂ.ಎಸ್‌ಸಿ/ಎಂಟೆಕ್), ಡಾಕ್ಟರಲ್ ಅಥವಾ ಪದವಿಪೂರ್ವ ಕೋರ್ಸ್‌ಗಳು ಮತ್ತು ಸ್ಟೆಮ್ ವಿಷಯಗಳೊಂದಿಗೆ 11 ಮತ್ತು 12ನೇ ತರಗತಿಯಲ್ಲಿರುವ (ಸರ್ಕಾರಿ/ ಖಾಸಗಿ ಶಾಲೆಗಳು) ವಿದ್ಯಾರ್ಥಿನಿಯರು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ₹ 6,00,000 ಅಥವಾ ಅದಕ್ಕಿಂತ ಕಡಿಮೆ ಇರಬೇಕು. ಭಾರತದಾದ್ಯಂತದ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಕೋರ್ಟೇವಾ ಮತ್ತು ಬಡ್ಡಿ4ಸ್ಟಡಿಯ ಉದ್ಯೋಗಿಗಳ ಮಕ್ಕಳು ಅರ್ಹರಲ್ಲ ಆರ್ಥಿಕ ಸಹಾಯ: ಪಿಜಿ ವಿದ್ಯಾರ್ಥಿಗಳಿಗೆ ₹ 50,000 ಯುಜಿ ವಿದ್ಯಾರ್ಥಿಗಳಿಗೆ ₹ 25,000 ಶಾಲಾ ವಿದ್ಯಾರ್ಥಿಗಳಿಗೆ: ₹ 10,000 ಅರ್ಜಿ ಸಲ್ಲಿಸಲು ಕೊನೆ ದಿನ: 13-09-2024 ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ. ಹೆಚ್ಚಿನ ಮಾಹಿತಿಗೆ: .b4s.//CASP4 ಡಿಪ್ಲೊಮಾ ಇನ್ ಎಂಜಿನಿಯರಿಂಗ್ ಅಥವಾ ಯಾವುದೇ ಪಾಲಿಟೆಕ್ನಿಕ್ ಕೋರ್ಸ್‌ನ ಮೊದಲ ವರ್ಷದಲ್ಲಿರುವ ವಿದ್ಯಾರ್ಥಿನಿಯರಿಗೆ ತಮ್ಮ ಅಧ್ಯಯನಕ್ಕೆ ಹಣಕಾಸಿನ ನೆರವು ನೀಡಲು ಕೆಎಸ್‌ಬಿ ಕೇರ್ ಚಾರಿಟಬಲ್ ಟ್ರಸ್ಟ್‌ ನೆರವು ನೀಡುತ್ತದೆ. ಅರ್ಹತೆ: ಡಿಪ್ಲೊಮಾ ಇನ್ ಎಂಜಿನಿಯರಿಂಗ್ ಅಥವಾ ಯಾವುದೇ ಪಾಲಿಟೆಕ್ನಿಕ್ ಕೋರ್ಸ್‌ನ ಮೊದಲ ವರ್ಷದಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿಯರು. ಹಿಂದಿನ ತರಗತಿಯಲ್ಲಿ ಶೇ 60ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದಲೂ ಒಟ್ಟು ₹ 8 ಲಕ್ಷಕ್ಕಿಂತ ಕಡಿಮೆ ಇರಬೇಕು. ‌ಕೆಎಸ್‌ಬಿ ಕೇರ್ ಚಾರಿಟಬಲ್ ಟ್ರಸ್ಟ್ ಮತ್ತು ಬಡ್ಡಿ4ಸ್ಟಡಿ ನೌಕರರ ಮಕ್ಕಳು ಅರ್ಹರಾಗಿರುವುದಿಲ್ಲ. ಆರ್ಥಿಕ ಸಹಾಯ: ₹ 25,000 ಮಾರ್ಗದರ್ಶನದ ಬೆಂಬಲ. ಅರ್ಜಿ ಸಲ್ಲಿಸಲು ಕೊನೆ ದಿನ: 16-09-2024 ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ. ಹೆಚ್ಚಿನ ಮಾಹಿತಿಗೆ: .b4s.