ಸೃಜನಶೀಲತೆಯ ಹೊಸ ಡಿಸೈನುಗಳು! ಜ್ಯುವೆಲ್ಲರಿ ಡಿಸೈನ್: ಚಿನ್ನದ ಚೆಂದದ ಲೋಕ ಆಭರಣ ಮಳಿಗೆಗಳೂ, ಒಡವೆಗಳ ಖರೀದಿದಾರರೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದ್ದಾರೆ. ಅಂದರೆ ಹೊಸ ವಿನ್ಯಾಸಗಳನ್ನು ಸೃಜಿಸುವವರೂ ಮಾರುಕಟ್ಟೆಗೆ ಪರಿಚಯಿಸುವವರೂ ದೊಡ್ಡ ಸಂಖ್ಯೆಯಲ್ಲಿ ಬೇಕಾಗಿದ್ದಾರೆ ಎಂದರ್ಥ. ಆಭರಣ ವಿನ್ಯಾಸದಲ್ಲಿ ಡಿಪ್ಲೊಮಾ ಮತ್ತು ಪದವಿ ನೀಡುವ ಹತ್ತಾರು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ವಿವರಗಳಿಗೆ ನೋಡಿ: ./Vswq5n, ./7xuWFp * ವೋಗ್ ಇನ್‌ಸ್ಟಿಟ್ಯೂಟ್‌ ಆಫ್ ಫ್ಯಾಷನ್ ಟೆಕ್ನಾಲಜಿ, ರಿಚ್ಮಂಡ್ ಸರ್ಕಲ್, ಬೆಂಗಳೂರು. ಮಾಹಿತಿಗೆ: . * ಜೆಡಿ ಇನ್‌ಸ್ಟಿಟ್ಯೂಟ್‌ ಆಫ್ ಫ್ಯಾಶನ್ ಟೆಕ್ನಾಲಜಿ, ಬೆಂಗಳೂರು (ಜಯನಗರ, ಇಂದಿರಾನಗರ, ಲ್ಯಾವೆಲ್ಲೆ ರಸ್ತೆ, ಯಲಹಂಕ ಕೇಂದ್ರಗಳಿವೆ). ಮಾಹಿತಿಗೆ: . * ಸ್ವರ್ಣ ಇನ್‌ಸ್ಟಿಟ್ಯೂಟ್‌ ಆಫ್ ಜ್ಯುವೆಲ್ಲರಿ ಡಿಸೈನಿಂಗ್, 7ನೇ ಬ್ಲಾಕ್ (ಪಶ್ಚಿಮ), ಜಯನಗರ, ಬೆಂಗಳೂರು. ಮಾಹಿತಿಗೆ: .. * ಡ್ರೀಮ್‌ಜೋನ್ (ಮೈಸೂರು, ಮಂಗಳೂರು ಹಾಗೂ ಬೆಂಗಳೂರಿನ ಇಂದಿರಾನಗರ, ಬಸವೇಶ್ವರನಗರ, ಸದಾಶಿವನಗರ ಮುಂತಾದ ಕಡೆ ಕೇಂದ್ರಗಳಿವೆ). ಮಾಹಿತಿಗೆ: .. ರುಚಿಮೀಮಾಂಸೆ: ಪಾಕವಿದ್ಯೆಗೂ ಪದವಿ ಆತಿಥ್ಯವೇ ಉದ್ಯಮವಾಗಿ ಬೆಳೆದಿರುವ ಕಾಲವಿದು. ಹೀಗಾಗಿ ಹೋಟೆಲ್ ಮ್ಯಾನೇಜ್‍ಮೆಂಟಿನಿಂದಲೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಪಾಕಶಾಸ್ತ್ರದಲ್ಲೇ ಪದವಿ ನೀಡುವ ಪದ್ಧತಿ ಜನಪ್ರಿಯವಾಗುತ್ತಿದೆ. ಕ್ಯುಲಿನರಿ ಆರ್ಟ್ಸ್‌ನಲ್ಲಿ ಡಿಪ್ಲೊಮಾ ಹಾಗೂ ಬಿ.