: ನವೆಂಬರ್ ತಿಂಗಳಲ್ಲಿ ನಡೆಯುವ ಪರೀಕ್ಷೆಗಳ ವೇಳಾಪಟ್ಟಿ... ಸಿಬ್ಬಂದಿ ನೇಮಕಾತಿ ಆಯೋಗವು (ಎಸ್‌ಎಸ್‌ಸಿ) ಬರುವ ನವೆಂಬರ್‌ ತಿಂಗಳಲ್ಲಿ ವಿವಿಧ ಪರೀಕ್ಷೆಗಳನ್ನು ನಡೆಸಲಿದೆ. ಈಗಾಗಲೇ ಪರೀಕ್ಷೆಯ ವೇಳಾಪಟ್ಟಿಯನ್ನು ಎಸ್‌ಎಸ್‌ಸಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. 2019 ಹಾಗೂ 2021ನೇ ಸಾಲಿನ ನೇಮಕಾತಿ ಅಧಿಸೂಚನೆಗಳಿಗೆ ಸಂಬಂಧಿಸಿದಂತೆಎಸ್‌ಎಸ್‌ಸಿ ಪರೀಕ್ಷೆಗಳನ್ನು ನಡೆಸಲಿದೆ. ವೇಳಾಪಟ್ಟಿ... 1)ಕಂಬೈನ್ಡ್‌ ಸೆಕೆಂಡರಿ ಲೆವೆಲ್ ಪರೀಕ್ಷೆ. -03-11-2021 2)ಸಬ್‌ ಇನ್ಸ್‌ಪೆಕ್ಟರ್ ಪರೀಕ್ಷೆ, ದೆಹಲಿ ಪೊಲೀಸ್.-08-11-2021 3)ಸ್ಟೆನೋಗ್ರಾಫರ್ ಗ್ರೇಡ್ ಪರೀಕ್ಷೆ.-11-11-2021 4) ಕಾನ್‌ಸ್ಟೇಬಲ್ (ಜಿಡಿ)ಪರೀಕ್ಷೆ, ಕೇಂದ್ರ ಪಡೆ.-16-11-2021 ಈ ಪರೀಕ್ಷೆ ವೇಳಾಪಟ್ಟಿ ಸರ್ಕಾರದ ಮಾರ್ಗಸೂಚಿಗಳು ಹಾಗೂ ಕೊರೊನಾ ಪರಿಸ್ಥಿತಿಯ ನಿರ್ಧಾರಗಳಿಗೆ ಒಳಪಟ್ಟಿರುತ್ತದೆ. ಅಭ್ಯರ್ಥಿಗಳ ಹಿತದೃಷ್ಟಿಯಿಂದತುರ್ತು ಸಂದರ್ಭಗಳಲ್ಲಿ ಪರೀಕ್ಷೆ ವೇಳಾಪಟ್ಟಿ ಬದಲಾಗುವ ಸಾಧ್ಯತೆಗಳು ಇರುತ್ತವೆ ಎಂದು ಎಸ್‌ಎಸ್‌ಸಿ ಪ್ರಕಟಣೆಯಲ್ಲಿ ತಿಳಿಸಿದೆ. ವೆಬ್‌ಸೈಟ್‌:://.. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.