ವಿದ್ಯಾರ್ಥಿ ವೇತನ ಕೈಪಿಡಿ ವರ್ಗ: ಅಂತರರಾಷ್ಟ್ರೀಯ ಹಂತ ವಿದ್ಯಾರ್ಥಿ ವೇತನ: ಟ್ರಾನ್ಸ್‌ಫಾರ್ಮ್‌ ಟುಗೆದರ್‌ ಸ್ಕಾಲರ್‌ಶಿಪ್ಸ್‌, ಷೆಫಿಲ್ಡ್ ಹೇಲಂವಿಶ್ವವಿದ್ಯಾಲಯ- 2019 ವಿವರ: ಬ್ರಿಟನ್‍ನ ಷೆಫಿಲ್ಡ್ ಹೇಲಂ ವಿಶ್ವವಿದ್ಯಾಲಯವು ತನ್ನಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡ ಬಯಸುವ ಭಾರತೀಯ ಅರ್ಹ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ನೀಡಲಿದೆ. ಅಂತರರಾಷ್ಟ್ರೀಯ ಮಟ್ಟದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ಆರ್ಥಿಕ ನೆರವು ನೀಡುವ ಮೂಲಕ ಉನ್ನತ ಶಿಕ್ಷಣ ಕೈಗೊಳ್ಳುವಂತೆ ಪ್ರೋತ್ಸಾಹಿಸುವ ಉದ್ದೇಶವನ್ನು ಇದು ಹೊಂದಿದೆ. ಅರ್ಹತೆ: ಷೆಫಿಲ್ಡ್ ವಿ.ವಿಯಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪ್ರವೇಶ ಪಡೆದಿರುವ ಭಾರತೀಯ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳಿಗೆ ಇಂಗ್ಲಿಷ್ ಪ್ರೌಢಿಮೆ ಇರಬೇಕು. ಆರ್ಥಿಕ ನೆರವು ಮತ್ತು ಸೌಲಭ್ಯ: ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕದ ಶೇ 50ರಷ್ಟು ಮೊತ್ತವನ್ನು ಈ ವಿದ್ಯಾರ್ಥಿ ವೇತನವೇ ಭರಿಸುತ್ತದೆ. ಕೊನೆಯ ದಿನ: 2019 ಮೇ 31 ಅರ್ಜಿ ಸಲ್ಲಿಕೆ ವಿಧಾನ: ಆನ್‍ಲೈನ್ ಮೂಲಕ ಮಾಹಿತಿಗೆ: ://.b4s.//TTS7 *** ವರ್ಗ: ಮೆರಿಟ್ ಮತ್ತು ಆದಾಯ ಆಧಾರಿತ ವಿದ್ಯಾರ್ಥಿ ವೇತನ: ಶೈಕ್ಷಣಿಕ ಶ್ರೇಷ್ಠತೆ ಸಲುವಾಗಿ ನೀಡುವ ಡಾ. ಬಿ.ಆರ್. ಮತ್ತು ಸಿ. ಆರ್. ಶೆಟ್ಟಿ ವಿದ್ಯಾರ್ಥಿ ವೇತನ ವಿವರ: ಡಾ. ಬಿ.ಆರ್. ಮತ್ತು ಸಿ.ಆರ್. ಶೆಟ್ಟಿ ಪ್ರತಿಷ್ಠಾನ ಈ ವಿದ್ಯಾರ್ಥಿ ವೇತನದ ಮೂಲಕ ಹಣಕಾಸಿನ ಅಗತ್ಯ ಇರುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಒದಗಿಸುತ್ತದೆ. ರೇಡಿಯೊ ಥೆರಪಿ, ನರ್ಸಿಂಗ್, ಡಯಾಲಿಸಿಸ್, ಅನಸ್ತೇಷಿಯಾ ಟೆಕ್ನಾಲಜಿ, ರೀನಲ್ ಡಯಾಲಿಸಿಸ್ ಟೆಕ್ನಾಲಜಿ, ಇಮೇಜಿಂಗ್ ಟೆಕ್ನಾಲಜಿ, ಫಿಸಿಯೋಥೆರಪಿ, ಎಎನ್‍ಎಕ್ಸ್, ಎಕ್ಸ್-ರೇ ತಂತ್ರಜ್ಞಾನ ವಿಷಯಗಳಲ್ಲಿ ಮೊದಲ ಮತ್ತು ಎರಡನೇ ವರ್ಷದ ಬಿ.