ಮೋಷನ್ ಮ್ಯಾಥ್ಸ್: ಕಪ್‌ಕೇಕ್‌ ಮೋಷನ್ ಮ್ಯಾಥ್ಸ್: ಕಪ್‌ಕೇಕ್‌ ಗಣಿತ ಎಂದರೆ ಕಬ್ಬಿಣ ಕಡಲೆ ಎಂಬುದು ಇಂದಿಗೂ ಅನೇಕ ವಿದ್ಯಾರ್ಥಿಗಳ ಅಭಿಪ್ರಾಯ. ಅನೇಕ ಮಕ್ಕಳು ಶಾಲೆಯಿಂದ ಹೊರ ಹೋದ ಮೇಲೆ ಗಣಿತದ ಗುಣಾಕಾರ, ಭಾಗಾಕಾರ ಕಲಿಯಲು ಹಿಂದೇಟು ಹಾಕುತ್ತಾರೆ. ಮನೆಯಲ್ಲಿ ಗಣಿತದ ವಿಷಯವನ್ನು ಅಭ್ಯಾಸ ಮಾಡುವುದು ಅವರಿಗೆ ಕಷ್ಟ. ಆದರೆ ಮಕ್ಕಳಲ್ಲಿ ಗಣಿತ ಗುಮ್ಮನ ಭಯ ಹೋಗಲಾಡಿಸಿ ಉತ್ಸಾಹದಲ್ಲಿ ಗಣಿತ ಕಲಿಯುವಂತೆ ಮಾಡುವ ಸಲುವಾಗಿ ಈ ಆ್ಯಪ್ ಅನ್ನು ರಚಿಸಲಾಗಿದೆ. ಕಪ್‌ಕೇಕ್ ಮಾರಾಟ ಮಾಡುವ ವ್ಯವಹಾರದ ಮೂಲಕ ಸುಲಭವಾಗಿ ಗಣಿತವನ್ನು ಕಲಿಯಬಹುದಾಗಿದೆ. ಪ್ರತಿ ಕಪ್‌ಕೇಕ್‌ನ ಬೆಲೆ, ಆರ್ಡರ್‌ಗಳನ್ನು ಪೂರೈಸುವುದು, ಬ್ಯುಸಿನೆಸ್‌ಗೆ ಮಾಡಿದ ಸಾಲವನ್ನು ಹಿಂದಿರುಗಿಸುವುದು, ಬೇಕರಿಯನ್ನು ಹೇಗೆ ಯಶಸ್ವಿಯಾಗಿ ನಡೆಸುವುದು ಎಂಬುದೆನಲ್ಲಾ ಮ್ಯಾಥ್ ಮೂಷನ್ ಮೂಲಕ ಕಲಿಯಬಹುದು. ಇದರಲ್ಲಿ ಪ್ರಾಥಮಿಕ ಶಾಲಾ ಹಂತದ ಗಣಿತ ಪಾಠಗಳನ್ನು ಸುಲಭವಾಗಿ ಕಲಿಯಬಹುದಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.