ವಿದ್ಯಾರ್ಥಿ ವೇತನ ಕೈಪಿಡಿ ವರ್ಗ: ಪ್ರತಿಭೆ ಆಧರಿತ ವಿದ್ಯಾರ್ಥಿ ವೇತನ: ಯುಪಿಇಎಸ್‍ಇಎಟಿ ಬಿ-ಟೆಕ್ ವಿದ್ಯಾರ್ಥಿವೇತನ- ಯುಪಿಇಎಸ್ 2019 ವಿವರ: ಪೆಟ್ರೋಲಿಯಂ ಮತ್ತು ಇಂಧನ ವಿಶ್ವವಿದ್ಯಾಲಯವು ಪೆಟ್ರೋಲಿಯಂ ಮತ್ತು ಇಂಧನ ಪದವಿ ಓದಬಯಸುವ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ನೀಡಲಿದೆ. ಅರ್ಹತೆ: 10 ಮತ್ತು 12ನೇ ತರಗತಿಯಲ್ಲಿ (ಪಿಸಿಎಂ) ಶೇ 85ಕ್ಕೂ ಹಚ್ಚು ಅಂಕಗಳೊಂದಿಗೆ ತೇರ್ಗಡೆಯಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಆರ್ಥಿಕ ನೆರವು ಮತ್ತು ಸೌಲಭ್ಯ: ಉತ್ತರಾಖಂಡ ರಾಜ್ಯದ ವಿದ್ಯಾರ್ಥಿಗಳಲ್ಲಿ ಬೋಧನಾ ಶುಲ್ಕದಲ್ಲಿ ಬಾಲಕರಿಗೆ ಶೇ 25 ಹಾಗೂ ಬಾಲಕಿಯರಿಗೆ ಶೇ 35ರಷ್ಟು ವಿನಾಯಿತಿ ಸಿಗಲಿದೆ. ಅಲ್ಲದೆ ಸಾಮಾನ್ಯ ವರ್ಗದ ಅರ್ಹ ಶೇ 10ರಷ್ಟು ವಿದ್ಯಾರ್ಥಿಗಳಿಗೆ ಶೇ 50ರಷ್ಟು ಬೋಧನಾ ಶುಲ್ಕ ವಿನಾಯಿತಿ ಸಿಗಲಿದೆ. ಆಯ್ಕೆಯಾದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದರೆ ಅವರು 3 ಅಥವಾ 4ನೇ ಸೆಮಿಸ್ಟರ್‌ನಲ್ಲಿ ಮತ್ತೊಮ್ಮೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು. ಕೊನೆಯ ದಿನ: 2019ರ ಮೇ 8 ಅರ್ಜಿ ಸಲ್ಲಿಕೆ ವಿಧಾನ: ಆನ್‍ಲೈನ್ ಮೂಲಕ ಮಾಹಿತಿಗೆ: ://.b4s.//UBS3 *** ವರ್ಗ: ಸಂಶೋಧನಾ ಹಂತ ವಿದ್ಯಾರ್ಥಿ ವೇತನ: ಫುಲ್‍ಬ್ರೈಟ್-ನೆಹರೂ ಡಾಕ್ಟರಲ್ ರಿಸರ್ಚ್ ಫೆಲೋಶಿಪ್- 2020-2021 ವಿವರ: ಅಮೆರಿಕ- ಇಂಡಿಯಾ ಫೌಂಡೇಷನ್ (ಯುಎಸ್‍ಐಇಎಫ್) ಈ ವಿದ್ಯಾರ್ಥಿ ವೇತನ ನೀಡುತ್ತದೆ. ಅಮೆರಿಕ ಮತ್ತು ಭಾರತದಲ್ಲಿ ಸಂಶೋಧನಾ ಚಟುವಟಿಕೆ ಕೈಗೊಳ್ಳುವವರನ್ನು ಇದು ಪ್ರೋತ್ಸಾಹಿಸುತ್ತದೆ. ಒಂಬತ್ತು ತಿಂಗಳ ಆರ್ಥಿಕ ನೆರವು, ಪ್ರಯೋಗಾಲಯ ಬಳಕೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಈ ವಿದ್ಯಾರ್ಥಿ ವೇತನ ಒದಗಿಸುತ್ತದೆ. ಅರ್ಹತೆ: ದೇಶದ ಸಂಶೋಧನಾ ಅಧ್ಯಯನ ಕೇಂದ್ರಗಳಲ್ಲಿ ನೊಂದಾಯಿಸಿರುವ ಪ್ರೀ- ಪಿಎಚ್.ಡಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಆರ್ಥಿಕ ನೆರವು: ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಮಾಸಿಕ ಸ್ಟೈಫಂಡ್ ಸಿಗುತ್ತದೆ. ಅಲ್ಲದೆ ಅಮೆರಿಕ ವಿಸಾ (ಜೆ1) ಪಡೆಯಲು ಸಹಕಾರ, ವೈದ್ಯಕೀಯ ವಿಮೆ, ವಿಮಾನಯಾನದ ಶುಲ್ಕವನ್ನು ಭರಿಸಲಾಗುತ್ತದೆ. ಕೊನೆಯ ದಿನ: 2019ರ ಮೇ 15 ಅರ್ಜಿ ಸಲ್ಲಿಕೆ ವಿಧಾನ: ಆನ್‍ಲೈನ್ ಮೂಲಕ ಮಾಹಿತಿಗೆ: ://.b4s.//FDR4 *** ವರ್ಗ: ಸಂಶೋಧನಾ ಹಂತ ವಿದ್ಯಾರ್ಥಿ ವೇತನ: ಎಸ್‍ಇಆರ್‌ಬಿ ನ್ಯಾಷನಲ್ ಪೋಸ್ಟ್ ಡಾಕ್ಟರಲ್ ಫೆಲೋಶಿಪ್ (ಎನ್-ಪಿಡಿಎಫ್) 2019 ವಿವರ: ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ಎಂಜಿನಿಯರಿಂಗ್ ಸಂಶೋಧನಾ ಮಂಡಳಿ (ಎಸ್‍ಇಆರ್‌ಬಿ) ಈ ವಿದ್ಯಾರ್ಥಿ ವೇತನ ನೀಡುತ್ತದೆ. ವಿಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳುವ ಯುವ ಸಂಶೋಧಕರನ್ನು ಉತ್ತೇಜಿಸಲು ಮಂಡಳಿ ಇದನ್ನು ಸ್ಥಾಪಿಸಿದೆ. ಈ ಮೂಲಕ ಅದು ಆರ್ಥಿಕ ನೆರವು ಒದಗಿಸುತ್ತದೆ. ಅರ್ಹತೆ: ಪಿಎಚ್.ಡಿ/ಎಂ.ಎಸ್/ಎಂ.ಡಿ ಪದವೀಧರರು ಪೋಸ್ಟ್ ಡಾಕ್ಟರಲ್ ಸಂಶೋಧನಾ ಚಟುವಟಿಕೆ ಕೈಗೊಳ್ಳಲು ಅರ್ಜಿ ಸಲ್ಲಿಸಬಹುದು. ಪಿಎಚ್.ಡಿ ಪ್ರಬಂಧ ಸಲ್ಲಿಸಿರುವ, ಪಿಎಚ್.ಡಿ ಪದವಿಯ ಅಧಿಸೂಚನೆಯಷ್ಟೇ ಬಾಕಿ ಇರುವ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದು. ಅರ್ಜಿದಾರರ ವಯಸ್ಸು 35 ಮೀರಿರಬಾರದು. ಅಲ್ಪಸಂಖ್ಯಾತರು ಮತ್ತು ಮಹಿಳಾ ಅಭ್ಯರ್ಥಿಗಳಿಗೆ ವಿನಾಯಿತಿ ಇರುತ್ತದೆ. ಆರ್ಥಿಕ ನೆರವು ಮತ್ತು ಸೌಲಭ್ಯ: ಆಯ್ಕೆಯಾದ ಅರ್ಹ ಅಭ್ಯರ್ಥಿಗಳಿಗೆ ತಿಂಗಳಿಗೆ ₹ 55 ಸಾವಿರ ಸ್ಟೈಫಂಡ್ ಸಿಗಲಿದೆ. ಪದವಿ ಪ್ರಮಾಣ ಪತ್ರದ ನಿರೀಕ್ಷೆಯಲ್ಲಿರುವ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹ 35 ಸಾವಿರ ಸ್ಟೈಫಂಡ್ ದೊರೆಯಲಿದೆ. ಅಲ್ಲದೆ ಆಯ್ಕೆಯಾಗುವ ಎಲ್ಲ ಅಭ್ಯರ್ಥಿಗಳಿಗೆ ಸಂಶೋಧನಾ ಅನುದಾನವಾಗಿ ವಾರ್ಷಿಕ ₹ 2 ಲಕ್ಷ ಹಾಗೂ ಸಾಂದರ್ಭಿಕ ಅನುದಾನ ವಾರ್ಷಿಕ ₹ 1 ಲಕ್ಷ ದೊರೆಯಲಿದೆ. ಕೊನೆಯ ದಿನ: 2019 ಮೇ 30 ಅರ್ಜಿ ಸಲ್ಲಿಕೆ ವಿಧಾನ: ಆನ್‍ಲೈನ್ ಮೂಲಕ ಮಾಹಿತಿಗೆ: ://.b4s.//SNPDF290 *** ಕೃಪೆ: .buddy4study. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.