ವೋಕ್ ಕೋರ್ಸ್‌ಗಳನ್ನು ಮಾಡುವುದಕ್ಕೆ ನಗರಗಳಲ್ಲಿ ಹೇರಳ ಅವಕಾಶಗಳಿವೆ. ವಿವರಗಳಿಗೆ: ., . ಜಾಲತಾಣಗಳನ್ನು ನೋಡಿ. * ಎಎಸ್‌ಕೆ ಇನ್‌ಸ್ಟಿಟ್ಯೂಟ್‌ ಆಫ್ ಹಾಸ್ಪಿಟಾಲಿಟಿ ಮ್ಯಾನೇಜ್‍ಮೆಂಟ್ & ಕ್ಯುಲಿನರಿ ಆರ್ಟ್ಸ್, ಸಿಂಗಸಂದ್ರ, ಬೆಂಗಳೂರು. ಪಾಕಕಲೆ, ಆತಿಥ್ಯ ನಿರ್ವಹಣೆ ಮತ್ತು ಹೊಟೇಲ್ ಆಡಳಿತದಲ್ಲಿ ಡಿಪ್ಲೊಮಾ ಮತ್ತು ಪದವಿ ಕೋರ್ಸುಗಳು. ಮಾಹಿತಿಗೆ: . * ಬೆಂಗಳೂರು ಕ್ಯುಲಿನರಿ ಅಕಾಡೆಮಿ, ಕೆಂಪಾಪುರ, ಭುವನೇಶ್ವರಿನಗರ, ಬೆಂಗಳೂರು. ಪಾಕಶಾಸ್ತ್ರ ಮತ್ತು ಆಹಾರ ತಯಾರಿ, ಹೊಟೇಲ್ ಮ್ಯಾನೇಜ್‍ಮೆಂಟಿನಲ್ಲಿ ಡಿಪ್ಲೊಮಾ ಕೋರ್ಸ್‌ಗಳು. ಮಾಹಿತಿಗೆ: . *ಎಂ.ಎಸ್. ರಾಮಯ್ಯ ಯುನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸಸ್, ಎಂಎಸ್‌ಆರ್ ನಗರ, ಬೆಂಗಳೂರು. ಕ್ಯುಲಿನರಿ ಆಪರೇಷನ್ಸ್‌ನಲ್ಲಿ ಬಿ.ವೋಕ್ ಪದವಿ. ಮಾಹಿತಿಗೆ: .. * ಮಣಿಪಾಲ ವಿಶ್ವವಿದ್ಯಾಲಯ, ಮಣಿಪಾಲ. ಪಾಕಕಲೆಯಲ್ಲಿ ಬಿಎ ಪದವಿ ಹಾಗೂ ಹೋಟೆಲ್ ನಿರ್ವಹಣೆಯಲ್ಲಿ ಬಿಎಚ್‌ಎಂ ಪದವಿ. ಮಾಹಿತಿಗೆ: ./. *ಕರಾವಳಿ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್‍ಮೆಂಟ್ (./?page_id=1119) ಹಾಗೂ ಶ್ರೀದೇವಿ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್‍ಮೆಂಟ್, ಮಂಗಳೂರು (...). ಹೋಟೆಲ್ ಮ್ಯಾನೇಜ್‍ಮೆಂಟ್‍ನಲ್ಲಿ ಡಿಪ್ಲೊಮಾ ಮತ್ತು ಡಿಗ್ರಿ ಕೋರ್ಸ್‌ಗಳು. ಅನಿಮೇಷನ್/ ಮಲ್ಟಿಮೀಡಿಯ/ ಗ್ರಾಫಿಕ್ಸ್ ಡಿಸೈನ್: ಅನಿಮೇಷನ್ ಆಧಾರಿತ ಸಿನಿಮಾ ಹಾಗೂ ಟೀವಿ ಕಾರ್ಯಕ್ರಮಗಳಿಗೆ ನಮ್ಮಲ್ಲೇ ಅಪಾರ ಬೇಡಿಕೆಯಿದೆ. ಜೊತೆಗೆ, ಅನೇಕ ದೇಶಗಳು ಅನಿಮೇಶನ್‌ಗಾಗಿ ಭಾರತವನ್ನು ಅವಲಂಬಿಸಿವೆ. ಅನಿಮೇಷನ್, ಮಲ್ಟಿಮೀಡಿಯಾ, ಗ್ರಾಫಿಕ್ಸ್ ಡಿಸೈನಿಂಗ್‌ನಲ್ಲಿ ಪದವಿ ಪಡೆಯುವವರಿಗೆ ಹೇರಳ ಅವಕಾಶಗಳಿವೆ. ವಿವರಗಳಿಗೆ: -. ಮತ್ತು . ಜಾಲತಾಣಗಳನ್ನು ನೋಡಿ. * ಅನಿಮಾಸ್ಟರ್, ಗುಟ್ಟಹಳ್ಳಿ, ಬೆಂಗಳೂರು. ಅನಿಮೇಷನ್ & ಮಲ್ಟಿಮೀಡಿಯ ಡಿಸೈನ್‌ನಲ್ಲಿ ಬಿವಿಎ ಪದವಿ. ಮಾಹಿತಿಗೆ: . * ಅರೆನಾ ಅನಿಮೇಷನ್, ಬೆಂಗಳೂರು. ರಾಜ್ಯದ ಸುಮಾರು 20 ಕಡೆ ತರಬೇತಿ ಕೇಂದ್ರಗಳಿವೆ. ಅನಿಮೇಷನ್-ಮಲ್ಟಿಮೀಡಿಯ ಸಂಬಂಧಿಸಿದಂತೆ ಪದವಿ ಹಾಗೂ ಅಲ್ಪಾವಧಿಯ ಕೋರ್ಸ್‌ಗಳು. ಮಾಹಿತಿಗೆ: -./--. * ಮಾಯಾ ಅಕಾಡೆಮಿ ಆಫ್ ಅಡ್ವಾನ್ಸ್‌ಡ್ ಸಿನಿಮಾಟಿಕ್ಸ್ (ಮ್ಯಾಕ್), ಬೆಂಗಳೂರು. ಕತ್ರಿಗುಪ್ಪೆ, ಮಲ್ಲೇಶ್ವರಂ, ಜಯನಗರ ಸೇರಿದಂತೆ ಬೆಂಗಳೂರಿನ ಹಲವೆಡೆ ಹಾಗೂ ಮಂಗಳೂರು, ಮೈಸೂರುಗಳಲ್ಲಿ ಕೇಂದ್ರಗಳಿವೆ. 3ಡಿ ಅನಿಮೇಷನ್, ವಿಎಫ್‌ಎಕ್ಸ್, ಮಲ್ಟಿಮೀಡಿಯ & ಡಿಸೈನ್ ಸಂಬಂಧಿಸಿದ ಕೋರ್ಸ್‌ಗಳು. ಮಾಹಿತಿಗೆ: . ಮಾಧ್ಯಮ ಜಗತ್ತು!: ಪತ್ರಿಕೆ, ಟಿ.ವಿ.ಯಂತಹ ಸಾಂಪ್ರದಾಯಿಕ ಮಾಧ್ಯಮಗಳ ಜೊತೆಗೆ, ಅಂತರ್ಜಾಲ, ಸಿನಿಮಾ, ಜಾಹೀರಾತು, ಸಾರ್ವಜನಿಕ ಸಂಪರ್ಕ ಕ್ಷೇತ್ರಗಳು ವಿಸ್ತಾರವಾಗಿ ಬೆಳೆದಿರುವುದರಿಂದ ಪತ್ರಿಕೋದ್ಯಮ/ ಮಾಧ್ಯಮ ಅಧ್ಯಯನದಲ್ಲಿ ಒಳ್ಳೆಯ ತರಬೇತಿ ಪಡೆದವರಿಗೆ ಬೇಡಿಕೆಯಿದೆ. ವಿವರಗಳಿಗೆ: ./BLcz5N ಮತ್ತು . ಜಾಲತಾಣಗಳನ್ನು ನೋಡಿ. ಕರ್ನಾಟಕದ ಬಹುತೇಕ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗಗಳಿವೆ. ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಜರ್ನಲಿಸಂ & ನ್ಯೂ ಮೀಡಿಯಾದಂತಹ ಖಾಸಗಿ ಸಂಸ್ಥೆಗಳಿವೆ. ಪದವಿ ಹಂತದಲ್ಲಿ ಪತ್ರಿಕೋದ್ಯಮವನ್ನು ಕಲಿಸುವ ಸುಮಾರು 150 ಕಾಲೇಜುಗಳು ಕರ್ನಾಟಕದಲ್ಲಿವೆ. ಎಲ್ಲ ಕ್ಷೇತ್ರಕ್ಕೂ ಬೇಕು ಅನಿಮೇಷನ್ ಇತ್ತೀಚೆಗೆ ಡಿಸೈನ್ ಎನ್ನುವುದು ಎಲ್ಲರಿಗೂ ಬೇಕು. ಡಾಕ್ಟರ್, ಲಾಯರ್, ಜರ್ನಲಿಸ್ಟ್ – ಹೀಗೆ ಎಲ್ಲಾ ಕ್ಷೇತ್ರದಲ್ಲೂ ತಮ್ಮ ತಮ್ಮ ಕೆಲಸಗಳಿಗೆ ಅನುಕೂಲ ಹಾಗೂ ಅವಶ್ಯಕತೆ ಇರುವ ಹಾಗೆ ಡಿಸೈನ್‌ಗಳನ್ನು ಬಳಸುತ್ತಾರೆ. ಟಿ.