ಎಸ್ಸೆಸ್ಸೆಲ್ಸಿ: ಹಾವೇರಿಗೆ 19ನೇ ಸ್ಥಾನ ಹಾವೇರಿ:ಜಿಲ್ಲೆಯು ಎಸ್ಸೆಸ್ಸೆಲ್ಸಿಯಲ್ಲಿ ಶೇ 79.75 ಫಲಿತಾಂಶದೊಂದಿಗೆ 19ನೇ ಸ್ಥಾನ ಪಡೆದಿದೆ. ಕಳೆದ ವರ್ಷ (2017–18) ಶೇ 76.76 ಫಲಿತಾಂಶದೊಂದಿಗೆ 23ನೇ ಸ್ಥಾನ ಪಡೆದಿತ್ತು. ಈ ಬಾರಿ ಶೇ 2.99 ಫಲಿತಾಂಶ ಹೆಚ್ಚಳದೊಂದಿಗೆ ರ್‍ಯಾಂಕ್ ಪಟ್ಟಿಯಲ್ಲಿ ನಾಲ್ಕು ಸ್ಥಾನ ಮೇಲಕ್ಕೇರಿದೆ. ಜಿಲ್ಲೆಯ 73 ಕೇಂದ್ರಗಳಲ್ಲಿ ಮಾರ್ಚ್‌ 21ರಿಂದ ಏಪ್ರಿಲ್ 4ರ ತನಕ ಪರೀಕ್ಷೆಗಳು ನಡೆದಿದ್ದವು. 21,001 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಬಾರಿ 10 ರೊಳಗಿನ ರ್‍ಯಾಂಕ್ ಪಡೆಯುವ ಗುರಿ ಇತ್ತು. ಆದರೆ, ಕಳೆದ ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 20ರೊಳಗಿನ ಸ್ಥಾನ ಪಡೆದಿರುವುದು ಇಲಾಖೆಯು ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ. ಈ ಬಾರಿ ಫಲಿತಾಂಶ ಹೆಚ್ಚಳಕ್ಕೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೆವು. ಇನ್ನೂ ಉತ್ತಮ ರ್‍ಯಾಂಕ್‌ನ ನಿರೀಕ್ಷೆ ಇತ್ತು. ಆದರೆ, ಕಳೆದ ಬಾರಿಗಿಂತ ಹೆಚ್ಚಿನ ಫಲಿತಾಂಶವು ಸ್ವಲ್ಪ ನೆಮ್ಮದಿ ನೀಡಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನಪ್ಪ ಎಂ. ವಡಗೇರಿ ‘ಪ್ರಜಾವಾಣಿ’ಗೆ ತಿಳಿಸಿದರು. ಎಸ್ಸೆಸ್ಸೆಲ್ಸಿಯಲ್ಲಿ ಹಾವೇರಿ ಜಿಲ್ಲೆಯ ಸಾಧನೆ ವರ್ಷ; ಫಲಿತಾಂಶ (ಶೇ); ಸ್ಥಾನ 2018–19; 79.75; 19 2017–18; 76.76; 23 2016–17; 70.46; 26 2015–16; 75.45; 28 2014–15; 85.59; 21 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.