ಭ್ರೂಣಶಾಸ್ತ್ರದಲ್ಲಿ ಎಂ.ಎಸ್ಸಿ. ನಾನು ಬಿ.ಎಸ್ಸಿ. ಕೊನೆಯ ವರ್ಷದಲ್ಲಿ ಓದುತ್ತಿದ್ದೇನೆ. ಬಯೋಟೆಕ್ನಾಲಜಿ, ಬಯೋಕೆಮಿಸ್ಟ್ರಿ, ಜೆನಿಟಿಕ್ಸ್ ನನ್ನ ಇಚ್ಛೆಯ ವಿಷಯಗಳು. ನಾನು ವೈದ್ಯಕೀಯ ಭ್ರೂಣಶಾಸ್ತ್ರದಲ್ಲಿ ಎಂ.ಎಸ್ಸಿ. ಮಾಡಬೇಕೆಂದಿದ್ದೇನೆ. ನನಗೆ ಕರ್ನಾಟಕದಲ್ಲಿ ಈ ವಿಷಯದ ಬಗ್ಗೆ ಇರುವ ಒಳ್ಳೆಯ ಕಾಲೇಜುಗಳನ್ನು ತಿಳಿಸಿ ಮತ್ತು ಈ ಕೋರ್ಸ್‌ನ ಬಗ್ಗೆ ಮಾಹಿತಿ ನೀಡಿ. -ಮೃಣಾಲಿನಿ ಗೌಡ, ಊರು ಬೇಡ ನಿಮ್ಮ ಮುಂದಾಲೋಚನೆಯನ್ನು ಮೆಚ್ಚುತ್ತೇನೆ. ಪ್ರತಿಯೊಬ್ಬ ವಿದ್ಯಾರ್ಥಿ/ವಿದ್ಯಾರ್ಥಿನಿಯರೂ ಮುಂದೆ ಏನು ಮಾಡಬೇಕೂಂತ ಕೊನೆಯ ವರ್ಷದಲ್ಲೇ ನಿರ್ಧರಿಸಬೇಕು. ‘ಪ್ಲಾನಿಂಗ್’ ಬಹಳ ಮುಖ್ಯ. ‘ಎಂಬ್ರಿಯಾಲಜಿ’ ಬಯಾಲಜಿಯ ಒಂದು ಕವಲು. ಇದು ಭ್ರೂಣದ ಬೆಳವಣಿಗೆ ರಿಪ್ರೊಡಕ್ಟಿವ್‌ ಸೆಲ್ ( ) ಹೇಗೆ ಬೆಳೆಯುತ್ತದೆ ಫರ್ಟಿಲೈಜೇಷಷನ್‌ನಿಂದ ಸಿಂಗಲ್ ಸೆಲ್ ಜೈಗೋಟ್‌ () ನಿಂದ ಒಂದು ‘ಜೀವಿ’ ಆಗುವ ಬಗ್ಗೆ ತಿಳಿವಳಿಕೆ ಮತ್ತು ಜ್ಞಾನವನ್ನು, ನೀವು ಈ ಶಾಸ್ತ್ರದಲ್ಲಿ ಗಳಿಸುತ್ತೀರಿ. ಬಿ.ಎಸ್ಸಿ. ಮಾಡಿದವರಿಗೆ ಈ 2 ವರ್ಷದ ಎಂ.ಎಸ್ಸಿ. ಕೋರ್ಸ್ ಸೇರುವ ಅರ್ಹತೆ ಇದೆ. ಹಲವು ಕಾಲೇಜುಗಳು: 1. , :.. 2. (), :.. 3. , :... 4. , :... 5. , :.. 6. :://../ ಇನ್ನೂ ಅನೇಕ.... ಗಮನವಿಡಿ: ಕರ್ನಾಟದಲ್ಲೇ ಮಾಡಬೇಕು ಎಂಬ ನಿರ್ಧಾರವನ್ನು ಬದಲಿಸಿಕೊಂಡು, ಯಾವ ಪ್ರಖ್ಯಾತ ಇನ್ಸ್‌ಟಿಟ್ಯೂಟ್‌ ಅಥವಾ ಮೆಡಿಕಲ್ ಕಾಲೇಜ್‌ನಲ್ಲಿ ಮಾಡಿದರೆ ಒಳ್ಳೆಯ ಉದ್ಯೋಗ ಸಿಗುತ್ತದೆ ಎನ್ನುವುದನ್ನು ಗಮನಿಸಿ. ಐ.ವಿ.