ವಿದ್ಯಾರ್ಥಿ ವೇತನ ಕೈಪಿಡಿ ವರ್ಗ: ಮೆರಿಟ್ ಆಧಾರಿತ ವಿದ್ಯಾರ್ಥಿ ವೇತನ: ಟೆಲ್ ಅವಿವ್ ವಿಶ್ವವಿದ್ಯಾಲಯದ ‘ಸಮ್ಮರ್ ಪ್ರೋಗ್ರಾಮ್’ ಸ್ಕಾಲರ್‌ಶಿಪ್‌- 2019, ಇಸ್ರೆಲ್ ವಿವರ: ‘ಸ್ಮಾರ್ಟ್‌ಸಿಟಿ’, ಆಹಾರ ಸುರಕ್ಷತೆ, ಭದ್ರತೆ ವಿಷಯಗಳಿಗೆ ಸಂಬಂಧಿಸಿದಂತೆ ಇಸ್ರೆಲ್‍ನ ಟೆಲ್ ಅವಿವ್ ವಿಶ್ವವಿದ್ಯಾಲಯ ‘ಸಮ್ಮರ್ ಪ್ರೊಗ್ರಾಮ್’ ಆರಂಭಿಸಿದೆ. ಅರ್ಹತೆ: ಪದವಿ, ಸ್ನಾತಕೋತ್ತರ ಪದವಿ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಯು ಹಿಂದಿನ ಪರೀಕ್ಷೆಯಲ್ಲಿ ಕನಿಷ್ಠ ಶೇ 80ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು. ಸೌಲಭ್ಯ ಮತ್ತು ನೆರವು: ಬೋಧನಾ ಶುಲ್ಕದ ಶೇ 65ರವರೆಗೆ ವಿದ್ಯಾರ್ಥಿ ವೇತನ ಭರಿಸುತ್ತದೆ. ಜತೆಗೆ ವಸತಿ ಮತ್ತು ವೈದ್ಯಕೀಯ ವಿಮೆ ಸೌಲಭ್ಯವೂ ಇರುತ್ತದೆ. ಅರ್ಜಿ ಸಲ್ಲಿಸಲು ಕೊನೆ ದಿನ: 2019ರ ಜೂನ್ 15 ಅರ್ಜಿ ಸಲ್ಲಿಕೆ ವಿಧಾನ: ಆನ್‍ಲೈನ್ ಮೂಲಕ ಮಾತ್ರ ಮಾಹಿತಿಗೆ: ://.b4s.//TAU7 *** ವರ್ಗ: ಆದಾಯ ಆಧಾರಿತ ವಿದ್ಯಾರ್ಥಿ ವೇತನ: ಎಚ್‍ಡಿಎಫ್‍ಸಿ ಬ್ಯಾಂಕ್ ಎಜುಕೇಷನಲ್ ಕ್ರೈಸಿಸ್ ಸ್ಕಾಲರ್‌ಶಿಪ್‌ ಸಪೋರ್ಟ್- 2019 ವಿವರ: ಕೌಟುಂಬಿಕ ಆರ್ಥಿಕ ಸಮಸ್ಯೆಗಳಿಂದ ಶಿಕ್ಷಣ ಮುಂದುವರೆಸಲು ಕಷ್ಟವೆನಿಸುವ ವಿದ್ಯಾರ್ಥಿಗಳಿಗೆ ನೆರವು ನೀಡಲು ಎಚ್‍ಡಿಎಫ್‍ಸಿ ಬ್ಯಾಂಕ್ ಈ ವಿದ್ಯಾರ್ಥಿ ವೇತನ ಆರಂಭಿಸಿದೆ. ಆರ್ಥಿಕ ಸಮಸ್ಯೆ ಕಾರಣಕ್ಕೆ ವಿದ್ಯಾರ್ಥಿಗಳು ಓದನ್ನು ಮೊಟಕುಗೊಳಿಸಬಾರದು ಎಂಬ ಉದ್ದೇಶವನ್ನು ಈ ಸ್ಕಾಲರ್‌ಶಿಪ್‌ ಹೊಂದಿದೆ. ಅರ್ಹತೆ: 6ರಿಂದ 12ನೇ ತರಗತಿ, ಪದವಿ, ಸ್ನಾತಕೋತ್ತರ ಪದವಿ ಕೋರ್ಸ್‌ಗಳು, ಪೂರ್ಣ ಮತ್ತು ಅರೆ ಕಾಲಿಕ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವವರು, ಐಟಿಐ, ಡಿಪ್ಲೊಮಾ, ಪಾಲಿಟೆಕ್ನಿಕ್, ಪಿಎಚ್.