ಆರ್‌ಸಿಬಿ ಜೊತೆ ಬಿಕೆಟಿ ಟೈರ್ಸ್‌ ಒಪ್ಪಂದ ಬೆಂಗಳೂರು: ಭಾರತದ ಆಫ್ ಹೈವೇ ಟೈರ್ಸ್ ಮಾರುಕಟ್ಟೆಯಲ್ಲಿ ಪ್ರಮುಖವಾಗಿರುವ ಬಾಲಕೃಷ್ಣ ಇಂಡಸ್ಟ್ರೀಸ್ ಲಿಮಿಟೆಡ್ (ಬಿಕೆಟಿ ಟೈರ್ಸ್) ಐಪಿಎಲ್‌ನಲ್ಲಿ ಆಡುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಧಿಕೃತ ಟೈರ್ಸ್ ಪಾಲುದಾರ ಆಗಲು ಮುಂದೆ ಬಂದಿದೆ. ಹಿಂದಿನ ಆವೃತ್ತಿಗಳಲ್ಲಿ ಬಿಕೆಟಿ ಕಂಪನಿ ಮುಂಬೈ ಇಂಡಿಯನ್ಸ್, ಕೊಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್, ಕಿಂಗ್ಸ್ ಇಲೆವನ್ ಪಂಜಾಬ್ (ಈಗ ಪಂಜಾಬ್ ಕಿಂಗ್ಸ್), ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳೊಂದಿಗೆ ಪಾಲುದಾರಿಕೆ ಹೊಂದಿತ್ತು. ‘2020ರಲ್ಲಿ ಕಂಪನಿಯು ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ (ಬಿಬಿಎಲ್‌) ಜೊತೆ ಒಪ್ಪಂದ ಮಾಡಿಕೊಂಡಿತ್ತು. ಕ್ರಿಕೆಟ್ ಮಾತ್ರವಲ್ಲದೆ ಫುಟ್‌ಬಾಲ್‌, ಸಾಹಸ ಕ್ರೀಡೆಗಳ ಬಗ್ಗೆಯೂ ಬಿಕೆಟಿ ಆಸಕ್ತಿ ಹೊಂದಿದೆ. ಕಬಡ್ಡಿಯಂಥ ಅಪ್ಪಟ ಭಾರತೀಯ ಕ್ರೀಡೆಗಳನ್ನು ಪ್ರೋತ್ಸಾಹಿಸುವುದಕ್ಕೂ ಮುಂದಾಗಿದೆ’ ಎಂದು ಬಿಕೆಟಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಪೋದ್ದಾರ್ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.