ಕ್ಯಾಟ್‌ ಪರೀಕ್ಷೆ 2019: ಅ.23ರಿಂದ ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳಿ ನವದೆಹಲಿ: ದೇಶದಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಹಾಗೂ ಪ್ರತಿಷ್ಠಿತ ಬಿಸಿನೆಸ್ ಸ್ಕೂಲ್‌ಗಳ (ಬಿ–ಸ್ಕೂಲ್‌) ಪ್ರವೇಶಕ್ಕಾಗಿ ನಡೆಯಲಿರುವಸಾಮಾನ್ಯ ಪ್ರವೇಶ ಪರೀಕ್ಷೆ (ಕ್ಯಾಟ್ 2019)ಯ ಪ್ರವೇಶ ಪತ್ರವನ್ನು ಇದೇ 23ರಂದು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಬರುವ ನವೆಂಬರ್ 24ರಂದು ಕ್ಯಾಟ್‌ ಪರೀಕ್ಷೆ ನಡೆಯಲಿದೆ.ದೇಶದ 140 ನಗರಗಳಲ್ಲಿನಪರೀಕ್ಷೆ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಇದನ್ನೂ ಓದಿ:ಸರ್ಕಾರಿ ಶಾಲೆಯಲ್ಲಿ ಸ್ಮಾರ್ಟ್‌ಕ್ಲಾಸ್ ಕ್ಯಾಟ್‌ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಅಕ್ಟೋಬರ್ 23 (ಬುಧವಾರ)ರಂದು ಸಂಜೆ 5 ಗಂಟೆಯಿಂದ ಪ್ರವೇಶ ಪತ್ರ (ಅಡ್ಮಿಟ್‌ ಕಾರ್ಡ್‌)ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಕ್ಯಾಟ್‌ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳುಐಐಎಂನ ಅಧಿಕೃತ ವೆಬ್‌ಸೈಟ್‌ಗೆ ಲಾಗಿನ್‌ ಆಗಿ ಪ್ರವೇಶ ಪತ್ರಗಳನ್ನು ಪಡೆಯಬಹುದಾಗಿದೆ. ಪರೀಕ್ಷಾರ್ಥಿಗಳುಐಐಎಂವೆಬ್‌ಸೈಟ್‌ಗೆ ಲಾಗಿನ್‌ ಆದ ಬಳಿಕ ರಿಜಿಸ್ಟರ್‌ ನಂಬರ್‌ ಮತ್ತು ಪಾಸ್‌ವರ್ಡ್‌ ನೀಡಿ ಪ್ರವೇಶ ಪತ್ರಗಳನ್ನು ಪಡೆಯಬಹುದು. ಪರೀಕ್ಷೆ ದಿನಾಂಕ: 2019 ನವೆಂಬರ್‌ 24 ಐಐಎಂ ವೆಬ್‌ಸೈಟ್‌:://.. ಇದನ್ನೂ ಓದಿ:ಕಲಿಕೆಗೂ ಬೇಕು ವೈಜ್ಞಾನಿಕ ಮನೋಭಾವ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.