//KSBMP1 ಸ್ಟೆಮ್ (ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿಂಗ್, ಮ್ಯಾಥಮ್ಯಾಟಿಕ್ಸ್) ವಿಷಯಗಳಲ್ಲಿ ಪದವಿಗಳನ್ನು ಅಭ್ಯಾಸ ಮಾಡಲು ಇಚ್ಛೆಯಿರುವಂಥ ಭಾರತದಲ್ಲಿನ ವಿದ್ಯಾರ್ಥಿನಿಯರನ್ನು ಬೆಂಬಲಿಸಲು ಇನ್ಫೊಸಿಸ್‌ ಫೌಂಡೇಷನ್‌ನ ಉಪಕ್ರಮವಿದು. ಅರ್ಹತೆ: ಭಾರತದ ಪ್ರಜೆಗಳಾಗಿರುವ ಮತ್ತು ಎಂಜಿನಿಯರಿಂಗ್, ಮೆಡಿಸಿನ್ (ಎಂಬಿಬಿಎಸ್) ಮತ್ತು ಇತರ ಸಂಬಂಧಿತ ಸ್ಟೆಮ್ ವಿಷಯಗಳ ಕ್ಷೇತ್ರಗಳಲ್ಲಿ ಇನ್‌ಸ್ಟಿಟ್ಯೂಟ್‌ ಆಫ್ ರೆಪ್ಯೂಟ್ (ಎನ್‌ಐಆರ್‌ಎಫ್ ಮಾನ್ಯತೆ ಪಡೆದ)ನಲ್ಲಿ ತಮ್ಮ 4-ವರ್ಷದ ಕೋರ್ಸ್‌ನ ಮೊದಲನೆ ವರ್ಷಕ್ಕೆ ದಾಖಲಾಗಿರುವ ವಿದ್ಯಾರ್ಥಿನಿಯರು ಅರ್ಹರು. ಗುರುತಿಸಲ್ಪಟ್ಟ ಕಾಲೇಜುಗಳಲ್ಲಿ ಅರ್ಜಿದಾರರು ಪ್ರವೇಶ ಪಡೆದಿರಬೇಕು ಮತ್ತು ತಮ್ಮ 12ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ₹ 8 ಲಕ್ಷಕ್ಕಿಂತ ಕಡಿಮೆ ಅಥವಾ ಸಮನಾಗಿರಬೇಕು. ಇತರ ವಿದ್ಯಾರ್ಥಿವೇತನಗಳನ್ನು ಪಡೆದುಕೊಂಡಿರಬಾರದು. ಆರ್ಥಿಕ ಸಹಾಯ: ಆಯ್ಕೆಯಾದ ಅಭ್ಯರ್ಥಿಗಳು ಬೋಧನೆ, ಜೀವನ ನಿರ್ವಹಣಾ ವೆಚ್ಚಗಳು ಮತ್ತು ಅಧಯನ ಸಾಮಗ್ರಿಗಳನ್ನು ಒಳಗೊಂಡಂತೆ, ತಾವು ಪಾವತಿಸಿರುವ ರಸೀದಿಗೆ ತಕ್ಕಂತೆ ವಾರ್ಷಿಕ ₹1 ಲಕ್ಷದವರೆಗೆ ವಿದ್ಯಾರ್ಥಿವೇತನವನ್ನು ಪಡೆಯುತ್ತಾರೆ. ಅರ್ಜಿ ಸಲ್ಲಿಸಲು ಕೊನೆ ದಿನ: 15-09-2024 ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ. ಹೆಚ್ಚಿನ ಮಾಹಿತಿಗೆ: .b4s.//ISTS2 ಎಐಸಿಟಿಇ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್ ಪದವಿ ಕಾರ್ಯಕ್ರಮದ 1ನೇ / 2ನೇ / 3ನೇ ವರ್ಷದಲ್ಲಿ ಓದುತ್ತಿರುವಂತಹ ವಿದ್ಯಾರ್ಥಿನಿಯರಿಂದ ರೋಲ್ಸ್-ರಾಯ್ಸ್ ಇಂಡಿಯಾ ಅರ್ಜಿಗಳನ್ನು ಆಹ್ವಾನಿಸುತ್ತದೆ. ಈ ವಿದ್ಯಾರ್ಥಿವೇತನವು