ಶಿಕ್ಷಣ: ವಿದ್ಯಾರ್ಥಿ ವೇತನ ಕೈಪಿಡಿ ಎಸ್‌ಟಿಎಫ್‌ಸಿ ಇಂಡಿಯಾ ಮೆರಿಟೋರಿಯಸ್‌ ಸ್ಕಾಲರ್‌ಶಿಪ್‌ ಪ್ರೋಗ್ರಾಮ್‌ 2021 * ವಿವರ: ಶ್ರೀರಾಮ್‌ ಟ್ರಾನ್ಸ್‌ಪೋರ್ಟ್‌ ಫೈನಾನ್ಸ್‌ ಕಂಪನಿ (ಎಸ್‌ಟಿಎಫ್‌ಸಿ) ಲಿಮಿಟೆಡ್‌ ಈ ವಿದ್ಯಾರ್ಥಿ ವೇತನವನ್ನು ವಾಣಿಜ್ಯ ಸಾರಿಗೆ ಚಾಲಕರ ಮಕ್ಕಳಿಗೆ ಆರ್ಥಿಕ ಸಹಾಯ ಮಾಡುವ ದೃಷ್ಟಿಯಿಂದ ಅರ್ಜಿಗಳನ್ನು ಆಹ್ವಾನಿಸಿದೆ. * ಅರ್ಹತೆ: ಡಿಪ್ಲೊಮಾ/ ಐಟಿಐ/ ಪಾಲಿಟೆಕ್ನಿಕ್‌ ಕೋರ್ಸ್‌ ಅಥವಾ ಪದವಿ/ ಎಂಜಿನಿಯರಿಂಗ್‌ (3–4ನೇ ವರ್ಷ) ಓದುತ್ತಿರುವವರು ಅರ್ಜಿ ಸಲ್ಲಿಸಬಹುದಾಗಿದೆ. 10ನೇ ಮತ್ತು 12ನೇ ತರಗತಿಯಲ್ಲಿ ಶೇ 60ರಷ್ಟು ಅಂಕ ಪಡೆದಿರಬೇಕು. ಕುಟುಂಬದ ವಾರ್ಷಿಕ ಆದಾಯವು ₹ 4 ಲಕ್ಷಕ್ಕಿಂತ ಕಡಿಮೆ ಇರಬೇಕು. * ಆರ್ಥಿಕ ಸಹಾಯ: ಐಟಿಐ/ ಪಾಲಿಟೆಕ್ನಿಕ್‌/ ಡಿಪ್ಲೊಮಾ ಕೋರ್ಸ್‌ಗಳಿಗೆ ₹ 15 ಸಾವಿರ (ಒಂದು ವರ್ಷಕ್ಕೆ), ಪದವಿ/ ಎಂಜಿನಿಯರಿಂಗ್‌ ಓದಿಗೆ ವಾರ್ಷಿಕ ₹ 35 ಸಾವಿರ (ನಾಲ್ಕು ವರ್ಷದವರೆಗೆ) * ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ನವೆಂಬರ್‌, 2021 * ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಅರ್ಜಿಗಳು ಮಾತ್ರ * ಹೆಚ್ಚಿನ ಮಾಹಿತಿಗೆ: .b4s.//SIMD4 *** ಐಐಟಿ ರೂರ್ಕಿ ಕೆಮಿಸ್ಟ್ರಿ ಡಿಪಾರ್ಟ್‌ಮೆಂಟ್‌ ಪೋಸ್ಟ್‌ ಡಾಕ್ಟೊರಲ್‌ ಫೆಲೋಶಿಪ್‌ (ಪಿಡಿಎಫ್‌) 2021 * ವಿವರ: ಪಿಎಚ್‌ಡಿ ಪದವಿ ಮಾಡಿದವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. * ಅರ್ಹತೆ: ಇತ್ತೀಚೆಗೆ ಕೆಮಿಸ್ಟ್ರಿಯಲ್ಲಿ (ಕೆಮಿಕಲ್‌ ಬಯೋಲಜಿ/ ಬಯೋಟೆಕ್ನಾಲಜಿ/ ಬಯೋಕೆಮಿಸ್ಟ್ರಿ) ಪಿಎಚ್‌ಡಿ ಥೀಸಿಸ್‌ ಸಲ್ಲಿಸಿದವರು ಅರ್ಜಿಗಳನ್ನು ಸಲ್ಲಿಸಬಹುದು. * ಆರ್ಥಿಕ ಸಹಾಯ: ಪ್ರತಿ ತಿಂಗಳು ₹ 60 ಸಾವಿರ * ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 6 ನವೆಂಬರ್‌, 2021 * ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಅಥವಾ ಅಂಚೆ ಮೂಲಕ. ದಿ ಹೆಡ್‌, ಡಿಪಾರ್ಟ್‌ಮೆಂಟ್‌ ಆಫ್‌ ಕೆಮಿಸ್ಟ್ರಿ, ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಟಿಕ್ನಾಲಜಿ, ರೂರ್ಕಿ– 247667, ಉತ್ತರಾಖಂಡ. * ಹೆಚ್ಚಿನ ಮಾಹಿತಿಗೆ: .b4s.//RPF2 ಕೃಪೆ: buddy4study. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.