ದ್ವಿತೀಯ ಪಿಯುಸಿ: ಮಾತೃಕೆಗಳು (ಮ್ಯಾಟ್ರಿಕ್ಸ್‌) ಗಣಿತ ಮಾತೃಕೆ ಗಣಿತದಲ್ಲಿ ಅತ್ಯಂತ ಮಹತ್ವ ಸಾಧನಗಳಲ್ಲಿ ಒಂದಾಗಿದೆ. ಈ ಗಣಿತದ ಸಾಧನವು ನಮ್ಮ ಕಾರ್ಯವನ್ನು ಅತ್ಯಂತ ಸರಳಗೊಳಿಸುತ್ತದೆ. *ಸಮೀಕರಣವನ್ನು ಸರಳ ರೀತಿಯಲ್ಲಿ ಪರಿಹರಿಸಲು ಕರಾರುವಕ್ಕಾದ ಸಾಧನ *ಗಣಕಯಂತ್ರದ ವಿದ್ಯುನ್ಮಾನದ ಸ್ಪ್ರೆಡ್‌ಶೀಟ್‌ಗಳಲ್ಲಿ ಉಪಯೋಗದ ಸಾಧನ *ವಾಣಿಜ್ಯ/ ವಿಜ್ಞಾನದ ಸ್ಪ್ರೆಡ್‌ಶೀಟ್‌ಗಳಲ್ಲಿ ಉಪಯೋಗದ ಸಾಧನ *ತಳಿಶಾಸ್ತ್ರ, ಅರ್ಥಶಾಸ್ತ್ರ ಮತ್ತು ಔದ್ಯೋಗಿಕ ನಿರ್ವಹಣೆಯಲ್ಲಿ ಉಪಯೋಗಿಸಲಾಗಿದೆ. ಮಾತೃಕೆಗಳ ವ್ಯಾಖ್ಯೆ ಮಾತೃಕೆಯು ಸಂಖ್ಯೆಗಳ ಅಥವಾ ಉತ್ಪನ್ನಗಳ ವ್ಯವಸ್ಥಿತವಾದ ಆಯತಾಕೃತಿಯಲ್ಲಿ ಒಂದು ವ್ಯವಸ್ಥೆ. ಉದಾಹರಣೆ: 1ನೇ ಕಂಬ ಸಾಲು 2ನೇ ಕಂಬಸಾಲು 1ನೇ ಅಡ್ಡಸಾಲು 2ನೇ ಅಡ್ಡಸಾಲು 3ನೇ ಅಡ್ಡಸಾಲು ಮಾತೃಕೆಗಳನ್ನು ದೊಡ್ಡ (ಕ್ಯಾಪಿಟಲ್) ಅಕ್ಷರಗಳಿಂದ ಸೂಚಿಸುತ್ತೇವೆ. ಈ ಮೇಲಿನ ಮಾತೃಕೆ ಯು 2 ಕಂಬಸಾಲುಗಳನ್ನು 1 ಮತ್ತು 2 ಅಡ್ಡಸಾಲುಗಳನ್ನು ಹೊಂದಿದೆ. ಮಾತೃಕೆಯ ದರ್ಜೆ (ಆರ್ಡರ್‌ ಆಫ್‌ ಮ್ಯಾಟ್ರಿಕ್ಸ್‌) ಅಡ್ಡಸಾಲುಗಳು ಮತ್ತು ಕಂಬಸಾಲುಗಳನ್ನು ಹೊಂದಿದ ಮಾತೃಕೆಯನ್ನು × ದರ್ಜೆಯ ಮಾತೃಕೆ ಅಥವಾ ಸರಳವಾಗಿ ... ಮಾತೃಕೆ ಎನ್ನುತ್ತಾರೆ. ಮೇಲಿನ ಮಾತೃಕೆಯ ದರ್ಜೆ 3×2 ಆಗಿದೆ. ಅಲ್ಲದೆ ಮಾತೃಕೆಯು 6 ಅಂಶ (ಎಲೆಮೆಂಟ್ಸ್‌) ಗಳನ್ನು ಹೊಂದಿದೆ. ಸಾಮಾನ್ಯವಾಗಿ × ಮಾತೃಕೆಯು ಕೆಳಗಿನಂತೆ ಆಯತಾಕೃತಿ ವ್ಯವಸ್ಥೆಯಲ್ಲಿರುತ್ತದೆ. ಅಥವಾ * ಅಡ್ಡಸಾಲಿನಲ್ಲಿ ಕಂಬಸಾಲಿನಲ್ಲಿ ಬರುವ ಅಂಶವು ಆಗಿರುತ್ತದೆ. ಪ್ರಶ್ನೆ1 :- ಒಂದು ಮಾತೃಕೆಯು 8 ಅಂಶಗಳನ್ನು ಹೊಂದಿದ್ದರೆ, ಅದು ಹೊಂದುವ ದರ್ಜೆಗಳ ಸಾಧ್ಯತೆಗಳನ್ನು ಬರೆಯಿರಿ ಪರಿಹಾರ:- ಮಾತೃಕೆಯ ದರ್ಜೆ× ಆದರೆ ಅಂಶಗಳನ್ನು ಹೊಂದಿರುತ್ತದೆ. ಸಾಧ್ಯವಿರುವ ದರ್ಜೆಗಳು- 1×8, 8×1, 2×4, 4×2 ಪ್ರಶ್ನೆ 2:- ಒಂದು ಮಾತೃಕೆಯಲ್ಲಿ 24 ಅಂಶಗಳಿದ್ದರೆ ಅದು ಯಾವ ಯಾವ ದರ್ಜೆಗಳನ್ನು ಹೊಂದಿರುವ ಸಾಧ್ಯತೆಯಿದೆ?. ಅದು 13 ಅಂಶಗಳನ್ನು ಹೊಂದಿದ್ದರೆ ಏನಾಗುತ್ತದೆ? ಪರಿಹಾರ:- ಮಾತೃಕೆಯ ದರ್ಜೆ- × ಮಾತೃಕೆಯ ಅಂಶಗಳ ಸಂಖ್ಯೆ- ಸಾಧ್ಯವಿರುವ ದರ್ಜೆಗಳು - 1×24, 24×1, 2×12, 8×3, 3×8, 6×4, 4×6 ಮಾತೃಕೆಯ ಅಂಶಗಳು 13 ಇದ್ದರೆ ಮಾತೃಕೆ ದರ್ಜೆಗಳು (13×1, 1×13) ಪ್ರಶ್ನೆ 3: ಆಗಿರುವ ಅಂಶಗಳನ್ನು ಹೊಂದಿರುವ 3×2 ಶ್ರೇಣಿಯ ಮಾತೃಕೆಯನ್ನು ರಚಿಸಿರಿ. ಪರಿಹಾರ:- 3×2 ಮಾತೃಕೆಯನ್ನು ಎಂದು ಬರೆಯುತ್ತೇವೆ. ಆದ್ದರಿಂದ ಬೇಕಾಗಿರುವ ಮಾತೃಕೆ ಆಗಿರುತ್ತದೆ. (ಪಾಠಗಳ ಸಂಯೋಜನೆ: ಆಕಾಶ್‌ ಇನ್‌ಸ್ಟಿಟ್ಯೂಟ್‌,ಬೆಂಗಳೂರು) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.