ಎಫ್. ಸೆಂಟರ್‌ಗಳು ಬಹಳ ಬಂದಿದೆ. ಎಗ್, ಸ್ಪರ್ಮ್ ಮತ್ತು ಎಂಬ್ರಿಯೋ ಪ್ರಿಸೆರ್ವೇಷನ್‌ಗಳನ್ನು ಅತ್ಯಂತ ಶ್ರದ್ಧೆಯಿಂದ ಮಾಡಬೇಕು. ಉದ್ಯೋಗಾವಕಾಶದ ಬಗ್ಗೆ ಚಿಂತಿಸಬೇಕಾಗಿಲ್ಲ. ** ನನ್ನ ಮಗ ಬಿ.ಎಚ್.ಎಂ.ಎಸ್. ವೃತ್ತಿಶಿಕ್ಷಣ 4ನೇ ವರ್ಷದಲ್ಲಿ ಓದುತ್ತಿದ್ದಾನೆ. ನಾವು ಒಬಿಸಿ 2ನೇ ವರ್ಗಕ್ಕೆ ಸೇರಿರುತ್ತೇವೆ. ನನಗೆ ಮಗನ ಮುಂದಿನ ವಿದ್ಯಾಭ್ಯಾಸ ಮುಂದುವರೆಸಲು ಯಾವ ಮಾರ್ಗ ತಿಳಿಸಿ ಮತ್ತು ಅದಕ್ಕೆ ಸಂಬಂಧಪಟ್ಟ ವಿದ್ಯಾರ್ಥಿವೇತನದ ಬಗ್ಗೆ ಮಾಹಿತಿ ನೀಡಿ. -ಸುಧೀಂದ್ರ, ತಿಪಟೂರು ನಿಮ್ಮ ಮಗ ಬಿ.ಎಚ್.ಎಂ.ಎಸ್. ಕೋರ್ಸ್ ಮುಗಿದ ನಂತರ, ಎಂ.ಡಿ. ಇನ್ ಹೋಮಿಯೋಪತಿ ಮೆಡಿಸಿನ್‌ ಮಾಡಬಹುದು. ಇದು 3 ವರ್ಷದ ಕೋರ್ಸ್. ಕೆಲವು ಕಾಲೇಜುಗಳು: 1. / () :.. 2. (), :.. 3. () :... 4. () :... 5. , :.... ಇನ್ನೂ ಹಲವು....‌ ಹೊರದೇಶದಲ್ಲೂ ಪಿ.ಜಿ. ಇನ್ ಹೋಮಿಯೋಪತಿ ಮಾಡಬಹುದು. ಉದಾಹರಣೆಗೆ: 1. , , - 63000:... 2. , , 382, 386, , , , 1023:... 3. 42-44 , SL1 1EL, ,:.. 4. , , : .. 5. , 1881 #500, , M4S 3C4, :.. ಇನ್ನೂ ಅನೇಕ ಹಲವಾರು ದೇಶಗಳಲ್ಲಿ... ನ್ಯಾಷನಲ್ ಲೆವೆಲ್ ಮತ್ತು ರಾಜ್ಯ ಸರ್ಕಾರ ಕೂಡ ಹಲವಾರು ಸ್ಕಾಲರ್‌ಶಿಪ್‌ ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ಕೆಳಗಿನ ವೆಬ್‌ಸೈಟ್‌ನಿಂದ ಪೂರ್ಣ ಮಾಹಿತಿ ಪಡೆಯಿರಿ: ‌1. :.... 2. :.../ 3. :... 4. ...: ಇನ್ನೂ ಅನೇಕ.... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.