ವಿದ್ಯಾರ್ಥಿ ವೇತನ: ಐಐಎಂ ಅಹಮದಾಬಾದ್‌ ರಿಸರ್ಚ್‌ ಅಸಿಸ್ಟೆಂಟ್‌ಶಿಪ್‌ 2021 ಐಐಎಂ ಅಹಮದಾಬಾದ್‌ ರಿಸರ್ಚ್‌ ಅಸಿಸ್ಟೆಂಟ್‌ಶಿಪ್‌ 2021 ವಿವರ: ಎಂ.ಎ ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಅಹಮದಾಬಾದ್‌ ಅಸಿಸ್ಟೆಂಟ್‌ಶಿಪ್‌ಗೆ ಅರ್ಜಿ ಆಹ್ವಾನಿಸಿದೆ. ಅರ್ಹತೆ: ಎಂ.ಎ ಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿರಬೇಕು. ಜೊತೆಗೆ ಎಂಬಿಎ ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸ್‌ ಮಾಡಿರಬೇಕು. ಆರ್ಥಿಕ ಸಹಾಯ: ತಿಂಗಳಿಗೆ ₹ 40 ಸಾವಿರದವರೆಗೆ ಭತ್ಯೆ ಸಿಗಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್‌ 8, 2021 ಅರ್ಜಿ ಸಲ್ಲಿಕೆ ವಿಧಾನ: ಇ–ಮೇಲ್‌ ಹೆಚ್ಚಿನ ಮಾಹಿತಿಗೆ: .b4s.//MRA7 ಎಸ್‌ಇಆರ್‌ಬಿ ಕೋರ್‌ ರಿಸರ್ಚ್‌ ಗ್ರಾಂಟ್‌ 2021 ವಿವರ: ಯುವ ವಿಜ್ಞಾನಿಗಳಿಂದ ದಿ ಸೈನ್ಸ್‌ ಅಂಡ್‌ ಎಂಜಿನಿಯರಿಂಗ್‌ ರಿಸರ್ಚ್‌ ಬೋರ್ಡ್‌ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹತೆ: ಗುರುತಿಸಲ್ಪಟ್ಟ ಅಕಾಡೆಮಿಯಿಂದ ಅಥವಾ ಭಾರತದ ಯಾವುದೇ ರಾಷ್ಟ್ರೀಯ ಪ್ರಯೋಗಾಲಯದಿಂದ ಸಂಶೋಧಕ/ಸಂಶೋಧಕಿ ಸ್ಥಾನವನ್ನು ಹೊಂದಿರಬೇಕು. ವಿಜ್ಞಾನ, ಗಣಿತ, ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಪಡೆದಿರಬೇಕು. ಆರ್ಥಿಕ ಸಹಾಯ: ಕೋರ್ ರಿಸರ್ಚ್‌ ನೆರವು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್‌ 8, 2021 ಅರ್ಜಿ ಸಲ್ಲಿಕೆ ವಿಧಾನ: ಅರ್ಜಿ ಮೂಲಕ ಮಾತ್ರ ಹೆಚ್ಚಿನ ವಿವರ: .b4s.//RBC7 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.