2021ರ ಜೆಇಇ ಮುಖ್ಯ 3ನೇ ಸೆಷನ್ ಫಲಿತಾಂಶ ಪ್ರಕಟ ದೆಹಲಿ: 2021ರ ಜೆಇಇ ಮುಖ್ಯ 3ನೇ ಸೆಷನ್ ಫಲಿತಾಂಶ ಪ್ರಕಟವಾಗಿದ್ದು 17 ವಿದ್ಯಾರ್ಥಿಗಳು ಸಂಪೂರ್ಣ ಅಂಕಗಳನ್ನು ಪಡೆಯುವ ಮೂಲಕ ದಾಖಲೆ ಬರೆದಿದ್ದಾರೆ. ಕೋವಿಡ್‌ ಕಾರಣದಿಂದಾಗಿ ಪರೀಕ್ಷೆಯನ್ನು ಜುಲೈ ತಿಂಗಳಲ್ಲಿ ನಡೆಸಲಾಗಿತ್ತು. ಆಂಧ್ರ ಮತ್ತು ತೆಲಂಗಾಣ ರಾಜ್ಯದ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನು ಪಡೆದಿದ್ದಾರೆ. ಜೆಇಇ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಈ ವೆಬ್‌ ಸೈಟ್‌ಗಳಿಗೆ ಲಾಗಿನ್‌ ಆಗಿ ಫಲಿತಾಂಶದ ಮಾಹಿತಿ ಪಡೆಯ ಬಹುದಾಗಿದೆ. .., .., ... ಉತ್ತರ ಪ್ರದೇಶ ರಾಜ್ಯದ ಪಾಲ್ ಅಗರ್ವಾಲ್ ಮತ್ತು ತೆಲಂಗಾಣದ ಕೊಮ್ಮಾ ಶರಣಯ್ಯ ಪೂರ್ಣಅಂಕ ಪಡೆದ ವಿದ್ಯಾರ್ಥಿನಿಯರು. 100 ಅಂಕ ಗಳಿಸಿದ 17 ವಿದ್ಯಾರ್ಥಿಗಳಲ್ಲಿ ಕೇವಲ ಇಬ್ಬರು ಹುಡುಗಿಯರಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.