ಶಿಕ್ಷಕರ ವರ್ಗಾವಣೆ: ಟಿಡಿಎಸ್‌ ಭರ್ತಿಗೆ 25ರವರೆಗೆ ಅವಕಾಶ ಬೆಂಗಳೂರು: ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಸಾಫ್ಟ್‌ವೇರ್‌ ಸಮಸ್ಯೆ ದೊಡ್ಡ ವಿಷಯವಾಗಿದ್ದು, ಶಿಕ್ಷಕರ ಸೇವಾ ಮಾಹಿತಿ (ಟಿಡಿಎಸ್‌) ಭರ್ತಿ ಮಾಡುವುದಕ್ಕೆ ಜೂನ್‌ 25ರವರೆಗೆ ಅವಕಾಶ ನೀಡಲಾಗಿದೆ. ಅರ್ಜಿಗಳ ಪರಿಶೀಲನೆ, ತಿದ್ದುಪಡಿಯಂತಹ ಪ್ರಕ್ರಿಯೆಗಳೂ ಜತೆಜತೆಯಾಗಿಯೇ ನಡೆಯುತ್ತಿದ್ದು, ಸಾಧ್ಯವಾದಷ್ಟು ಬೇಗ ಪ್ರಕ್ರಿಯೆ ಕೊನೆಗೊಳ್ಳಬೇಕೆಂಬುದು ಇಲಾಖೆ ಉದ್ದೇಶ. ತೊಂದರೆ ಆಗದಿರಲಿ ಎಂಬ ಕಾರಣಕ್ಕೆ ಟಿಡಿಎಸ್‌ ಸಲ್ಲಿಕೆಗೆ ಕೊನೆ ದಿನ ವಿಸ್ತರಿಸಲಾಗಿದೆ ಎಂದು ಪ್ರಾಥಮಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.