ವಿದ್ಯಾರ್ಥಿ ವೇತನ ಕೈಪಿಡಿ ವರ್ಗ: ಅಗತ್ಯ ಆಧಾರಿತ ವಿದ್ಯಾರ್ಥಿ ವೇತನ: ಎಸ್‌ಎಚ್‌ಡಿಎಫ್‌ ವಿದ್ಯಾರ್ಥಿ ವೇತನ 2019 ವಿವರ: ವೃತ್ತಿ ಕೋರ್ಸ್‌ಗಳಲ್ಲಿಉನ್ನತ ಶಿಕ್ಷಣ ಕೈಗೊಳ್ಳ ಬಯಸುವ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಸಿಖ್‌ ಮಾನವ ಅಭಿವೃದ್ಧಿ ಪ್ರತಿ ಷ್ಠಾನ (ಎಸ್‌ಎಚ್‌ಡಿಎಫ್‌) ಮತ್ತು ನಿಷ್ಕಾಂ ಸಿಖ್‌ ವೆಲ್‌ಫೇರ್‌ ಕೌನ್ಸಿಲ್‌ ಈ ವಿದ್ಯಾರ್ಥಿ ವೇತನ ನೀಡಲಿದೆ. ಅರ್ಹತೆ: ಹಿಂದಿನ ಎರಡು ಶೈಕ್ಷಣಿಕ ವರ್ಷಗಳಲ್ಲಿ ಶೇ 60ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾಗಿ, ಮಾನ್ಯತೆ ಪಡೆದಿರುವ ಶಿಕ್ಷಣ ಸಂಸ್ಥೆಯಲ್ಲಿ ವೃತ್ತಿ ಶಿಕ್ಷಣ ಕೋರ್ಸ್‌ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ₹ 1.80 ಲಕ್ಷಕ್ಕಿಂತ ಕಡಿಮೆ ಇರಬೇಕು. ಆರ್ಥಿಕ ನೆರವು: ಅಭ್ಯರ್ಥಿಗಳ ವೈಯಕ್ತಿಕ ಅಗತ್ಯಗಳನ್ನು ಆಧರಿಸಿ ಹಾಗೂ ವಿದ್ಯಾರ್ಥಿ ವೇತನ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಆಧರಿಸಿ ಆಯ್ಕೆ ಮಾಡಲಾಗುತ್ತದೆ. ಹೀಗೆ ಆಯ್ಕೆಯಾದವರಿಗೆ ತಲಾ ₹ 30 ಸಾವಿರ ಆರ್ಥಿಕ ನೆರವು ದೊರೆಯಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ: 2019ರ ಜುಲೈ 17 ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ ಮಾಹಿತಿಗೆ::://.b4s.//NSW1 *** ವರ್ಗ: ಪ್ರತಿಭೆ ಆಧಾರಿತ ವಿದ್ಯಾರ್ಥಿ ವೇತನ: ಯುವ ಜನರ ಜಾಗತಿಕ ವಿಡಿಯೊ ಸ್ಪರ್ಧೆ 2019 ವಿವರ:ಹವಾಮಾನ ವೈಪರೀತ್ಯದಿಂದ ಭೂಮಿಯನ್ನು ಉಳಿಸುವ ಕುರಿತುಸ್ಫೂರ್ತಿದಾಯಕ ಕಥೆಗಳ ಕಿರು ವಿಡಿಯೊಗಳನ್ನು ಸಲ್ಲಿಸಲು, ಪರಿಸರ ಸಂರಕ್ಷಣಾ ಉತ್ಸಾಹಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾಗುವವರಿಗೆ ಜಾಗತಿಕ ಮಾನ್ಯತೆ ಜತೆಗೆ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕುರಿತ ಸಮ್ಮೇಳನದಲ್ಲಿ ಭಾಗವಹಿಸುವ ಅವಕಾಶ ದೊರೆಯಲಿದೆ. ಅರ್ಹತೆ: 18ರಿಂದ 30ರ ವಯೋಮಾನದ ಭಾರತೀಯ ಪ್ರಜೆಗಳು ಅರ್ಜಿ ಸಲ್ಲಿಸಬಹುದು. ನೆರವು:ಆಯ್ಕೆಯಾಗುವವರಿಗೆ ಜಾಗತಿಕ ಮನ್ನಣೆ ದೊರೆಯುತ್ತದೆ. ಡಿಸೆಂಬರ್‌ನಲ್ಲಿ ಚಿಲಿಯಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕುರಿತ ಸಮಾವೇಶದಲ್ಲಿ ಭಾಗವಹಿಸಿ, ವಿವಿಧ ನಾಯಕರ ಜತೆ ಸಂವಹನ ನಡೆಸುವ ಅವಕಾಶ ಪಡೆಯಲಿದ್ದಾರೆ. ಅರ್ಜಿ ಸಲ್ಲಿಸಲು ಕೊನೆಯ ದಿನ: 2019ರ ಜುಲೈ 28 ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ ಮಾಹಿತಿಗೆ:://.b4s.//GYV3 *** ವರ್ಗ: ಮೆರಿಟ್ ಮತ್ತು ಆದಾಯ ಆಧಾರಿತ ವಿದ್ಯಾರ್ಥಿ ವೇತನ: ಕಾನೂನು ವಿದ್ಯಾರ್ಥಿಗಳಿಗೆ ನೀಡುವಜಿಇವಿಮೆಮೋರಿಯಲ್ಮೆರಿಟ್ ಸ್ಕಾಲರ್‌ಶಿಪ್‌– 2019 ವಿವರ: ಡಾ. ಗುಲಾಂ ಇ. ವಹನ್ವತಿ ವಿದ್ಯಾರ್ಥಿ ವೇತನ ನಿಧಿ ಈ ವಿದ್ಯಾರ್ಥಿ ವೇತನ ನೀಡುತ್ತದೆ. ದೇಶದ ಪ್ರತಿಷ್ಠಿತ ಕಾನೂನು ಕಾಲೇಜಿನಲ್ಲಿ ಪ್ರವೇಶ ಪಡೆದು ಕಾನೂನು ಪದವಿ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಅರ್ಹತೆ: ಎಲ್‍ಎಲ್‍ಬಿ/ಎಲ್‍ಎಲ್‍ಎಂ ಕೋರ್ಸ್‌ಗಳ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. 2019ರ ಸಿಎಲ್‍ಎಟಿ, ಎಲ್‍ಎಸ್‍ಎಟಿ- ಇಂಡಿಯಾ, ಎಐಎಲ್‍ಇಟಿ ಅಥವಾ ಇತರೆ ಯಾವುದಾದರೂ ಕಾನೂನು ಕೋರ್ಸ್‌ನ ಪ್ರವೇಶ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅದರ ಜತೆಗೆ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ₹ 10 ಲಕ್ಷ ಮೀರಿರಬಾರದು. ಅಲ್ಲದೆ ಅರ್ಜಿದಾರರು 10 ಮತ್ತು 12ನೇ ತರಗತಿಗಳ ಮುಖ್ಯ ಪರೀಕ್ಷೆಗಳಲ್ಲಿ ತಲಾ ಶೇ 60ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಆರ್ಥಿಕ ನೆರವು ಮತ್ತು ಸೌಲಭ್ಯ: ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಖರ್ಚು– ವೆಚ್ಚ ಭರಿಸಲು ವಾರ್ಷಿಕ ₹ 50 ಸಾವಿರದಿಂದ ₹ 2 ಲಕ್ಷದವರೆಗೆ ವಿದ್ಯಾರ್ಥಿ ವೇತನ ದೊರೆಯಲಿದೆ. ಜತೆಗೆ ತರಬೇತಿ ಮತ್ತು ಮೆಂಟರ್‌ಶಿಪ್‌ ಸೌಲಭ್ಯವೂ ಸಿಗಲಿದೆ. ಅರ್ಜಿ ಸಲ್ಲಿಸಲು ಕೊನೆ ದಿನ: 2019ರ ಜುಲೈ 31 ಅರ್ಜಿ ಸಲ್ಲಿಕೆ ವಿಧಾನ: ಆನ್‍ಲೈನ್ ಮೂಲಕ ಮಾಹಿತಿ: ://.b4s.//GMM2 ಕೃಪೆ: .buddy4study. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.