ವಿಜ್ಞಾನ ಶಿಕ್ಷಕರು, ವಿಜ್ಞಾನಿಗಳಿಗೆ ಪ್ರಶಸ್ತಿ ಸ್ಥಾಪನೆ ಬೆಂಗಳೂರು: ಜವಾಹರಲಾಲ್‌ ನೆಹರೂ ಸೆಂಟರ್‌ ಫಾರ್‌ ಅಡ್ವಾನ್ಸ್‌ಡ್‌ ಸೈಂಟಿಫಿಕ್‌ ರಿಸರ್ಚ್‌ನ ಸಿ.ಎನ್‌.ಆರ್‌.ರಾವ್‌ ರಿಸರ್ಚ್‌ ಫೌಂಡೇಷನ್‌ ಪದವಿಪೂರ್ವ ಕಾಲೇಜು, ಪ್ರೌಢಶಾಲೆಯ ಶಿಕ್ಷಕರಿಗೆ ಮತ್ತು ಸಂಶೋಧಕ ವಿಜ್ಞಾನಿಗಳಿಗೆ ಪ್ರಶಸ್ತಿಗಳನ್ನು ಸ್ಥಾಪಿಸಿದೆ. ಅತ್ಯುತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿ –2018: ವಿಜ್ಞಾನ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳನ್ನು ಪ್ರದರ್ಶಿಸಿದವರು, ಕ್ರಿಯಾತ್ಮಕ ಬೋಧನಾ ವಿಧಾನ ಅಳವಡಿಸಿಕೊಂಡವರು, ಈ ಕ್ರಮಗಳ ಮೂಲಕ ವಿಜ್ಞಾನವನ್ನು ಒಂದು ವೃತ್ತಿಯಾಗಿ ತೆಗೆದುಕೊಂಡು ಯುವಜನರು ಮುಂದುವರಿಯಲು ಸ್ಫೂರ್ತಿ ನೀಡಿದ ಶಿಕ್ಷಕರಿಗಾಗಿ ಈ ಪ್ರಶಸ್ತಿ ಸ್ಥಾಪಿಸಲಾಗಿದೆ. ಮಾಹಿತಿಗೆ ವೆಬ್‌ಸೈಟ್:://.../.? ನೋಡಬಹುದು. ನ್ಯಾಷನಲ್‌ ಪ್ರೈಸ್‌ ಫಾರ್‌ ರಿಸರ್ಚ್‌ ಇನ್‌ ಕೆಮಿಕಲ್‌ ಸ್ಪೆಕ್ಟ್ರೋಸ್ಕೋಪಿ ಆ್ಯಂಡ್‌ ಮಾಲಿಕ್ಯುಲರ್‌ ಸ್ಟ್ರಕ್ಚರ್ಸ್‌ ಹೆಸರಿನ ಈ ಪ್ರಶಸ್ತಿಯನ್ನು ರಾಸಾಯನಿಕ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮಾಡಿದ ವಿಜ್ಞಾನಿಗಳಿಗೆ ನೀಡಲಾಗುತ್ತದೆ. ಮಾಹಿತಿಗೆ ವೆಬ್‌ಸೈಟ್‌:://.../.?=549 ನೋಡಬಹುದು. ಅಥವಾ ದೂರವಾಣಿ: 080–22082749, 22082755 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.