ಎಸ್‌ಸಿ. ಮತ್ತು ಮೊದಲ ವರ್ಷದ ಡಿಪ್ಲೊಮಾ ಕೋರ್ಸ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಹತೆ: ಅರ್ಜಿದಾರರು ಉಡುಪಿ ನಿವಾಸಿಯಾಗಿರಬೇಕು. ಅಂಗವಿಕಲರು, ಸಿಂಗಲ್‌ ಪೇರೆಂಟ್‌ ಅರ್ಜಿದಾರರಿಗೆ ಆದ್ಯತೆ ನೀಡಲಾಗುತ್ತದೆ. ಅಂತೆಯೇಕ್ಯಾನ್ಸರ್‌, ಎಚ್‌ಐವಿ, ಎಂಡೋಸಲ್ಫಾನ್‌ ಪೀಡಿತರ ಕುಟುಂಬದವರ ಮಕ್ಕಳಿಗೆ ಹಾಗೂ ಬೀಡಿ ಕಾರ್ಮಿಕರ ಮಕ್ಕಳಿಗೆ ವಿಶೇಷ ಪ್ರಾಶಸ್ತ್ಯ ನೀಡಲಾಗುತ್ತದೆ. ಆರ್ಥಿಕ ನೆರವು ಮತ್ತು ಸೌಲಭ್ಯ: ಆಯ್ಕೆಯಾಗುವವರಿಗೆ ₹ 60,000 ನೆರವು. ಅರ್ಜಿ ಸಲ್ಲಿಸಲು ಕೊನೆಯ ದಿನ: 2019ರ ಜೂನ್‌ 30 ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ ಮಾಹಿತಿಗೆ: ://.b4s.//DB1 *** ವರ್ಗ: ಸಂಶೋಧನಾ ಹಂತ ವಿದ್ಯಾರ್ಥಿ ವೇತನ: ಜವಾಹರಲಾಲ್‌ ನೆಹರೂ ಸ್ಮಾರಕ ನಿಧಿ ವಿದ್ಯಾರ್ಥಿವೇತನ– 2019 ವಿವರ:ಜವಾಹರಲಾಲ್‌ ನೆಹರೂ ಸ್ಮಾರಕ ನಿಧಿ ಮತ್ತು ಮಾನವ ಸಂಪನ್ಮೂಲ ಸಚಿವಾಲಯ ಪಿಎಚ್‌.ಡಿ. ಸಂಶೋಧನಾರ್ಥಿಗಳಿಗೆ ಈ ವಿದ್ಯಾರ್ಥಿವೇತನನೀಡುತ್ತವೆ. ಆಯ್ಕೆಯಾಗುವ ಸಂಶೋಧಕರಿಗೆ ಮಾಸಿಕ ಶಿಷ್ಯವೇತನ ದೊರೆಯುತ್ತದೆ. ಅರ್ಹತೆ: ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಶೇ 60ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರುವ ಪಿಎಚ್‌.ಡಿ. (ಪೂರ್ಣಾವಧಿ ) ಸಂಶೋಧನಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿ ವಯೋಮಿತಿ 35 ವರ್ಷ ಮೀರಬಾರದು. ಅರ್ಜಿದಾರರು ಭಾರತೀಯ ಪ್ರಜೆಯಾಗಿರಬೇಕು. ಆರ್ಥಿಕ ನೆರವು ಮತ್ತು ಸೌಲಭ್ಯ: ಆಯ್ಕೆಯಾಗುವ ಸಂಶೋಧನಾರ್ಥಿಗಳಿಗೆ ತಿಂಗಳಿಗೆ ₹ 18 ಸಾವಿರದ ಜತೆಗೆ ವಾರ್ಷಿಕ ₹ 15,000 ಆರ್ಥಿಕ ನೆರವು ದೊರೆಯುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನ: 2019ರ ಮೇ 31 ಅರ್ಜಿ ಸಲ್ಲಿಕೆ ವಿಧಾನ: ಆಫ್‌ಲೈನ್‌ ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ. ಮಾಹಿತಿಗೆ: ://.b4s.//JNM12 *** ಕೃಪೆ: .buddy4study. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.