ವಿದ್ಯಾರ್ಥಿ ವೇತನ ಕೈಪಿಡಿ ವರ್ಗ: ಮೆರಿಟ್‌ ಆಧಾರಿತ ವಿದ್ಯಾರ್ಥಿ ವೇತನ: ಸ್ಕಾವರ್ಜ್‌ಮನ್‌ ವಿದ್ಯಾರ್ಥಿ ವೇತನ– 2019 ವಿವರ: ಬೀಜಿಂಗ್‌ನ ಸಿಂಘುವಾ ವಿಶ್ವವಿದ್ಯಾಲಯವು ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡ ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನದ ಮೂಲಕ ಅವಕಾಶ ಕಲ್ಪಿಸಿದೆ. ಸ್ಕಾವರ್ಜ್‌ಮನ್‌ ವಿದ್ಯಾರ್ಥಿ ವೇತನ ಕಾರ್ಯಕ್ರಮವು ಚೀನಾ ಮತ್ತು ಭಾರತ ಸಂಬಂಧವನ್ನು ಶೈಕ್ಷಣಿಕವಾಗಿ ವೃದ್ಧಿಸುವಉದ್ದೇಶ ಹೊಂದಿದೆ. ಅರ್ಹತೆ: 18ರಿಂದ 29ರ ವಯೋಮಾನದ ಭಾರತೀಯ ಪದವೀಧರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಐಇಎಲ್‌ಟಿಎಸ್‌, ಟಿಒಇಎಫ್‌ಎಲ್‌ ಅಥವಾ ಟಿಒಇಎಫ್‌ಎಲ್‌ ಐಬಿಟಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಆರ್ಥಿಕ ನೆರವು: ಸಿಂಘುವಾ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಕೋರ್ಸ್‌ನ ಅಧ್ಯಯನಕ್ಕೆ ಬೋಧನಾ ಶುಲ್ಕ, ವಸತಿ, ಸಾರಿಗೆ ಭತ್ಯೆ, ಆರೋಗ್ಯ ವಿಮೆ, ಅಧ್ಯಯನ ಸಾಮಗ್ರಿ ಸೇರಿದಂತೆ ವೈಯಕ್ತಿಕ ಖರ್ಚುವೆಚ್ಚಕ್ಕೆ ಆರ್ಥಿಕ ನೆರವನ್ನು ಈ ವಿದ್ಯಾರ್ಥಿ ವೇತನ ಒದಗಿಸಲಿದೆ. ಕೊನೆಯ ದಿನ: 2019ರ ಸೆಪ್ಟೆಂಬರ್‌ 26 ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ ಮಾಹಿತಿಗೆ: ://.b4s.//SSR8 *** ವರ್ಗ: ಮೆರಿಟ್‌ ಆಧಾರಿತ ವಿದ್ಯಾರ್ಥಿವೇತನ: ಪಿಯರ್ಸನ್ ಮೆಪ್ರೊ ಇಂಗ್ಲಿಷ್ ಸ್ಕಾಲರ್‌ ಪ್ರೋಗ್ರಾಮ್‌– 2019 ವಿವರ: ಭಾರತೀಯ ವಿದ್ಯಾರ್ಥಿಗಳು ಮತ್ತು ವೃತ್ತಿಪರರ ಇಂಗ್ಲಿಷ್ ಓದು, ಬರವಣಿಗೆ, ಮಾತನಾಡುವ ಸಾಮರ್ಥ್ಯವನ್ನು ಸುಧಾರಿಸುವ ಮತ್ತು ಅವರ ವೃತ್ತಿಜೀವನದ ಭವಿಷ್ಯವನ್ನು ಇನ್ನಷ್ಟು ವೃದ್ಧಿಸುವ ಉದ್ದೇಶ ಹೊಂದಿದೆ. ಇಂಗ್ಲಿಷ್ ಭಾಷಾ ಪ್ರಾವೀಣ್ಯ ಪಡೆದ ಉನ್ನತ ಸಾಧಕರಿಗೆ ಈ ವಿದ್ಯಾರ್ಥಿವೇತನ ದೊರೆಯಲಿದೆ. ಅರ್ಹತೆ: 18– 35 ವರ್ಷದೊಳಗಿನ ಭಾರತೀಯ ವಿದ್ಯಾರ್ಥಿಗಳು ಮತ್ತು ವೃತ್ತಿಪರರು ಹಾಗೂ 8 ಜಿಎಸ್‌ಇ ಹಂತ ದಾಟಿರುವವರು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು. ಆರ್ಥಿಕ ನೆರವು ಮತ್ತು ಸೌಲಭ್ಯ: ಆಯ್ಕೆ ಆಗುವವರಿಗೆ ₹ 10 ಸಾವಿರ ವಿದ್ಯಾರ್ಥಿವೇತನ ದೊರೆಯಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2019ರ ಸೆಪ್ಟೆಂಬರ್‌ 30 ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ ಮಾಹಿತಿಗೆ: ://.b4s.//PMES01 *** ವರ್ಗ: ಪ್ರತಿಭೆ ಆಧಾರಿತ ವಿದ್ಯಾರ್ಥಿ ವೇತನ: 24 ಅನುವ್ರತ್‌ ಪ್ರಬಂಧ ಸ್ಪರ್ಧೆ–2019 ವಿವರ: ಅಖಿಲ ಭಾರತೀಯ ಅನುವ್ರತ್‌ ನ್ಯಾಸ್‌ ಸಂಸ್ಥೆಯು ಯುವ ಸಮುದಾಯದಲ್ಲಿ ಸ್ಪರ್ಧಾತ್ಮಕ ಮನೋಭಾವ ಉತ್ತೇಜಿಸಲು ರಾಷ್ಟ್ರಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಿದೆ. ಆಯ್ಕೆಯಾಗುವವರಿಗೆ ವಿದ್ಯಾರ್ಥಿ ವೇತನದ ಜತೆಗೆ ಪ್ರಮಾಣ ಪತ್ರ ದೊರೆಯಲಿದೆ. ಅರ್ಹತೆ: 1ರಿಂದ 12ನೇ ತರಗತಿಯಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರು. ಆರ್ಥಿಕ ನೆರವು: ಅತ್ಯುನ್ನತ ಮೂರು ಪ್ರಬಂಧಗಳಿಗೆ ಬಹುಮಾನ ದೊರೆಯಲಿದೆ. ಅಲ್ಲದೆ ಪ್ರತಿ ಭಾಗವಹಿಸುವಿಕೆಯ ಗುಂಪು ಮಟ್ಟದ ಪ್ರವೇಶಕ್ಕೆ ಸಮಾಧಾನಕರ ಬಹುಮಾನಗಳು ಮತ್ತು ಪ್ರಶಂಸನೀಯ ಪ್ರಬಂಧ ಬರಹಗಾರರಿಗೆ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಅರ್ಜಿ ಸಲ್ಲಿಕೆಗೆ ಕೊನೆ ದಿನ: 2019 ಸೆಪ್ಟೆಂಬರ್‌ 30 ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ ಮಾಹಿತಿಗೆ: ://.b4s.//AEW3 *** ಕೃಪೆ: .buddy4study. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.