ವಿದ್ಯಾರ್ಥಿವೇತನ: ಐಐಟಿ ಗಾಂಧಿನಗರ ಅರ್ಲಿ- ಕೆರಿಯರ್ ಫೆಲೋಶಿಪ್ 2021 ಐಐಟಿ ಗಾಂಧಿನಗರ ಅರ್ಲಿ- ಕೆರಿಯರ್ ಫೆಲೋಶಿಪ್ 2021 ವಿವರ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಡಾಕ್ಟರೇಟ್ ಪದವಿ ಪಡೆದವರಿಂದ ಅರ್ಲಿ-ಕೆರಿಯರ್ ಫೆಲೋಶಿಪ್ 2021 ಕ್ಕೆ ಅರ್ಜಿ ಆಹ್ವಾನಿಸಿದೆ. ಅರ್ಹತೆ: ಡಾಕ್ಟರೇಟ್ ಪದವಿ ಪಡೆದ ಅಭ್ಯರ್ಥಿಗಳು ಈ ಫೆಲೋಶಿಪ್‌ಗೆ ಅರ್ಹರು. ಅವರು ತಮ್ಮ ಡಾಕ್ಟರೇಟ್ ಪ್ರಬಂಧವನ್ನು ಸಲ್ಲಿಸಿರಬೇಕು. ಆರ್ಥಿಕ ನೆರವು: ತಿಂಗಳಿಗೆ ₹ 1 ಲಕ್ಷ ಭತ್ಯೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್ 7, 2021 ಅರ್ಜಿ ಸಲ್ಲಿಕೆ ವಿಧಾನ: ಇಮೇಲ್‌ ಮೂಲಕ ಹೆಚ್ಚಿನ ಮಾಹಿತಿಗೆ: .b4s.//ECF2 ಎಸ್‌ಇಆರ್‌ಬಿ ನ್ಯಾಷನಲ್ ಪೋಸ್ಟ್ ಡಾಕ್ಟೋರಲ್ ಫೆಲೋಶಿಪ್ (ಎನ್-ಪಿಡಿಎಫ್) 2021 ವಿವರ: ವಿಜ್ಞಾನ ಮತ್ತು ಎಂಜಿನಿಯರಿಂಗ್ ಸಂಶೋಧನಾ ಮಂಡಳಿ (ಎಸ್‌ಇಆರ್‌ಬಿ) ಪೋಸ್ಟ್ ಡಾಕ್ಟೋರಲ್‌ ಫೆಲೋಶಿಪ್ 2021 ಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹತೆ: 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಭಾರತೀಯ ನಾಗರಿಕರು ಈ ಫೆಲೋಶಿಪ್‌ಗೆ ಅರ್ಹರು. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ, ಎಂಡಿ, ಎಂಎಸ್ ಪದವಿ ಪಡೆದಿರಬೇಕು. ಆರ್ಥಿಕ ನೆರವು: ತಿಂಗಳಿಗೆ ₹ 55000 ಹಾಗೂ ಇತರ ಸವಲತ್ತುಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್‌ 2, 2021 ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಮೂಲಕ ಹೆಚ್ಚಿನ ಮಾಹಿತಿಗೆ: .b4s.//NPF8 ಕೃಪೆ: .b4s.//NPF8 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.