ಉನ್ನತ ಶಿಕ್ಷಣ: ವಿದೇಶಿಗರಿಗೆ ಭಾರತವೇ ಅಚ್ಚುಮೆಚ್ಚು ಉನ್ನತ ಶಿಕ್ಷಣ ಪಡೆಯಲಿಚ್ಛಿಸುವ ವಿದೇಶಿ ವಿದ್ಯಾರ್ಥಿಗಳಿಗೆ ಭಾರತವೇ ಅಚ್ಚುಮೆಚ್ಚಿನ ತಾಣ. ಅದರಲ್ಲೂ ಕರ್ನಾಟಕದಲ್ಲಿ ವಿದ್ಯಾಭ್ಯಾಸ ಮಾಡಲು ಬಹುತೇಕ ವಿದ್ಯಾರ್ಥಿಗಳು ಬಯಸುತ್ತಾರೆ.ಜಗತ್ತಿನ 164ದೇಶಗಳ ವಿದ್ಯಾರ್ಥಿಗಳು ಭಾರತದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ತಿಳಿಸಿದೆ. *ಉನ್ನತ ಶಿಕ್ಷಣ ಪಡೆಯಲು ಬರುವ ವಿದೇಶಿ ವಿದ್ಯಾರ್ಥಿಗಳಲ್ಲಿ ಹುಡುಗರೇ ಹೆಚ್ಚು (85%) *ನೇಪಾಳ ಹಾಗೂ ಆಫ್ಗಾನಿಸ್ತಾನ ದೇಶಗಳ ವಿದ್ಯಾರ್ಥಿಗಳ ಮೊದಲ ಆಯ್ಕೆ ಭಾರತ *ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷಾ ವರದಿಯಲ್ಲಿ (ಎಐಎಸ್‌ಎಚ್‌ಇ) ಉಲ್ಲೇಖ *ಸಮೀಕ್ಷೆಯಲ್ಲಿ 962 ವಿಶ್ವವಿದ್ಯಾಲಯ, 38,179 ಕಾಲೇಜು, 9,190 ಶಿಕ್ಷಣ ಸಂಸ್ಥೆಗಳು ಭಾಗಿ ಆದ್ಯತೆಯ ಕೋರ್ಸ್‌ಗಳು (ಆವರಣದಲ್ಲಿರುವುದು ವಿದ್ಯಾರ್ಥಿಗಳ ಸಂಖ್ಯೆ) ಬಿ.ಟೆಕ್ (8,861),ಬಿಬಿಎ (3,354),ಬಿಎಸ್‌ಸಿ (3,320),ಬಿಎ (2,226),ಬಿ.ಫಾರ್ಮಾ, ಬಿಸಿಎ, ಎಂಬಿಬಿಎಸ್‌, ಬಿಡಿಎಸ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.