ವಿದ್ಯಾರ್ಥಿ ವೇತನ: ಡಿಜಿಟಲ್‌ ಭಾರತಿ ಕೋವಿಡ್‌ ಸ್ಕಾಲರ್‌ಶಿಪ್‌ 2021–22 ಡಿಜಿಟಲ್‌ ಭಾರತಿ ಕೋವಿಡ್‌ ಸ್ಕಾಲರ್‌ಶಿಪ್‌ 2021–22 ವಿವರ: ಕೋವಿಡ್‌ ಕಾರಣದಿಂದ ಕುಟುಂಬವು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದು, ಮುಂದಿನ ಶಿಕ್ಷಣ ಪಡೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೋವಿಡ್‌ ಕಾರಣದಿಂದ ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಹತೆ: ಒಂದನೇ ತರಗತಿಯಿಂದ ಪಿಯುಸಿವರೆಗೆ ಓದುತ್ತಿರುವವರಿಗೆ ಈ ವಿದ್ಯಾರ್ಥಿ ವೇತನ ಅನ್ವಯವಾಗುತ್ತದೆ. ಆರ್ಥಿಕ ಸಹಾಯ: ಕಾಲೇಜುಗಳಿಗೆ ಪ್ರವೇಶಾತಿ, ಲ್ಯಾಪ್‌ಟಾಪ್‌ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಜುಲೈ, 2021 ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಅರ್ಜಿಗಳು ಮಾತ್ರ ಹೆಚ್ಚಿನ ಮಾಹಿತಿಗೆ: .b4s.//DBCS1 ** ವಿಎನ್‌ಐಟಿ ನಾಗ್ಪುರ ಡಿಪಾರ್ಟ್‌ಮೆಂಟ್‌ ಆಫ್‌ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಜೂನಿಯರ್‌ ರಿಸರ್ಚ್‌ ಫೆಲೋಶಿಪ್‌ 2021 ವಿವರ: ಎಂ.ಟೆಕ್‌ ಅಥವಾ ಎಂ.ಇ ಪದವಿ ಪಡೆದವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹತೆ: ತಮ್ಮ ಸ್ನಾತಕೋತ್ತರ ಶಿಕ್ಷಣದಲ್ಲಿ ಪವರ್‌ ಎಲೆಕ್ಟ್ರಾನಿಕ್ಸ್‌, ಎಲೆಕ್ಟ್ರಿಕಲ್‌ ಡ್ರೈವ್ಸ್‌, ಪವರ್‌ ಸಿಸ್ಟಮ್‌, ಕಂಟ್ರೋಲ್‌ ಸಿಸ್ಟಮ್‌ ಅಥವಾ ಇದಕ್ಕೆ ಸಮಾನಾಂತರವಾದ ವಿಷಯಗಳನ್ನು ಕಲಿತಿರಬೇಕು. ಗೇಟ್‌ ಪರೀಕ್ಷೆಯನ್ನು ಪೂರೈಸಿರಬೇಕು. ಆರ್ಥಿಕ ಸಹಾಯ: ಎಚ್‌ಆರ್‌ಎ ಯೊಂದಿಗೆ ತಿಂಗಳಿಗೆ ₹ 35 ಸಾವಿರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18 ಜೂನ್‌, 2021 ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಅಥವಾ ಇ–ಮೇಲ್‌ ಮೂಲಕ ಅರ್ಜಿ ಸಲ್ಲಿಸಬಹುದು ಹೆಚ್ಚಿನ ಮಾಹಿತಿಗೆ: .b4s.//NJF7 ** ಡಿಎಕ್ಸ್‌ಸಿ ಪ್ರೊಗ್ರೆಸ್ಸಿಂಗ್‌ ಮೈಂಡ್ಸ್‌ ಸ್ಕಾಲರ್‌ಶಿಪ್‌ 2021 ವಿವರ: ಸಿಎಸ್‌, ಐಟಿ, ಇಇ, ಇಎಸ್‌ ವಿಭಾಗಗಳಲ್ಲಿ ಬಿ.ಇ/ ಬಿ.ಟೆಕ್‌ ಓದುತ್ತಿರುವ ಪ್ರಥಮ ವರ್ಷದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹತೆ: ಹಿಂದಿನ ಪರೀಕ್ಷೆಯಲ್ಲಿ ಕನಿಷ್ಠ ಶೇ 60ರಷ್ಟು ಅಂಕಗಳನ್ನು ಪಡೆದಿರಬೇಕು. ಕುಟುಂಬದ ವಾರ್ಷಿಕ ಆದಾಯವು ₹ 4 ಲಕ್ಷ ಮೀರಿರಬಾರದು. ವಿದ್ಯಾರ್ಥಿಗಳು ₹ 6 ಸಾವಿರ ಅಥವಾ ಅದಕ್ಕೂ ಹೆಚ್ಚಿನ ಯಾವುದೇ ವಿದ್ಯಾರ್ಥಿ ವೇತನವನ್ನು ಈಗಾಗಲೇ ಪಡೆಯುತ್ತಿರಬಾರದು. ಆರ್ಥಿಕ ಸಹಾಯ: ಒಟ್ಟು ಶುಲ್ಕದ ಶೇ 50 ರಷ್ಟು ಅಥವಾ ವರ್ಷಕ್ಕೆ ₹ 40 ಸಾವಿರ (ಯಾವುದು ಕಡಿಮೆ ಇರುತ್ತದೊ ಅದು). ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಜೂನ್‌, 2021 ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಅರ್ಜಿಗಳು ಮಾತ್ರ ಹೆಚ್ಚಿನ ಮಾಹಿತಿಗೆ: .b4s.//DXC1 ಕೃಪೆ: buddy4study. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.