ಸ್ಪರ್ಧಾ ವಾಣಿ | ಬಹುಆಯ್ಕೆಯ ಪ್ರಶ್ನೆಗಳು ಯುಪಿಎಸ್‌ಸಿ ಪ್ರಿಲಿಮ್ಸ್‌, ಕೆಪಿಎಸ್‌ಸಿ-ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ - 2 ಹಾಗೂ ಎಲ್ಲಾ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಸಾಮಾನ್ಯ ಜ್ಞಾನದ ಮಾಹಿತಿಗಳಿವು. 1. ಅರ್ಜೆಂಟೀನಾದ ಯಾವ ಪ್ರದೇಶವನ್ನು ಕೃಷಿ ಚಟುವಟಿಕೆಯ ಹೃದಯಭಾಗ ಎಂದು ಕರೆಯಲಾಗುತ್ತದೆ? ಎ. ಪಂಪಸ್.→→ಬಿ. ದ ಆಂಡೀಸ್. ಸಿ. ಪಟಗೋನಿಯ.→ಡಿ. ಸೆಟಗೋನಿಯ. ಉತ್ತರ : ಎ 2. ಭಾರತ ಮತ್ತು ಅರ್ಜೆಂಟೀನಾ ರಾಷ್ಟ್ರಗಳು ಕೆಳಗಿನ ಯಾವ ವಲಯದ ಒಪ್ಪಂದಕ್ಕೆ ಸಹಿ ಹಾಕಿವೆ? ಎ. ಮುಕ್ತ ವ್ಯಾಪಾರ ಒಪ್ಪಂದ. ಬಿ. ಸಾಂಸ್ಕೃತಿಕ ವಿನಿಮಯ ಒಪ್ಪಂದ. ಸಿ. ಸಾಮಾಜಿಕ ಭದ್ರತಾ ಒಪ್ಪಂದ. ಡಿ. ಮಹಿಳಾ ಹಕ್ಕುಗಳ ಸಂರಕ್ಷಣಾ ಒಪ್ಪಂದ. ಉತ್ತರ : ಸಿ 3.ಇ-ಆಡಳಿತಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವ ಯೋಜನೆಗಳನ್ನು ಕರ್ನಾಟಕ ಸರ್ಕಾರ ಜಾರಿಗೆ ತಂದಿದೆ? 1. ಭೂಮಿ.→2.ಖಜಾನೆ. 3. ಮನುಜ.→4. ನಿರಂತರ ಸೇವಾ. ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ. ಎ. 1 ಮತ್ತು 2 ಬಿ. 2 ಮತ್ತು 3 ‌ ಸಿ. 3 ಮತ್ತು 4 ಡಿ. 4 ಮಾತ್ರ ಉತ್ತರ : ಎ 4. ಸ್ಮಾರ್ಟ್ ಆಡಳಿತದಲ್ಲಿ ಕೆಳಗಿನ ಯಾವ ಅಂಶಗಳನ್ನು ಅಳವಡಿಸಿಕೊಳ್ಳಲಾಗುತ್ತದೆ? 1. ಸರಳೀಕರಣ. 2. ಆಡಳಿತ ವ್ಯವಸ್ಥೆಯಲ್ಲಿ ಮೌಲ್ಯಗಳ ಅಳವಡಿಕೆ. 3. ಉತ್ತರದಾಯಿತ್ವ. 4. ಪ್ರತಿಕ್ರಿಯಾಶೀಲ ಆಡಳಿತ. ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ. ಎ. 1 ಮತ್ತು 2 ಬಿ. 1, 2, 3 ಮತ್ತು 4 ಸಿ. 2 ಮತ್ತು 4 ಡಿ. 3 ಮತ್ತು 4 ಉತ್ತರ : ಬಿ 5. ಭಾಮ ಕಲಾಪಂ ನಾಟಕ ಕೆಳಗಿನ ಯಾವ ಲೇಖಕರಿಗೆ ಸಂಬಂಧಿಸಿದೆ? ಎ. ಸಿದ್ಧೇಂದ್ರ ಯೋಗಿ. ಬಿ. ಸಿದ್ದೇಶ್ವರ ಮುನಿ. ಸಿ. ಲೋಕೇಶ್ವರ ಯೋಗಿ. ಡಿ. ಓಹಿಲೇಶ್ವರ ಯೋಗಿ. ಉತ್ತರ : ಎ 6.ಜಲಚಿತ್ರ ನೃತ್ಯಂಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ? 1. ಈ ನೃತ್ಯ ಸ್ವರೂಪದಲ್ಲಿ ರಾಮಾಯಣದ ಕಥಾ ಹಂದರವನ್ನು ಪ್ರದರ್ಶಿಸಲಾಗುತ್ತದೆ. 2. ಈ ನೃತ್ಯ ಸ್ವರೂಪದಲ್ಲಿ ರಾಮಾಯಣ ಮತ್ತು ಮಹಾಭಾರತದ ಕಥಾ ಹಂದರವನ್ನು ಪ್ರದರ್ಶಿಸಲಾಗುತ್ತದೆ. 3. ನೃತ್ಯಪಟು ತನ್ನ ಕಾಲಿನ ಬೆರಳನ್ನು ಬಳಸಿಕೊಂಡು ಚಿತ್ರವನ್ನು ಬಿಡಿಸುವ ನೃತ್ಯ ಶೈಲಿಯಾಗಿದೆ. ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ. ಎ. 1 ಮತ್ತು 2 ಬಿ. 1 ಮತ್ತು 3 ಸಿ. 3 ಮಾತ್ರ ಡಿ. 2 ಮಾತ್ರ ಉತ್ತರ : ಸಿ 7. ಕೆಳಗಿನ ಯಾವ ಸ್ಥಳದಲ್ಲಿ ನೂತನ ಪರಮಾಣು ವಿದ್ಯುತ್ ಉತ್ಪಾದನಾ ಘಟಕವನ್ನು ಪ್ರಾರಂಭಿಸಲಾಗುತ್ತಿದೆ? ಎ. ಗೋರಖ್ ಪುರ್, ಹರಿಯಾಣ. ಬಿ. ಭೋಪಾಲ್, ಮಧ್ಯ ಪ್ರದೇಶ. ಸಿ. ಪ್ರಯಾಗ್ ರಾಜ್, ಉತ್ತರ ಪ್ರದೇಶ. ಡಿ. ತಿರುವನಂತಪುರಂ, ಕೇರಳ. ಉತ್ತರ : ಎ 8. ಕಲ್ಪಕಂನಲ್ಲಿ ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸುತ್ತಿರುವ ಥೋರಿಯಂ ಆಧಾರಿತ ಪರಮಾಣು ಘಟಕದ ಸರಿಯಾದ ಹೆಸರನ್ನು ಗುರುತಿಸಿ? ಎ. ಕಾಮಿನಿ→ಬಿ. ದುರ್ಗಾ. ಸಿ. ಭವಾನಿ→ಡಿ. ಚಾಮುಂಡಿ. ಉತ್ತರ : ಎ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.