ವಿ., ಪತ್ರಿಕೆ ಎಲ್ಲಾ ಕಡೆಗೂ ಡಿಸೈನ್, ಅನಿಮೇಷನ್ ಬೇಕೇಬೇಕು. ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್‌ಗಳ ಬಳಕೆ ಇರುವುದರಿಂದ ಅಲ್ಲಿ ಹೆಚ್ಚು ಹೆಚ್ಚು 2ಡಿ ಮತ್ತು 3ಡಿ ತಂತ್ರಜ್ಞಾನವನ್ನು ಬಳಸುತ್ತಾರೆ. ಯಾವುದೇ ಕ್ಷೇತ್ರ ತೆಗೆದುಕೊಂಡರೂ ಇಂದು ಅನಿಮೇಷನ್ ಇಲ್ಲದ ಕ್ಷೇತ್ರವಿಲ್ಲ ಎನ್ನುವಂತಾಗಿದೆ. ಅನಿಮೇಷನ್‌ ಕೋರ್ಸ್ ಮಾಡಿದವರಿಗೆ ಕೇವಲ ಭಾರತದಲ್ಲಿ ಮಾತ್ರವಲ್ಲ, ವಿಶ್ವದಾದ್ಯಂತ ಅನೇಕ ಕಡೆ ಕೆಲಸದ ಅವಕಾಶಗಳಿವೆ. ಅಲ್ಲದೇ ಈಗ ಅತ್ಯಂತ ಹೆಚ್ಚು ಉದ್ಯೋಗಾವಕಾಶ ನೀಡುವ ಕೋರ್ಸ್‌ಗಳಲ್ಲಿ ಒಂದು ಎಂಬಂತಾಗಿದೆ. ಹಿಂದೆ ನಾವು ಈ ಕೋರ್ಸ್‌ಗಳ ಬಗ್ಗೆ ಜನರಿಗೆ - ಈ ಕೋರ್ಸ್ ಏನು, ಇದರಲ್ಲಿ ಏನೇನಿದೆ ಎಂಬುದನ್ನು ತಿಳಿಸಿ ಹೇಳಬೇಕಾಗಿತ್ತು. ಇಂದು ಆ ಪರಿಸ್ಥಿತಿಯಿಲ್ಲ. ಜನರಿಗೆ ಈ ಕೋರ್ಸ್‌ನ ಬಗ್ಗೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಸಾಕಷ್ಟು ಅರಿವಿದೆ. ಬಿ.ವಿ.ಎ. (ಬ್ಯಾಚುಲರ್ ಆಫ್ ವಿಷುವಲ್ ಆರ್ಟ್ಸ್ ಇನ್ ಅನಿಮೇಷನ್‌ ಅಂಡ್ ಮಲ್ಟಿಮೀಡಿಯಾ) 4 ವರ್ಷದ ಪದವಿ ಕೋರ್ಸ್‌. ಇದನ್ನು ಓದಿದವರು ಅಂತರರಾಷ್ಟ್ರೀಯ ಮಟ್ಟದಲ್ಲೂ ಕೆಲಸ ಗಿಟ್ಟಿಸಿಕೊಳ್ಳಬಹುದು. ಮೊದಲು ಇದು 3 ವರ್ಷದ ಸಾಮಾನ್ಯ ಬಿ.