ಫೆಬ್ರುವರಿಯಲ್ಲಿ ಸಿಬಿಎಸ್‌ಇ 10, 12ನೇ ತರಗತಿ ಪರೀಕ್ಷೆ ಬೆಂಗಳೂರು: 10 ಮತ್ತು 12ನೇ ತರಗತಿ ಪರೀಕ್ಷೆಗಳ ದಿನಾಂಕಗಳ ‘ಡೇಟ್‌ಶೀಟ್’ಗಳನ್ನುಸಿಬಿಎಸ್‌ಇ (ಸೆಂಟ್ರಲ್ ಬೋರ್ಡ್‌ ಆಫ್ ಸೆಕಂಡರಿ ಎಜುಕೇಷನ್) ಭಾನುವಾರ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಡೇಟ್‌ಶೀಟ್ ಪ್ರಕಾರ, 12ನೇ ತರಗತಿಯ ಪರೀಕ್ಷೆಗಳು ಫೆ.15ರಿಂದ ಏ.3ರವರೆಗೆ ಮತ್ತು 10ನೇ ತರಗತಿ ಪರೀಕ್ಷೆಗಳು ಫೆ.21ರಿಂದ ಮಾರ್ಚ್ 29ರವರೆಗೆ ನಡೆಯಲಿವೆ. ಮುಖ್ಯ ವಿಷಯಗಳ ಪರೀಕ್ಷಾ ದಿನಾಂಕಗಳ ನಡುವೆಸಾಕಷ್ಟು ಕಾಲಾವಕಾಶ ಇರುವಂತೆ ಮಂಡಳಿ ಎಚ್ಚರಿಕೆ ವಹಿಸಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ದಿನಾಂಕಗಳು ಸಿಬಿಎಸ್‌ಇ ಪರೀಕ್ಷೆಗಳ ನಡುವೆ ಇರದಂತೆಯೂ ಮಂಡಳಿ ಗಮನ ನೀಡಿದೆ. 10ನೇ ತರಗತಿಗೆಮಾರ್ಚ್‌ 7ಕ್ಕೆಗಣಿತ, 13ಕ್ಕೆವಿಜ್ಞಾನ, 23ಕ್ಕೆ ಇಂಗ್ಲಿಷ್, 29ಕ್ಕೆ ಸಮಾಜ ವಿಜ್ಞಾನ.12ನೇ ತರಗತಿಗೆಮಾರ್ಚ್ 18ಕ್ಕೆ ಗಣಿತ, 2ಕ್ಕೆ ಇಂಗ್ಲಿಷ್, 5ಕ್ಕೆ ಫಿಸಿಕ್ಸ್ ಪರೀಕ್ಷೆಗಳು ನಡೆಯಲಿವೆ. ಪೂರ್ಣ ಮಾಹಿತಿಗೆ ಸಿಬಿಎಸ್‌ಇ ವೆಬ್‌ಸೈಟ್ ನೋಡಿ. ಪರೀಕ್ಷಾ ದಿನಾಂಕಗಳು ಬೇಗನೇ ಪ್ರಕಟವಾಗಿರುವುದರಿಂದವಿದ್ಯಾರ್ಥಿಗಳಿಗೆ ಸಿದ್ಧತೆ ಮಾಡಿಕೊಳ್ಳಲು ಸಾಕಷ್ಟು ಕಾಲಾವಕಾಶ ದೊರೆತಂತೆ ಆಗಿದೆ. ಸಿಬಿಎಸ್‌ಇ ವೆಬ್‌ಸೈಟ್‌ನಲ್ಲಿ ಡೇಟ್‌ಶೀಟ್ ಲಭ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.