ವಿದ್ಯಾರ್ಥಿ ವೇತನ ಕೈಪಿಡಿ: ಜಿಎಸ್‌ಕೆ ಸ್ಕಾಲರ್ಸ್ ಪ್ರೋಗ್ರಾಂ 2021-22 ಐಐಟಿ ರೂರ್ಕಿ ಡಿಪಾರ್ಟ್‌ಮೆಂಟ್ ಆಫ್ ಕೆಮಿಸ್ಟ್ರಿ (ಡಿಓಎಫ್) ಪೋಸ್ಟ್ ಡಾಕ್ಟರಲ್ ಫೆಲೋಶಿಪ್ (ಪಿಡಿಎಫ್) 2021 ವಿವರ: ಐಐಟಿ ರೂರ್ಕಿ ಡಿಪಾರ್ಟ್‌ಮೆಂಟ್ ಆಫ್ ಕೆಮಿಸ್ಟ್ರಿ (ಡಿಓಎಫ್) ಪೋಸ್ಟ್ ಡಾಕ್ಟರಲ್ ಫೆಲೋಶಿಪ್ (ಪಿಡಿಎಫ್) 2021 ಕ್ಕೆ ಪಿಎಚ್‌ಡಿ ಪದವಿಧರರಿಂದ ಅರ್ಜಿ ಆಹ್ವಾನಿಸಿದೆ. ಆಯ್ಕೆಯಾದ ಅಭ್ಯರ್ಥಿಯು ‘ಎಯು ಡೋಪ್ಡ್ ಮ್ಯಾಗ್ನೆಟಿಕ್ ಫೆಕ್ಸಾಯ್ ನ್ಯಾನೋಪಾರ್ಟಿಕಲ್ಸ್ ಟಾರ್ಗೆಟಿಂಗ್ ಟ್ರಿಪಲ್-ನೆಗೆಟಿವ್ ಬ್ರೆಸ್ಟ್ ಕ್ಯಾನ್ಸರ್’ ಎನ್ನುವ ಶೀರ್ಷಿಕೆಯ ಮೇಲೆ ಫೆಲೋಶಿಪ್‌ ಮಾಡಬೇಕಿದೆ. ಅರ್ಹತೆ: ಬಯೊಟೆಕ್ನಾಲಜಿಯಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ಅಭ್ಯರ್ಥಿಗಳು ಈ ಫೆಲೋಶಿಪ್‌ಗೆ ಅರ್ಹರು. ಆರ್ಥಿಕ ನೆರವು: ತಿಂಗಳಿಗೆ ₹ 60,000 ವೇತನ ಭತ್ಯೆ ನೀಡಲಾಗುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್‌ 25, 2021 ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಮೂಲಕ ಹೆಚ್ಚಿನ ಮಾಹಿತಿಗೆ: .b4s.//CFP7 ಜಿಎಸ್‌ಕೆ ಸ್ಕಾಲರ್ಸ್ ಪ್ರೋಗ್ರಾಂ 2021-22 ವಿವರ: ಜಿಎಸ್‌ಕೆ ಸ್ಕಾಲರ್ಸ್ ಪ್ರೋಗ್ರಾಂ 2021-22, ದೇಶದ ಸರ್ಕಾರಿ ಕಾಲೇಜುಗಳಲ್ಲಿ ಮೊದಲ ವರ್ಷದ ಎಂಬಿಬಿಎಸ್ ಮಾಡುತ್ತಿರುವ ಅರ್ಹ ಮತ್ತು ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಂದ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನಿಸಿದೆ. ಅರ್ಹತೆ: ದ್ವಿತೀಯ ಪಿಯುಸಿಯಲ್ಲಿ ಕನಿಷ್ಠ ಶೇ 65 ರಷ್ಟು ಅಂಕ ಪಡೆದಿರುವ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ₹ 6ಲಕ್ಷವನ್ನು ಮೀರಿರಬಾರದು. ಆರ್ಥಿಕ ನೆರವು: ವರ್ಷಕ್ಕೆ ₹1 ಲಕ್ಷದವರೆಗೆ ವೇತನ ಭತ್ಯೆ ನೀಡಲಾಗುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್‌ 31, 2021 ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಮೂಲಕ ಹೆಚ್ಚಿನ ಮಾಹಿತಿಗೆ: .b4s.//GSKP1 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.