ಡಿ. ವ್ಯಾಸಂಗ ಮಾಡುತ್ತಿರುವವರು ಅರ್ಜಿ ಸಲ್ಲಿಸಬಹುದು. ಆರ್ಥಿಕ ತೊಂದರೆಗೆ ಸಿಲುಕಿರುವ ಅಭ್ಯರ್ಥಿಗಳಿಗೆ (ಅನಾಥ, ದೀರ್ಘಕಾಲಿನ ಆರೋಗ್ಯ ಸಮಸ್ಯೆ/ ದುಡಿಯುವ ವ್ಯಕ್ತಿಯ ಮರಣ, ಅಂಗವಿಕಲ) ಆದ್ಯತೆ. ಸೌಲಭ್ಯ ಮತ್ತು ನೆರವು: ಆಯ್ಕೆಯಾಗುವ ಶಾಲಾ ವಿದ್ಯಾರ್ಥಿಗಳಿಗೆ ₹ 10 ಸಾವಿರ, ವಿಶ್ವವಿದ್ಯಾಲಯ, ಐಟಿಐ, ಡಿಪ್ಲೊಮಾ, ಪಾಲಿಟೆಕ್ನಿಕ್‍ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ₹ 25,000 ನೆರವು ದೊರೆಯಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ: 2019ರ ಜೂನ್ 15 ಅರ್ಜಿ ಸಲ್ಲಿಕೆ ವಿಧಾನ: ಆನ್‍ಲೈನ್ ಮೂಲಕ ಮಾತ್ರ ಮಾಹಿತಿಗೆ: ://.b4s.//HEC6 *** ವರ್ಗ: ಮೆರಿಟ್ ಮತ್ತು ಆದಾಯ ಆಧಾರಿತ ವಿದ್ಯಾರ್ಥಿ ವೇತನ: ಉಜ್ವಲ್ ಭವಿಷ್ಯ ಸ್ಕಾಲರ್‌ಶಿಪ್‌ 2019-20 ವಿವರ: ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಕುಟುಂಬದಲ್ಲಿನ 10ನೇ ತರಗತಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣಕ್ಕಾಗಿ 'ವಿ-ಮಾರ್ಟ್' ಈ ವಿದ್ಯಾರ್ಥಿ ವೇತನಕ್ಕೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಅರ್ಹತೆ: 2019ರಲ್ಲಿ 10ನೇ ತರಗತಿ (14ರಿಂದ 16 ವರ್ಷ) ಶೇ 75ಕ್ಕಿಂತ ಹೆಚ್ಚು ಅಂಕಗಳೊಂದಿಗೆ ತೇರ್ಗಡೆಯಾಗಿರುವ ಭಾರತೀಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಆ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ₹ 2 ಲಕ್ಷದೊಳಗಿರಬೇಕು. ಸೌಲಭ್ಯ ಮತ್ತು ನೆರವು: ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ₹ 10 ಸಾವಿರ ನೆರವು ದೊರೆಯಲಿದೆ. ಅಲ್ಲದೆ ಆಯ್ಕೆಯಾಗುವ ಕೆಲ ವಿದ್ಯಾರ್ಥಿಗಳಿಗೆ ₹ 20 ಸಾವಿರ ಆರ್ಥಿಕ ನೆರವು ದೊರೆಯಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ: 2019ರ ಜೂನ್ 30 ಅರ್ಜಿ ಸಲ್ಲಿಕೆ ವಿಧಾನ: ಆನ್‍ಲೈನ್ ಮೂಲಕ ಮಾತ್ರ ಮಾಹಿತಿಗೆ: ://.b4s.//UBS9 *** ಕೃಪೆ: .buddy4study. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.