ವಿದ್ಯಾರ್ಥಿ ವೇತನ ಕೈಪಿಡಿ ವಿದ್ಯಾರ್ಥಿವೇತನ: ವಿದೇಶಗಳಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಕೆ.ಸಿ.ಮಹೀಂದ್ರ ವಿದ್ಯಾರ್ಥಿವೇತನ 2020 ವಿವರ: ವಿದೇಶಗಳಲ್ಲಿ ಉನ್ನತ ಶಿಕ್ಷಣ ಕೈಗೊಳ್ಳ ಬಯಸುವ ಭಾರತೀಯ ಪದವೀಧರರಿಗೆ ಕೆ.ಸಿ.ಮಹೀಂದ್ರ ಶಿಕ್ಷಣ ಟ್ರಸ್ಟ್‌ ಈ ವಿದ್ಯಾರ್ಥಿವೇತನ ನೀಡಲಿದೆ. ಅರ್ಹ ಮತ್ತು ಹಣದ ಅಗತ್ಯವಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಕೈಗೊಳ್ಳಲು ಟ್ರಸ್ಟ್‌ ಈ ಮೂಲಕ ಆರ್ಥಿಕ ನೆರವು ನೀಡಲಿದೆ. ಅರ್ಹತೆ: ವಿದೇಶಗಳಲ್ಲಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದಿರುವ ಅಥವಾ ಪ್ರವೇಶಕ್ಕೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು. ನೊಂದಾಯಿತ ವಿಶ್ವವಿದ್ಯಾಲಯಗಳಲ್ಲಿ ಪ್ರಥಮ ದರ್ಜೆಯಲ್ಲಿ ಪದವಿ ಪೂರ್ಣಗೊಳಿಸಿರುವವರು ಅಥವಾ ಡಿಪ್ಲೊಮಾ ಪಡೆದಿರುವವರು ಅರ್ಜಿ ಸಲ್ಲಿಸಬಹುದು. ಆರ್ಥಿಕ ನೆರವು: ಆಯ್ಕೆಯಾಗುವ ಮೊದಲ ಮೂವರು ವಿದ್ಯಾರ್ಥಿಗಳಿಗೆ ₹ 8 ಲಕ್ಷದವರೆಗೆ ಬಡ್ಡಿರಹಿತ ಸಾಲ ದೊರೆಯಲಿದೆ. ಆಯ್ಕೆಯಾಗುವ ಇತರ ವಿದ್ಯಾರ್ಥಿಗಳಿಗೆ ₹ 4 ಲಕ್ಷದವರೆಗೆ ಬಡ್ಡಿರಹಿತ ಸಾಲ ದೊರೆಯಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ: 2020 ಮಾರ್ಚ್‌ 31 ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ ಮಾಹಿತಿಗೆ: .b4s.//KCM1 *** ವಿದ್ಯಾರ್ಥಿವೇತನ: ಸಿಎಸ್‌ಎಂ ಟ್ರಸ್ಟ್‌ ಪದವಿ ವಿದ್ಯಾರ್ಥಿಗಳಿಗೆ ನೀಡುವ ಗಣಿಗಾರಿಕೆ ವಿದ್ಯಾರ್ಥಿವೇತನ 2020 ವಿವರ: ಬ್ರಿಟನ್‌ನಕ್ಯಾಂಬೋರ್ನ್‌ ಸ್ಕೂಲ್‌ ಆಫ್‌ ಮೈನ್ಸ್‌ ಟ್ರಸ್ಟ್‌, ಬ್ರಿಟನ್‌ನಎಕ್ಸೆಟರ್‌ ವಿಶ್ವವಿದ್ಯಾಲಯದಲ್ಲಿ ಮೈನಿಂಗ್‌ಗೆ ಸಂಬಂಧಿಸಿದಂತೆ ಪದವಿವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು ಈ ವಿದ್ಯಾರ್ಥಿವೇತನ ಆರಂಭಿಸಿದೆ. ಅರ್ಹತೆ: ಎಕ್ಸೆಟರ್‌ ವಿಶ್ವವಿದ್ಯಾಲಯದಲ್ಲಿ 2020ನೇ ಸಾಲಿನಲ್ಲಿ ಬಿ.ಇ ಅಥವಾ ಎಂ.ಇ ವ್ಯಾಸಂಗಕ್ಕೆ ಸಮ್ಮತಿ ಪಡೆದಿರುವ ಭಾರತೀಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಆರ್ಥಿಕ ನೆರವು: ಆಯ್ಕೆಯಾಗುವ 25 ವಿದ್ಯಾರ್ಥಿಗಳಿಗೆ ₹ 5.37 ಲಕ್ಷ ಆರ್ಥಿಕ ನೆರವು ದೊರೆಯಲಿದೆ (ಮೂರು ಕಂತುಗಳಲ್ಲಿ). ಅರ್ಜಿ ಸಲ್ಲಿಸುವ ಕೊನೆಯ ದಿನ: 2020ರ ಮೇ 31 ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮಾಹಿತಿಗೆ: .b4s.//CTU1 *** ಕೃಪೆ: buddy4study. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.