ಶೈಕ್ಷಣಿಕವಾಗಿ ಶ್ರೇಷ್ಟತೆಯನ್ನು ಸಾಧಿಸಿರುವ ಮತ್ತು ಆರ್ಥಿಕ ಅಗತ್ಯವನ್ನು ಹೊಂದಿರುವ ಅರ್ಹ ವಿದ್ಯಾರ್ಥಿಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ. ಅರ್ಹತೆ: ಎಐಸಿಟಿಇ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್ ಪದವಿ ಕಾರ್ಯಕ್ರಮದ 1ನೇ / 2ನೇ / 3ನೇ ವರ್ಷಕ್ಕೆ (ಏರೋಸ್ಪೇಸ್, ಮೆರೈನ್, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ಸ್ ಇತ್ಯಾದಿ ಕ್ಷೇತ್ರಗಳಲ್ಲಿ) ದಾಖಲಾಗಿರುವ ವಿದ್ಯಾರ್ಥಿನಿಯರು ಅರ್ಹರಾಗಿರುತ್ತಾರೆ. ಅರ್ಜಿದಾರರು ತಮ್ಮ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಶೇ 60ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರಬೇಕು. ಕುಟುಂಬದ ವಾರ್ಷಿಕ ಆದಾಯವು ₹ 4ಲಕ್ಷವನ್ನು ಮೀರಬಾರದು. ಪ್ಯಾನ್-ಇಂಡಿಯಾದ ವಿದ್ಯಾರ್ಥಿಗಳಿಗೆ ಲಭ್ಯವಿದೆ. ದಯವಿಟ್ಟು ಗಮನಿಸಿ: ಈ ಮೊದಲು 2023ರಲ್ಲಿ ರೋಲ್ಸ್-ರಾಯ್ಸ್ ವಿಂಗ್ಸ್4ಹರ್ ಸ್ಕಾಲರ್‌ಶಿಪ್ ಫಾರ್ ವಿಮೆನ್ ಎಂಜಿನಿಯರಿಂಗ್ ಸ್ಟೂಡೆಂಟ್ಸ್ ಅನ್ನು ಪಡೆದಿರುವಂತಹ ವಿದ್ಯಾರ್ಥಿನಿಯರು ಕೂಡಾ ಅರ್ಜಿಯನ್ನು ಸಲ್ಲಿಸಬಹುದು. ದೈಹಿಕ ವಿಶೇಷ ಚೇತನರು, ಒಂಟಿ ಪೋಷಕರನ್ನು ಹೊಂದಿರುವವರು ಮತ್ತು ಅನಾಥರಂತಹ ವಿಶೇಷ ವರ್ಗಗಳಿಗೆ ಸೇರಿರುವ ವ್ಯಕ್ತಿಗಳಿಗೆ ಆದ್ಯತೆ ನೀಡಲಾಗುವುದು. ಆರ್ಥಿಕ ಸಹಾಯ: ₹ 35,000. ರೋಲ್ಸ್-ರಾಯ್ಸ್ ಇಂಡಿಯಾದ ಉದ್ಯಮ ತಜ್ಞರಿಂದ ವನ್-ಟು-ವನ್ ಮತ್ತು ವನ್-ಟು-ಮೆನಿ ಮಾರ್ಗದರ್ಶಕ ಅವಧಿಗಳು, ವೆಬಿನಾರ್‌ಗಳು/ ವರ್ಕ್‌ಶಾಪ್‌ಗಳು. ಅರ್ಜಿ ಸಲ್ಲಿಸಲು ಕೊನೆ ದಿನ: 05-09-2024 ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ. ಹೆಚ್ಚಿನ ಮಾಹಿತಿಗೆ: .b4s.//UNSC3 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.