ವಿದ್ಯಾರ್ಥಿ ವೇತನ: ಐಎನ್‌ಎಇ ವುಮನ್ ಎಂಜಿನಿಯರ್ ಆಫ್ ದಿ ಇಯರ್ ಫೆಲೋಶಿಪ್‌ 2021 ಐಎನ್‌ಎಇ ವುಮನ್ ಎಂಜಿನಿಯರ್ ಆಫ್ ದಿ ಇಯರ್ ಫೆಲೋಶಿಪ್‌ 2021 ವಿವರ: ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಎಂಜಿನಿಯರಿಂಗ್ ಮಹಿಳಾ ಎಂಜಿನಿಯರ್‌ಗಳಿಂದ ‘ಎಂಜಿನಿಯರ್‌ ಆಫ್ ದಿ ಇಯರ್ ಫೆಲೋಶಿಪ್‌’ಗೆ ಅರ್ಜಿಗಳನ್ನು ಆಹ್ವಾನಿಸಿದೆ. ಎಂಜಿನಿಯರಿಂಗ್ ಹಾಗೂ ತಾಂತ್ರಿಕ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಮಹಿಳಾ ಎಂಜಿನಿಯರ್‌ಗಳನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಅರ್ಹತೆ: ಭಾರತದಲ್ಲಿ ಉದ್ಯೋಗಸ್ಥರಾಗಿರುವ 40 ರಿಂದ 60 ವರ್ಷದ ಒಳಗಿನ ಎಂಜಿನಿಯರ್‌ಗಳಿಗೆ ಈ ಫೆಲೋಶಿಪ್‌ ಮುಕ್ತವಾಗಿದೆ. ಅಭ್ಯರ್ಥಿ ಭಾರತೀಯ ಪ್ರಜೆಯಾಗಿರಬೇಕು. ಆರ್ಥಿಕ ನೆರವು: ₹ 2 ಲಕ್ಷ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 15, 2021 ಅರ್ಜಿ ಸಲ್ಲಿಕೆ ವಿಧಾನ: ಅರ್ಜಿಯನ್ನು ಪೋಸ್ಟ್ ಮೂಲಕ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ: .b4s.//NWA4 *** ನ್ಯಾಷನಲ್‌ ಸ್ಕಾಲರ್‌ಶಿಪ್‌ ಸ್ಕೀಮ್‌, ಎಚ್‌ಆರ್‌ಡಿಎಂ 2021 ವಿವರ: ಮಾವನ ಸಂಪನ್ಮೂಲ ಹಾಗೂ ಅಭಿವೃದ್ಧಿ ಮಿಷನ್‌ ರಾಷ್ಟ್ರೀಯ ವಿದ್ಯಾರ್ಥಿವೇತನ ಯೋಜನೆಯಡಿ 10ನೇ ತರಗತಿ, ದ್ವಿತೀಯ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಿದೆ. ಅರ್ಹತೆ: 10ನೇ ತರಗತಿ, ದ್ವಿತೀಯ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೊಮಾ ಪೂರ್ಣಗೊಳಿಸಿದ 16 ರಿಂದ 40 ವರ್ಷದೊಳಗಿನ ಅಭ್ಯರ್ಥಿಗಳು ಈ ಫೆಲೊಶಿಪ್‌ಗೆ ಅರ್ಹರು. ಆರ್ಥಿಕ ನೆರವು: ₹ 6000 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 15, 2021 ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ ಹೆಚ್ಚಿನ ಮಾಹಿತಿಗೆ: .b4s.//SSH8 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.