ಕಿರಿಯರ ಕ್ರಿಕೆಟ್‌: ದ್ವಿಶತಕ ಗಳಿಸಿದ ಧೃವ ಬೆಂಗಳೂರು: ಧೃವ ಪಿ. ಭರ್ಜರಿ ದ್ವಿಶತಕ (ಔಟಾಗದೆ 233, 245 ಎಸೆತ, 32 ಬೌಂಡರಿ, 2 ಸಿಕ್ಸರ್‌),ಸೃಜನ್ ನಂದನ್‌ (116) ಹಾಗೂ ಆರ್ಯನ್ ಇಂಚಲ್ (ಔಟಾಗದೆ 111) ಶತಕ ಗಳಿಸಿದರು. ಇವರ ಆಟದ ಬಲದಿಂದ ಬೆಂಗಳೂರು ವಲಯ ತಂಡವು ಕೆಎಸ್‌ಸಿಎ ಅಂತರವಲಯ 16 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಸೋಮವಾರ ಮೂರು ಪಾಯಿಂಟ್ಸ್ ಕಲೆಹಾಕಿತು. ಶಿವಮೊಗ್ಗ ತಂಡದ ಎದುರಿನ ಈ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು. ಮತ್ತೊಂದು ಪಂದ್ಯದಲ್ಲಿ ಹರ್ಷವರ್ಧನ್ ಖೂಬಾ (145, 217 ಎಸೆತ, 12 ಬೌಂಡರಿ) ಹಾಗೂ ಪ್ರಜ್ವಲ್ ಕುಮಾರ್ ಕೆ.ಎನ್‌. (117, 226 ಎ, 12 ಬೌಂ.) ಗಳಿಸಿದ ಶತಕಗಳನ್ನು ನೆರವಿನಿಂದ ರಾಯಚೂರು ತಂಡವು ತುಮಕೂರು ಎದುರಿನ ಪಂದ್ಯದಲ್ಲಿ ಮೂರು ಪಾಯಿಂಟ್ಸ್ ಕಲೆಹಾಕಿತು. ಈ ಪಂದ್ಯ ಕೂಡ ಡ್ರಾನಲ್ಲಿ ಕೊನೆಗೊಂಡಿತು. ಸಂಕ್ಷಿಪ್ತ ಸ್ಕೋರುಗಳು: ಆರ್‌ಡಬ್ಲ್ಯುಎಫ್ ಕ್ರೀಡಾಂಗಣ: ಬೆಂಗಳೂರು ವಲಯ: 90 ಓವರ್‌ಗಳಲ್ಲಿ 2 ವಿಕೆಟ್‌ಗೆ 510 (ಧೃವ ಪಿ. ಔಟಾಗದೆ 233, ಸೃಜನ್ ನಂದನ್‌ 116, ಆರ್ಯನ್ ಇಂಚಲ್‌ ಔಟಾಗದೆ 111, ಅರ್ಜುನ್ ರೆಡ್ಡಿ 43). ಶಿವಮೊಗ್ಗ ವಲಯ: 86 ಓವರ್‌ಗಳಲ್ಲಿ 288 (ಸಿ.ಆರ್. ಕುಮಾರಸ್ವಾಮಿ 43, ನಿಹಾರ್ ಎಸ್‌. 55, ಸಾಯಿನಂದನ್‌ ಜಿ.ಎ. 52, ವಿಕ್ರಮ್ ಆರ್‌. 35; ಆದಿತ್ಯ ಆರ್‌. 43ಕ್ಕೆ 2, ಆನಂದ್ ಅರುಣ್ ಪಿಳ್ಳೈ 46ಕ್ಕೆ 2, ಪ್ರಣವ್ ಅಶ್ವತ್‌ 41ಕ್ಕೆ 4). ಫಲಿತಾಂಶ: ಪಂದ್ಯ ಡ್ರಾ, ಬೆಂಗಳೂರು ವಲಯಕ್ಕೆ ಮೂರು ಪಾಯಿಂಟ್ಸ್. ಆಲೂರು 1ನೇ ಕ್ರೀಡಾಂಗಣ: ರಾಯಚೂರು ವಲಯ: 90 ಓವರ್‌ಗಳಲ್ಲಿ 4 ವಿಕೆಟ್‌ಗೆ 318 (ಹರ್ಷವರ್ಧನ್ ಖೂಬಾ 145, ಪ್ರಭು ಸಸಾಲಟ್ಟಿ 39, ಪ್ರಜ್ವಲ್‌ ಕುಮಾರ್ ಕೆ.ಎನ್‌. 