ವಿದ್ಯಾರ್ಥಿ ವೇತನ: ನಿಕಾನ್‌ ಸ್ಕಾಲರ್‌ಶಿಪ್‌ ಪ್ರೋಗ್ರಾಮ್‌ 2021–22 ನಿಕಾನ್‌ ಸ್ಕಾಲರ್‌ಶಿಪ್‌ ಪ್ರೋಗ್ರಾಮ್‌ 2021–22 ವಿವರ: ಛಾಯಾಗ್ರಹಣದಲ್ಲಿ ಆಸಕ್ತಿ ಇರುವ ಪಿಯುಸಿ ಮುಗಿಸಿರುವವರಿಂದ ನಿಕಾನ್‌ ಪ್ರೈವೇಟ್‌ ಲಿಮಿಟೆಡ್‌ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹತೆ: ಮೂರು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಛಾಯಾಗ್ರಹಣ ಕೋರ್ಸ್‌ ಇರಲಿದೆ. ಕುಟುಂಬದ ವಾರ್ಷಿಕ ಆದಾಯವು 6 ಲಕ್ಷಕ್ಕಿಂತ ಕಡಿಮೆ ಇರಬೇಕು. ಆರ್ಥಿಕ ಸಹಾಯ: ₹ 1 ಲಕ್ಷದವರೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಆಗಸ್ಟ್‌, 2021 ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಅರ್ಜಿಗಳು ಮಾತ್ರ ಹೆಚ್ಚಿನ ಮಾಹಿತಿಗೆ: .b4s.//NSP5 ಕೀಪ್‌ ಇಂಡಿಯಾ ಸ್ಮೈಲಿಂಗ್‌ ಫೌಂಡೇಶನ್‌ ಸ್ಕಾಲರ್‌ಶಿಪ್‌ ಪ್ರೋಗ್ರಾಮ್‌ ವಿವರ: 10ನೇ ತರಗತಿ ನಂತರದ ಮತ್ತು ಪದವಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಂದ ಕೋಲ್ಗೇಟ್‌–ಪಾಮೋಲಿವ್‌ (ಇಂಡಿಯಾ) ಲಿಮಿಟೆಡ್‌ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹತೆ: ಈ ವರ್ಷದ 10ನೇ ತರಗತಿಯಲ್ಲಿ ಶೇ 75 ರಷ್ಟು ಮತ್ತು ಪಿಯುಸಿಯಲ್ಲಿ ಶೇ 60ರಷ್ಟು ಅಂಕ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ. ಕುಟುಂಬದ ವಾರ್ಷಿಕ ಆದಾಯವು ₹ 5 ಲಕ್ಷ ಮೀರಿರಬಾರದು. ಆರ್ಥಿಕ ಸಹಾಯ: ಮೂರು ವರ್ಷದವರೆಗೆ ವರ್ಷಕ್ಕೆ ₹30 ಸಾವಿರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಆಗಸ್ಟ್‌, 2021 ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಅರ್ಜಿಗಳು ಮಾತ್ರ ಹೆಚ್ಚಿನ ಮಾಹಿತಿಗೆ: .b4s.//KISSP01 ಕೃಪೆ: buddy4study. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.