ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬೇಕು: ಓದುಗರ ಅಭಿಪ್ರಾಯ ತೆಲಂಗಾಣ ಮತ್ತು ತಮಿಳುನಾಡಿನಂತೆ ಕರ್ನಾಟಕದಲ್ಲಿಯೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ರದ್ದುಪಡಿಸಬೇಕೆ ಎಂದು ಪ್ರಜಾವಾಣಿ ತನ್ನ ಫೇಸ್‌ಬುಕ್ ಮತ್ತು ಟ್ವಿಟರ್ ಖಾತೆಗಳಲ್ಲಿ ಓದುಗರಿಗೆ ಪ್ರಶ್ನೆ ಕೇಳಿತ್ತು. ಫೇಸ್‌ಬುಕ್‌ನಲ್ಲಿ ಶೇ 61ರಷ್ಟು ಓದುಗರು ರದ್ದು ಮಾಡಬಾರದು ಎಂದು ಪ್ರತಿಕ್ರಿಯಿಸಿದ್ದಾರೆ. ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ ಶೇ 51.5ರಷ್ಟು ಓದುಗರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿರುವ ಶೇ 39ರಷ್ಟು ಓದುಗರು ರದ್ದುಪಡಿಸಬೇಕು ಎಂದಿದ್ದಾರೆ. ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ ಶೇ 48.5ರಷ್ಟು ಓದುಗರದು ಇದೇ ಅಭಿಪ್ರಾಯವಾಗಿದೆ. 'ಮಕ್ಕಳ ಭವಿಷ್ಯದ ದೃ‍ಷ್ಟಿಯಿಂದ ಪರೀಕ್ಷೆ ಮಾಡಲೇಬೇಕು, ಎಲ್ಲಾ ಮುಂಜಾಗ್ರತೆ ವಹಿಸಬೇಕು' ಎಂದು ಹಲವು ಓದುಗರು ಕಾಮೆಂಟ್ ಮಾಡಿದ್ದಾರೆ. 'ಪರೀಕ್ಷೆ ಬೇಡ, ಹುಡುಗರು ಚೆನ್ನಾಗಿರಲಿ' ಎಂಬ ಅಭಿಪ್ರಾಯವನ್ನೂ ಕೆಲವರು ವ್ಯಕ್ತಪಡಿಸಿದ್ದಾರೆ. 'ನಿಧಾನವಾದರೂ ಪರವಾಗಿಲ್ಲ, ಒಟ್ಟಿನಲ್ಲಿ ಪರೀಕ್ಷೆ ಮಾಡಿ. ಪರೀಕ್ಷೆ ಮಾಡದಿದ್ದರೆ ಓದಿರುವ ಮಕ್ಕಳಿಗೆ ತೊಂದರೆಯಾಗುತ್ತೆ' ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. 'ಪರೀಕ್ಷೆ ನಡೆಸದೆ ಪಾಸ್ ಮಾಡಿದರೆ ಅಂಕಪಟ್ಟಿಗಳಿಗೆ ಬೆಲೆ ಇರುವುದಿಲ್ಲ' ಎಂದು ಕೆಲ ಓದುಗರು ಆತಂಕಪಟ್ಟಿದ್ದಾರೆ. ತೆಲಂಗಾಣ ಮತ್ತು ತಮಿಳುನಾಡಿನಂತೆ ಕರ್ನಾಟಕದಲ್ಲೂ ಪರೀಕ್ಷೆ ರದ್ದು ಮಾಡಬೇಕೆ? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.