117). ತುಮಕೂರು ವಲಯ: ಮೊದಲ ಇನಿಂಗ್ಸ್: 36.5 ಓವರ್‌ಗಳಲ್ಲಿ 104 (ಗೌರವ್ ಕೃಷ್ಣ ಡಿ. 27; ಶ್ರೀಧರ್ ಜಗತಾಪ 28ಕ್ಕೆ 4) ಎರಡನೇ ಇನಿಂಗ್ಸ್: 53 ಓವರ್‌ಗಳಲ್ಲಿ 3 ವಿಕೆಟ್‌ಗೆ 121 (ಆದಿತ್ಯ ಜಿ.ಪಿ. 53, ಅಹಮ್ಮದ್ ರಾಜಾ, 29 ಅಮೋಘ ಪಿ. ಔಟಾಗದೆ 30). ಫಲಿತಾಂಶ: ಪಂದ್ಯ ಡ್ರಾ, ರಾಯಚೂರು ತಂಡಕ್ಕೆ ಮೂರು ಪಾಯಿಂಟ್ಸ್. ಆರ್‌ಎಸ್‌ಐ ಕ್ರೀಡಾಂಗಣ: ಧಾರವಾಡ ವಲಯ: 81.1 ಓವರ್‌ಗಳಲ್ಲಿ 303 (ಶತಕ್ ಗುಂಜಲ್‌ 143, ಮಾಧವ ಎಸ್‌. ಧಾರವಾಡಕರ 55, ಧೃವ ದೇಸಾಯಿ 45, ಶ್ರೇಯಾಂಶ್ ಮಾಟಿವಡ್ಡರ್‌ 26; ಆದಿತ್ಯ ನಾಯರ್‌ 61ಕ್ಕೆ 3, ರೋನಿತ್ ಅಯ್ಯಂಗಾರ್‌ 21ಕ್ಕೆ 3). ಸಂಯುಕ್ತ ಸಿಟಿ ಇಲೆವನ್‌: 87.2 ಓವರ್‌ಗಳಲ್ಲಿ 262 (ಹರಿ ರಾಜೀವ್‌ 29, ಚಿರಾಗ್ ಶರ್ಮಾ 43, ಆದಿತ್ಯ ನಾಯರ್‌ 32, ಕೈವಲ್ಯ ಮಿಶ್ರಾ 60; ದೀಪಕ್ ನೀರಲಗಿ 67ಕ್ಕೆ 3, ಸೌರವ್‌ ಪಿ. ಸಾಮಂತ್‌ 34ಕ್ಕೆ2; ಧೃವ ದೇಸಾಯಿ 39ಕ್ಕೆ 2). ಫಲಿತಾಂಶ: ಪಂದ್ಯ ಡ್ರಾ, ಧಾರವಾಡ ತಂಡಕ್ಕೆ ಮೂರು ಪಾಯಿಂಟ್ಸ್. ಕೆಐಒಸಿ ಕ್ರೀಡಾಂಗಣ ಬೆಂಗಳೂರು ಸಿಟಿ ಇಲೆವನ್‌: 90 ಓವರ್‌ಗಳಲ್ಲಿ 7 ವಿಕೆಟ್‌ಗೆ 334 (ಪ್ರಗ್ಯಾನ್ ಹೋಟ 62, ರವಿ ಕೈರವ್ ರೆಡ್ಡಿ 24, ಲಕ್ಷಣ್‌ 94, ವಿವೇಕ್ ಆರ್. ಔಟಾಗದೆ 102; ಮಾಲತೀಶ್‌ ಎಂ. 80ಕ್ಕೆ 2, ಆರ್ಯನ್ ಭಾರದ್ವಾಜ್‌ 84ಕ್ಕೆ 2) ಎರಡನೇ ಇನಿಂಗ್ಸ್: 17 ಓವರ್‌ಗಳಲ್ಲಿ 2 ವಿಕೆಟ್‌ಗೆ 66 (ಲಕ್ಷನ್ 38, ಪ್ರಗ್ಯಾನ್ ಹೋಟ ಔಟಾಗದೆ 21). ವೈಸ್ ಪ್ರೆಸಿಡೆಂಟ್ಸ್ ಇಲೆವನ್‌: 61.4 ಓವರ್‌ಗಳಲ್ಲಿ 253 (ರಘುವೀರ್ ರಾಜಪುರೋಹಿತ್ 36, ಕಾರ್ತಿಕ್ ಎಸ್‌.ಯು. 89; ಹಾರ್ದಿಕ್ ರಾಜ್‌ 33ಕ್ಕೆ 2, ಸಿದ್ಧಾಂತ್ ಪಾಠಕ್‌ 46ಕ್ಕೆ 4, ಅನೀಶ್ ಕೆ.ಎನ್‌. 55ಕ್ಕೆ 4). ಫಲಿತಾಂಶ: ಪಂದ್ಯ ಡ್ರಾ, ಬೆಂಗಳೂರು ಸಿಟಿ ಇಲೆವನ್‌ಗೆ ಮೂರು ಪಾಯಿಂಟ್ಸ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.