ಕಾಮರ್ಸ್ ಸಾಧಕಿ ಅನ್ಸಿಲ್ಲಾ ಡಿಸೋಜಗೆ ಸಿಎ ಮಾಡುವ ಕನಸು ಮಂಗಳೂರು: ಆಳ್ವಾಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಒಲಿವಿಟಾ ಅನ್ಸಿಲ್ಲಾ ಡಿಸೋಜವಾಣಿಜ್ಯ ವಿಷಯದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.‌ ಖುಷಿಯಲ್ಲಿಯೇ ಪ್ರಜಾವಾಣಿ ಜೊತೆ ಮಾತನಾಡಿದ ಅವರು, ‘ಆಳ್ವಾಸ್ ಶಿಕ್ಷ ಸಂಸ್ಥೆ ಮತ್ತು ಸಂಸ್ಥೆಯ ಶಿಕ್ಷಕರು,ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರ ಪ್ರೋತ್ಸಾಹವೇ ಈ ಸಾಧನೆಗೆ ಕಾರಣ’ಎಂದರು. 596 ಅಂಕ ಗಳಿಸಲು ಶಿಕ್ಷಕರ ಮಾರ್ಗದರ್ಶನವೇಕಾರಣ. ಮುಂದೆಸಿಎ (ಚಾರ್ಟಡ್‌ ಅಕೌಂಟೆಂಟ್) ಮಾಡಬೇಕು ಎಂದುಕೊಂಡಿದ್ದೇನೆ. ಸದ್ಯಕ್ಕೆ ಸಿಪಿಟಿ ಪರೀಕ್ಷೆ ಬರೆಯಲು ಸಿದ್ಧತೆ ಮಾಡುತ್ತಿದ್ದೇನೆ ಎಂದರು. ಶ್ರಮವಹಿಸಿ ಓದುವುದು ಮತ್ತು ಅಂದಿನ ಪಾಠಗಳಿಗೆ ಅಂದೇ ಗಮನ ಕೊಟ್ಟು ಅರ್ಥ ಮಾಡಿಕೊಳ್ಳುವುದು ಮುಖ್ಯ. ರಜೆಯಲ್ಲಿಯೂ ನಾನು ಓದುತ್ತಿದ್ದೆ ಎಂದು ಓದಿನ ಬಗ್ಗೆ ಹೇಳಿಕೊಂಡರು. ಕೀ ಬೋರ್ಡ್ ನುಡಿಸುವುದು ಅವರ ಹವ್ಯಾಸ. ತಂದೆ ಒಲಿವರ್ ಉಬಾಲ್ಡ್ ಡಿಸೋಜ, ತಾಯಿ ಅನಿತ ಮರಿಯ ಡಿಸೋಜ ಮಗಳ ಸಾಧನೆ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದರು. ಇನ್ನಷ್ಟು... ಅವತ್ತಿನ ಪಾಠ ಅವತ್ತೇ ಓದ್ಕೊಳ್ತಿದ್ದೆ: ಸಾಯಿಶ್‌ ಪಿಯುಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ ಕಲಾ ವಿಭಾಗ: ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಇಂದು ಕಾಲೇಜಿಗೆ 9 ರ‍್ಯಾಂಕ್ ಪಿಯು ವಾಣಿಜ್ಯದಲ್ಲಿ ದಕ್ಷಿಣ ಕನ್ನಡ, ವಿಜ್ಞಾನದಲ್ಲಿ ಬೆಂಗಳೂರು ಮೊದಲು ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟ ದಕ್ಷಿಣ ಕನ್ನಡ ಜಿಲ್ಲೆ ಮೇಲೇರಿದ ಚಿಕ್ಕೋಡಿ, ಕೊಂಚ ಚೇತರಿಸಿಕೊಂಡ ಬೆಳಗಾವಿ ದ್ವಿತೀಯ ಪಿಯು: ದಾವಣಗೆರೆಗೆ ಶೇ 62.53 ಫಲಿತಾಂಶ ಪರೀಕ್ಷೆಯಲ್ಲಿ ಫೇಲಾಗುವುದೇನೂ ಮಹಾಪರಾಧವಲ್ಲ ಪಾಸಾದ್ರೆ ಸಂತೋಷ, ಫೇಲಾದ್ರೆ ಚಿಂತೆಬೇಡ, ಇನ್ನೊಮ್ಮೆ ಯತ್ನಿಸಿ ಬಿಕಾಂ– ಅವಕಾಶಗಳ ಹುಲ್ಲುಗಾವಲು ಬಿಎ– ಮಾನವಿಕ ವಿಭಾಗದಲ್ಲಿ ಹೊಸನೀರು ಬಿಎಸ್ಸಿ– ಶುದ್ಧ ವಿಜ್ಞಾನಕ್ಕೆ ಮರಳಿ ಬೇಡಿಕೆ ಪಿಯು ಫಲಿತಾಂಶ: 24ನೇ ಸ್ಥಾನಕ್ಕೆ ಕುಸಿದ ರಾಮನಗರ ಪಿಯು ಫಲಿತಾಂಶ: ಒಂದು ಸ್ಥಾನ ಕುಸಿದ ರಾಯಚೂರು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.