ಎಸ್ಸಿ. ಪದವಿ ಆಗಿದ್ದು ಯುಜಿಸಿ 2 ವರ್ಷದ ಹಿಂದೆ ಇದನ್ನು ಆರ್ಟ್ಸ್ ಡಿಗ್ರಿಯಾಗಿ 4 ವರ್ಷದ ವೃತ್ತಿಪರ ಕೋರ್ಸ್ (ಪ್ರೊಫೆಶನಲ್ ಕೋರ್ಸ್) ಆಗಿ ಬದಲಾಯಿಸಿದೆ. ಮುಂದೆ ಇದರಲ್ಲಿ ಸ್ನಾತಕೋತ್ತರ ಪದವಿಯನ್ನು ಮಾಡಬಹುದು. ಅನಿಮೇಷನ್‌ ಓದಿದವರು ಸ್ಟೋರಿ ಬೋರ್ಡ್ ಆರ್ಟಿಸ್ಟ್, ಅನಿಮೇಟರ್, ವಿಎಫ್‌ಎಕ್ಸ್ ವಿಡಿಯೊ ಎಡಿಟರ್ ಸೇರಿದಂತೆ ಅನೇಕ ಕಡೆ ಕೆಲಸ ಮಾಡಬಹುದು. -ನಕುಲ್ ಸೈನಿ,ವಿಭಾಗದ ಮುಖ್ಯಸ್ಥ,ಅನಿಮಾಸ್ಟರ್ ಕಾಲೇಜ್‌, ಬೆಂಗಳೂರು ಡಿಜಿಟಲ್ ಮಾರ್ಕೆಟಿಂಗ್ ಜಗತ್ತೆಲ್ಲ ಡಿಜಿಟಲ್ ಆಗಿರುವ ಹೊಸ ಕಾಲದಲ್ಲಿ ಸಣ್ಣ-ದೊಡ್ಡ ಉದ್ದಿಮೆಗಳಲ್ಲಿರುವವರೂ ಆನ್‌ಲೈನ್ ತಂತ್ರಜ್ಞಾನ ಅವಲಂಬಿಸದೆ ಬೇರೆ ದಾರಿಯಿಲ್ಲ. ವಿಡಿಯೊ/ಆಡಿಯೊ ಜಾಹೀರಾತುಗಳಿಂದ ತೊಡಗಿ ಇಂಟರ‍್ಯಾಕ್ಟಿವ್ ತಂತ್ರಜ್ಞಾನ, ಮೊಬೈಲ್ ಮಾರ್ಕೆಟಿಂಗ್, ಸರ್ಚ್ ಎಂಜಿನ್ ಮಾರ್ಕೆಟಿಂಗ್, ಸಾಮಾಜಿಕ ಮಾಧ್ಯಮಗಳ ಬಳಕೆ, ಇ-ಕಾಮರ್ಸ್, ಇ-ಮೇಲ್ ಮಾರ್ಕೆಟಿಂಗ್, ವೆಬ್‌ ಡಿಸೈನಿಂಗ್, ಕಂಟೆಂಟ್ ಮ್ಯಾನೇಜ್‍ಮೆಂಟ್ ಇತ್ಯಾದಿಗಳು ಇಂದು ಅನಿವಾರ್ಯವಾಗಿವೆ. ಇದಕ್ಕೆಂದೇ ಹಲವು ಕೋರ್ಸ್‌ಗಳೂ ಬಂದಿವೆ. ವಿವರಗಳಿಗೆ: digitalacademy360. ಮತ್ತು ./ ಜಾಲತಾಣಗಳನ್ನು ನೋಡಿ. * ಡಿಜಿಟಲ್ ಅಕಾಡೆಮಿ 360 - ಬೆಂಗಳೂರಿನಲ್ಲಿ ಜಯನಗರ, ಇಂದಿರಾನಗರ, ಮಲ್ಲೇಶ್ವರಂ ಮತ್ತಿತರ ಕಡೆ ಕೇಂದ್ರಗಳಿವೆ. ವಿವಿಧ ಬಗೆಯ ಡಿಜಿಟಲ್ ಮಾರ್ಕೆಟಿಂಗ್ ಸರ್ಟಿಫಿಕೇಟ್ ಕೋರ್ಸುಗಳು. ಮಾಹಿತಿಗೆ: digitalacademy360. * ಇಂಟರ್‌ನೆಟ್‌ & ಮೊಬೈಲ್ ರಿಸರ್ಚ್ ಇನ್‍ಸ್ಟಿಟ್ಯೂಟ್, ಎಂ.ಜಿ. ರಸ್ತೆ, ಬೆಂಗಳೂರು. ಡಿಜಿಟಲ್ ಮಾರ್ಕೆಟಿಂಗ್ ಹಾಗೂ ಡಿಜಿಟಲ್ ಅನಾಲಿಟಿಕ್ಸ್ ಕೋರ್ಸ್‌ಗಳು. ಮಾಹಿತಿಗೆ: . * ಡಿಜಿಟಲ್ ಲವ್, ಎಚ್‌ಎಸ್‌ಆರ್ ಲೇಔಟ್, ಬೆಂಗಳೂರು. ಡಿಜಿಟಲ್ ಮಾರ್ಕೆಟಿಂಗ್ ತರಬೇತಿ. ಮಾಹಿತಿಗೆ: . ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.