ವಿದ್ಯಾರ್ಥಿ ವೇತನ: ಐಇಟಿ ಇಂಡಿಯಾ ಸ್ಕಾಲರ್‌ಶಿಪ್‌ ಅವಾರ್ಡ್‌ 2021 ಐಇಟಿ ಇಂಡಿಯಾ ಸ್ಕಾಲರ್‌ಶಿಪ್‌ ಅವಾರ್ಡ್‌ 2021 ವಿವರ: ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗಾಗಿ ದಿ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಅಂಡ್‌ ಟೆಕ್ನಾಲಜಿ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹತೆ: 1, 2, 3 ಮತ್ತು 4ನೇ ವರ್ಷದ ಎಂಜಿನಿಯರಿಂಗ್‌ ಓದುತ್ತಿರುವವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಎಲ್ಲಾ ಸೆಮಿಸ್ಟರ್‌ಗಳಲ್ಲಿ ಕನಿಷ್ಠ ಶೇ 60 ಅಂಕಗಳನ್ನು ಪಡೆದಿರಬೇಕು. ಪಿಯುಸಿಯಲ್ಲೂ ಶೇ 60ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರಬೇಕು. ಆರ್ಥಿಕ ಸಹಾಯ: ₹ 5 ಲಕ್ಷ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 15 ಆಗಸ್ಟ್‌, 2021 ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಅರ್ಜಿಗಳು ಮಾತ್ರ ಹೆಚ್ಚಿನ ಮಾಹಿತಿಗೆ: .b4s.//IET1 *** ಐಎಸ್‌ಇಸಿ ಬೆಂಗಳೂರು ಪೋಸ್ಟ್‌ ಡಾಕ್ಟರಲ್‌ ರಿಸರ್ಚ್‌ ಪ್ರೋಗ್ರಾಮ್‌ 2021 ವಿವರ: ಪಿಎಚ್‌ಡಿ ಮುಗಿಸಿರುವವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಫೆಲೋಶಿಪ್‌ ಅನ್ನು ಗರಿಷ್ಠ 5 ವರ್ಷಗಳವರೆಗೆ ನೀಡಲಾಗುತ್ತದೆ. ಅರ್ಹತೆ: ಕಳೆದ 10 ವರ್ಷಗಳಲ್ಲಿ ಪಿಎಚ್‌ಡಿ ಮುಗಿಸಿರುವವರು ಅರ್ಜಿ ಸಲ್ಲಿಸಬಹುದಾಗಿದೆ. ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಮಟ್ಟದ ಪತ್ರಿಕೆಗಳಲ್ಲಿ ಕನಿಷ್ಠ ಎರಡು ಬರಹಗಳು ಪ್ರಕಟವಾಗಿರುವುದು ಕಡ್ಡಾಯ. ಆರ್ಥಿಕ ಸಹಾಯ: ಪ್ರಮಾಣ ಪತ್ರ ( ) ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 31 ಜುಲೈ, 2021 ಅರ್ಜಿ ಸಲ್ಲಿಕೆ ವಿಧಾನ: ಅಂಚೆ ಮೂಲಕ ಹೆಚ್ಚಿನ ಮಾಹಿತಿಗೆ: .b4s.//ISEC1 ಕೃಪೆ:buddy4study. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.