ವಿದ್ಯಾರ್ಥಿವೇತನ:ಎಸ್‌ಟಿಎಫ್‌ಸಿ ಇಂಡಿಯಾ ಮೆರಿಟೋರಿಯಸ್ ಸ್ಕಾಲರ್‌ಶಿಪ್ ಐಐಟಿ ಗಾಂಧಿನಗರ ಫಿಸಿಕ್ಸ್ ಡಿಸಿಪ್ಲಿನ್‌ (ಪಿಡಿ) ಪೋಸ್ಟ್– ಡಾಕ್ಟರಲ್ ಫೆಲೋಶಿಪ್‌ (ಪಿಡಿಎ) 2021 ವಿವರ: ಐಐಟಿ ಗಾಂಧಿನಗರ ಫಿಸಿಕ್ಸ್ ಡಿಸಿಪ್ಲಿನ್‌ (ಪಿಡಿ) ಪೋಸ್ಟ್ ಡಾಕ್ಟರಲ್ ಫೆಲೋಶಿಪ್ 2021 ಪಿಎಚ್‌ಡಿ ಪದವೀಧರರಿಗೆ ನೀಡುತ್ತಿರುವ ಸಂಶೋಧಾನ ಅವಕಾಶವಾಗಿದೆ. ಆರ್ಥಿಕ ನೆರವು: ಫಿಸಿಕ್ಸ್‌ನಲ್ಲಿ ಪಿಎಚ್‌ಡಿ ಪದವಿ ಮುಗಿಸಿದವರು ಹಾಗೂ ತಮ್ಮ ಪ್ರಬಂಧ ಸಲ್ಲಿಸಿರುವ ಅಥವಾ ಸಲ್ಲಿಸಲಿರುವ ಅಭ್ಯರ್ಥಿಗಳಿಗೆ ಈ ಫೆಲೋಶಿಪ್ ಮುಕ್ತವಾಗಿದೆ. ಆರ್ಥಿಕ ನೆರವು: ತಿಂಗಳಿಗೆ ₹ 50,000 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್ 31, 2021 ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಮೂಲಕ ಹೆಚ್ಚಿನ ಮಾಹಿತಿಗೆ: .b4s.//GPF8 ಎಸ್‌ಟಿಎಫ್‌ಸಿ ಇಂಡಿಯಾ ಮೆರಿಟೋರಿಯಸ್ ಸ್ಕಾಲರ್‌ಶಿಪ್ ಪ್ರೋಗ್ರಾಂ ವಿವರ: ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಫೈನಾನ್ಸ್ ಕಂಪನಿ(ಎಸ್‌ಟಿಎಫ್‌ಸಿ) ಲಿಮಿಟೆಡ್ ವಾಣಿಜ್ಯ ಸಾರಿಗೆ ಚಾಲಕರ ಕುಟಂಬದ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡಲು ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಿದೆ. 10 ಮತ್ತು 12ನೇ ತರಗತಿಯ ನಂತರ ವೃತ್ತಿಪರ ಶಿಕ್ಷಣ ಪಡೆಯಲು ಬಯಸುವ ಹಿಂದುಳಿದ ವರ್ಗಗಳ ಆಯ್ದ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಹರು. ಅರ್ಹತೆ: ಡಿಪ್ಲೊಮಾ, ಐಟಿಐ, ಪಾಲಿಟೆಕ್ನಿಕ್ ಕೋರ್ಸ್‌, ಪದವಿ ಹಾಗೂ ಎಂಜಿನಿಯರಿಂಗ್ ಕಾರ್ಯಕ್ರಮಗಳಿಗೆ ದಾಖಲಾದ 10 ಹಾಗೂ 12ನೇ ತರಗತಿಯಲ್ಲಿ ಕನಿಷ್ಠ ಶೇ 60 ಅಂಕ ಗಳಿಸಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಸಾರಿಗೆ ಚಾಲಕನ ಕುಟುಂಬದವರಾಗಿರಬೇಕು ಮತ್ತು ಅವರ ಆದಾಯವು ವರ್ಷಕ್ಕೆ ₹4 ಲಕ್ಷ ಕ್ಕಿಂತ ಕಡಿಮೆ ಇರಬೇಕು. ಆರ್ಥಿಕ ನೆರವು: ಆಯ್ದ ವಿದ್ಯಾರ್ಥಿಗಳು ಐಟಿಐ, ಪಾಲಿಟೆಕ್ನಿಕ್, ಡಿಪ್ಲೊಮಾ ಅಧ್ಯಯನಕ್ಕಾಗಿ ವರ್ಷಕ್ಕೆ ₹15,000 ರೂಗಳನ್ನು (ಗರಿಷ್ಠ 1 ವರ್ಷಗಳು) ಪಡೆಯುತ್ತಾರೆ. ಮತ್ತು ಪದವಿ, ಎಂಜಿನಿಯರಿಂಗ್ ಅಧ್ಯಯನಕ್ಕಾಗಿ ವರ್ಷಕ್ಕೆ ₹ 35,000 (ಗರಿಷ್ಠ 4 ವರ್ಷಗಳವರೆಗೆ) ಪಡೆಯುತ್ತಾರೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್ 31, 2021 ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಮೂಲಕ ಹೆಚ್ಚಿನ ಮಾಹಿತಿಗೆ: .b4s.//SIMD4 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.