ವಿದ್ಯಾರ್ಥಿ ವೇತನ: ಐಐಎಂ ಬೆಂಗಳೂರು ಡಾಕ್ಟರಲ್ ರಿಸರ್ಚ್ ಫೆಲೋಶಿಪ್ 2021 ಐಐಎಂ ಬೆಂಗಳೂರು ಡಾಕ್ಟರಲ್ ರಿಸರ್ಚ್ ಫೆಲೋಶಿಪ್ 2021 ವಿವರ: ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರು ಪಿಎಚ್‌ಡಿ ಪದವಿ ಪಡೆದ ವಿದ್ಯಾರ್ಥಿಗಳಿಂದ ಡಾಕ್ಟರಲ್‌ ರೀಸರ್ಚ್‌ ಫೆಲೋಶಿಪ್‌ಗೆ ಅರ್ಜಿ ಆಹ್ವಾನಿಸಿದೆ. ಅರ್ಹತೆ: ಹಣಕಾಸು, ಬ್ಯಾಂಕಿಂಗ್‌, ಅರ್ಥಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ಸಂಬಂಧಿತ ಕ್ಷೇತ್ರಗಳಲ್ಲಿ ಪಿಎಚ್‌ಡಿ ಮುಗಿಸಿದ ಅಥವಾ ಮುಗಿಸುತ್ತಿರುವ 45 ವರ್ಷದ ಒಳಗಿನವರು ಈ ಫೆಲೋಶಿಪ್‌ಗೆ ಅರ್ಹರು. ಆರ್ಥಿಕ ನೆರವು: ತಿಂಗಳಿಗೆ ₹ 90000 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 21, 2021 ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಮೂಲಕ ಹೆಚ್ಚಿನ ಮಾಹಿತಿಗೆ: .b4s.//MBP7 ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಎಂಐ ಸ್ಕಾಲರ್‌ಶಿಪ್‌ ವಿವರ: ಶಿಯೋಮಿ ಇಂಡಿಯಾ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಿದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಹರು. ಅರ್ಹತೆ: ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಯು ಭಾರತೀಯ ಪ್ರಜೆಯಾಗಿರಬೇಕು. ಈ ಹಿಂದಿನ ಪರೀಕ್ಷೆಯಲ್ಲಿ ಕನಿಷ್ಠ ಶೇ 70 ಅಂಕ ಗಳಿಸಿರಬೇಕು. ಆರ್ಥಿಕ ನೆರವು: ₹ 5800 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 31, 2021 ಹೆಚ್ಚಿನ ಮಾಹಿತಿಗೆ: .b4s.//MISC1 ಕೃಪೆ: buddy4study. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.