ಯುಪ್ ಟಿವಿಯಲ್ಲಿ ಐಪಿಎಲ್ ಪಂದ್ಯಗಳ ನೇರ ಪ್ರಸಾರ ನವದೆಹಲಿ: ಪ್ರಮುಖ ಜಾಗತಿಕ ಒಟಿಟಿ ವೇದಿಕೆ ಯುಪ್ ಟಿವಿ, 100 ದೇಶಗಳ ವಿವೋ ಐಪಿಎಲ್ 2021ರ ಡಿಜಿಟಲ್ ಪ್ರಸಾರ ಹಕ್ಕುಗಳನ್ನು ಪಡೆದುಕೊಂಡಿದೆ. ಈ ಮೂಲಕ, ವಿವೋ ಐಪಿಎಲ್ 2021ರ ಎಲ್ಲ 60 ಟಿ–20 ಪಂದ್ಯಗಳ ನೇರ ಪ್ರಸಾರ ವೀಕ್ಷಿಸಲು ಮತ್ತು ಅದ್ಬುತ ಕ್ಷಣಗಳನ್ನು ಆನಂದಿಸಲು ವಿಶ್ವದಾದ್ಯಂತ ಇರುವ ಕ್ರಿಕೆಟ್ ಅಭಿಮಾನಿಗಳಿಗೆ ಸಹಾಯ ಮಾಡುತ್ತದೆ ಎಂದು ಪಿಟಿಐ ವರದಿ ಮಾಡಿದೆ. ಏಪ್ರಿಲ್ 9 ರಿಂದ ಮೇ 30 ರವರೆಗೆ ನಡೆಯುವ ಎಲ್ಲ ಐಪಿಎಲ್ ಪಂದ್ಯಗಳನ್ನು ಯುಪ್ ಟಿ.ವಿ ನೇರ ಪ್ರಸಾರ ಮಾಡಲಿದೆ. ಚೆನ್ನೈ, ಮುಂಬೈ, ಅಹಮದಾಬಾದ್, ದೆಹಲಿ, ಬೆಂಗಳೂರು ಮತ್ತು ಕೋಲ್ಕತ್ತದಲ್ಲಿ ನಡೆಯುವ ಲೀಗ್ ಹಂತದ ಪಂದ್ಯಗಳು ಮತ್ತು ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಪ್ಲೇಆಫ್ ಪಂದ್ಯ ಮತ್ತು ಫೈನಲ್ ಪಂದ್ಯಗಳುಸಹ ಯುಪ್ ಟಿವಿಯಲ್ಲಿ ಪ್ರಸಾರ ಆಗಲಿವೆ. ಇದನ್ನೂ ಓದಿ.. ಐಪಿಎಲ್‌ 2021ಕ್ಕೆ ದಿನಗಣನೆ: ಇಲ್ಲಿವೆ ಕಳೆದ ಆವೃತ್ತಿಯ ಟಾಪ್ 5 ವಿವಾದಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಯುಪ್ ಟಿವಿ, ಯುರೋಪ್, ಆಸ್ಟ್ರೇಲಿಯಾ, ಶ್ರೀಲಂಕಾ, ಆಗ್ನೇಯ ಏಷ್ಯಾ (ಸಿಂಗಾಪುರ್ ಮತ್ತು ಮಲೇಷ್ಯಾ ಹೊರತುಪಡಿಸಿ), ಮಧ್ಯ ಮತ್ತು ದಕ್ಷಿಣ ಅಮೆರಿಕಾ, ಮಧ್ಯ ಏಷ್ಯಾ, ನೇಪಾಳ, ಭೂತಾನ್ , ಮತ್ತು ಮಾಲ್ಡೀವ್ಸ್ ಸೇರಿ ಹತ್ತಿರತ್ತಿರ 100 ದೇಶಗಳಲ್ಲಿ ಐಪಿಎಲ್ ಪಂದ್ಯಗಳನ್ನು ನೇರ ಪ್ರಸಾರ ಮಾಡಲಿದೆ. "ಕ್ರಿಕೆಟ್ ಬಗ್ಗೆ ವಿಶ್ವದಾದ್ಯಂತ ಕ್ರೇಜ್ ಇದೆ. ಐಪಿಎಲ್ ಯಾವಾಗಲೂ ಜಗತ್ತಿನ ಅಭಿಮಾನಿಗಳ ನೆಚ್ಚಿನ ಸರಣಿಯಾಗಿದೆ. ವಿವೋ ಐಪಿಎಲ್ ಈಗ ಮತ್ತೆ ಭಾರತಕ್ಕೆ ಮರಳಿದ್ದು, ಯುಪ್ ಟಿವಿ ಮೂಲಕ ನಮ್ಮ ಬಳಕೆದಾರರು ತಮ್ಮ ನೆಚ್ಚಿನ ಕ್ರೀಡಾಕೂಟದ ನೇರ ಪ್ರಸಾರವನ್ನು ಆನಂದಿಸಬಹುದು ಎಂದು ಯುಪ್ ಟಿವಿಯ ಸಂಸ್ಥಾಪಕ ಮತ್ತು ಸಿಇಒ ಉದಯ್ ರೆಡ್ಡಿ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.