ಪ್ರಜಾವಾಣಿ ಕ್ವಿಜ್ 86 1. ಬ್ಯಾಡ್ಮಿಂಟನ್‍ನ ವಿಶ್ವ ಚಾಂಪಿಯನ್‌ಶಿಪ್‍ನ ಅಂತಿಮಸುತ್ತಿನಲ್ಲಿ ಪಿ.ವಿ. ಸಿಂಧು ಯಾವ ದೇಶದ ಆಟಗಾರ್ತಿಯ ವಿರುದ್ಧ ಗೆಲುವು ಸಾಧಿಸಿದರು? ಅ) ಚೀನಾ ಆ) ಜಪಾನ್ ಇ) ಕೊರಿಯಾ ಈ) ಜಾವಾ 2. ರೋಮನ್ ಅಂಕಿಯಲ್ಲಿ ‘ಐ’ ಎಂಬುದು ಏನನ್ನು ಸೂಚಿಸುತ್ತದೆ? ಅ) 20 ಆ) 100 ಇ) 50 ಈ) 10 3. ಕವಿ ನಿಸಾರ್ ಅಹಮದ್ ಕಾಲೇಜಿನಲ್ಲಿ ಯಾವ ವಿಷಯವನ್ನು ಬೋಧಿಸುವ ಅಧ್ಯಾಪಕರಾಗಿದ್ದರು? ಅ) ಕನ್ನಡ ಆ) ಇಂಗ್ಲಿಷ್ ಇ) ಗಣಿತ ಈ) ಭೂವಿಜ್ಞಾನ 4. ಹಿಂದೂ ಪುರಾಣಗಳ ಪ್ರಕಾರ ಸಮುದ್ರಮಥನ ಕಾಲದಲ್ಲಿ ಹುಟ್ಟಿದ ದೇವತೆ ಯಾರು? ಅ) ಸರಸ್ವತಿ ಆ) ದುರ್ಗೆ ಇ)ಲಕ್ಷ್ಮಿ ಈ) ವಾರಾಹಿ 5. ಸರೋಜಿನಿ ಮಹಿಷಿ ವರದಿ ಕನ್ನಡಿಗರಿಗೆ ಯಾವ ಕ್ಷೇತ್ರದಲ್ಲಿ ಮೀಸಲಾತಿ ಇರಬೇಕೆಂದು ಹೇಳುತ್ತದೆ? ಅ) ಖಾಸಗಿ ಉದ್ಯೋಗ ಆ) ಶಿಕ್ಷಣ ಇ) ರಕ್ಷಣೆ ಈ) ಕೃಷಿ 6. ಉಮರ್ ಖಯ್ಯಾಮ್ ಯಾವ ಬಗೆಯ ಕವಿತೆಗಳಿಗೆ ಪ್ರಸಿದ್ಧನಾದ ಕವಿ? ಅ) ದೋಹೆ ಆ) ಘಸಲ್ ಇ) ರುಬಯ್ಯತ್ ಈ) ಶಾಯರಿ 7. ಅರುಣ್ ಜೇಟ್ಲಿಯವರು ಯಾವ ಖಾತೆಯ ಮಂತ್ರಿಯಾಗಿರಲಿಲ್ಲ? ಅ) ರಕ್ಷಣೆ ಆ) ಕಾನೂನು ಇ) ವಿದೇಶಾಂಗ ಈ) ಹಣಕಾಸು 8. ‘ತೆರೆದ ಮನ’ ಕೃತಿಯ ಲೇಖಕರು ಯಾರು? ಅ) ಎಚ್.ನರಸಿಂಹಯ್ಯ ಆ) ನಿಟ್ಟೂರು ಶ್ರೀನಿವಾಸರಾವ್ ಇ) ಪ್ರಭುಶಂಕರ ಈ) ನ. ಭದ್ರಯ್ಯ 9. ‘ನಿಗಮ್ ಬೋಧ್ ಘಾಟ್’ ಯಾವ ನದಿಯ ದಡದಲ್ಲಿದೆ? ಅ) ಯಮುನಾ ಆ) ಗಂಗಾ ಇ) ತಪತಿ ಈ) ರಾವಿ 10. ಒಂಟಿಕೊಂಬಿನ ಖಡ್ಗಮೃಗ ಯಾವ ರಾಷ್ಟ್ರೀಯ ಉದ್ಯಾನದಲ್ಲಿ ವಿಶೇಷವಾಗಿ ಕಂಡುಬರುತ್ತದೆ? ಅ) ಗಿರ್ ಆ) ಕಾಜಿರಂಗ ಇ) ಜಿಮ್ ಕಾರ್ಬೆಟ್ ಈ) ಬಂಡೀಪುರ ಹಿಂದಿನ ಸಂಚಿಕೆಯ ಸರಿ ಉತ್ತರಗಳು 1. ಮೀಸಲಾತಿ 2. ಯಕ್ಷಗಾನ 3. ಶ್ಯಾಮ ಪ್ರಸಾದ್ ಮುಖರ್ಜಿ 4.ಒಮಾನ್ 5.ಅಲರ್ಜಿ 6.ಶಸ್ತ್ರಾಸ್ತ್ರ ನಿಯಂತ್ರಣ 7. ಶ್ರೀ ಶಾಂತ್ 8.ಬೆಳಕು ತಂದ ಬಾಲಕ 9.ಆದ್ರ್ರತೆ 10. ಸೋನಿಯಾ ಗಾಂಧಿ ಎಸ್‌. ಎಲ್‌. ಶ್ರೀನಿವಾಸ ಮೂರ್ತಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.