ವಿದ್ಯಾರ್ಥಿ ವೇತನ: ನಿಕಾನ್‌ ಸ್ಕಾಲರ್‌ಶಿಪ್‌ ಪ್ರೋಗ್ರಾಮ್‌ 2021–22 ಮೆರ್ಕ್‌ ಇಂಡಿಯಾ ಚಾರಿಟೆಬಲ್‌ ಟ್ರಸ್ಟ್‌ (ಎಂಐಸಿಟಿ) ಸ್ಕಾಲರ್‌ಶಿಪ್‌ ಪ್ರೊಗ್ರಾಮ್‌ 2021–22 ವಿವರ: 10ನೇ ತರಗತಿ ಉತ್ತೀರ್ಣರಾದವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪದವಿವರೆಗೆ ಈ ವಿದ್ಯಾರ್ಥಿ ವೇತನ ಅವರಿಗೆ ಸಹಕಾರಿಯಾಗಲಿದೆ. ಅರ್ಹತೆ: ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಬೆಂಗಳೂರು, ಮುಂಬೈ, ಥಾಣೆ, ನವಿ ಮುಂಬೈನಲ್ಲಿ ವಾಸಿಸುತ್ತಿರಬೇಕು. 10ನೇ ತರಗತಿಯಲ್ಲಿ ಕನಿಷ್ಠ ಶೇ 80 ರಷ್ಟು ಅಂಕಗಳಿಂದ ಉತ್ತೀರ್ಣಗೊಂಡಿರಬೇಕು. ಕುಟುಂಬದ ತಿಂಗಳ ಆದಾಯವು ₹ 20 ಸಾವಿರಕ್ಕಿಂತ ಕಡಿಮೆ ಇರಬೇಕು. ಆರ್ಥಿಕ ಸಹಾಯ: ವರ್ಷಕ್ಕೆ ₹ 35 ಸಾವಿರ, ಪದವಿ ಮುಗಿಯುವವರೆಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 4 ಅಕ್ಟೋಬರ್‌, 2021 ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಅರ್ಜಿಗಳು ಮಾತ್ರ ಹೆಚ್ಚಿನ ಮಾಹಿತಿಗೆ: .b4s.//MSP5 ನಿಕಾನ್‌ ಸ್ಕಾಲರ್‌ಶಿಪ್‌ ಪ್ರೋಗ್ರಾಮ್‌ 2021–22 ವಿವರ: ಪಿಯುಸಿ ಮುಗಿಸಿ, ಫೋಟೋಗ್ರಫಿ ಕೋರ್ಸ್‌ ಓದಲು ಇಚ್ಛಿಸುವ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹತೆ: ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯವು ₹ 6 ಲಕ್ಷಕ್ಕಿಂತ ಕಡಿಮೆ ಇರಬೇಕು. ಆರ್ಥಿಕ ಸಹಾಯ: ₹ 1 ಲಕ್ಷದವರೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ಸೆಪ್ಟೆಂಬರ್‌, 2021 ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಅರ್ಜಿಗಳು ಮಾತ್ರ ಹೆಚ್ಚಿನ ಮಾಹಿತಿಗೆ: .b4s.//NSP5 ಕೃಪೆ: buddy4study. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.