ಗಾಯದ ಸಮಸ್ಯೆ: ಐಪಿಎಲ್‌ ಟೂರ್ನಿಯಿಂದ ಬೆನ್ ಸ್ಟೋಕ್ಸ್ ಔಟ್! ಬೆಂಗಳೂರು: ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಿಂದ ರಾಜಸ್ಥಾನ್ ರಾಯಲ್ಸ್ ತಂಡದ ಆಲ‌್ ರೌಂಡರ್ ಆಟಗಾರ ಬೆನ್ ಸ್ಟೋಕ್ಸ್ ಹೊರಗುಳಿಯುತ್ತಿದ್ದಾರೆ. ಪಂಜಾಬ್ ಕಿಂಗ್ಸ್ ಜತೆಗಿನ ಈ ಬಾರಿಯ ಐಪಿಎಲ್ ಮೊದಲ ಪಂದ್ಯದಲ್ಲಿ ಎಡಗೈ ಬೆರಳಿನ ಗಾಯದ ಸಮಸ್ಯೆಗೆ ಸಿಲುಕಿರುವ ಬೆನ್ ಸ್ಟೋಕ್ಸ್, ಆಟವಾಡಲು ಲಭ್ಯರಿರುವುದಿಲ್ಲ. ಏಪ್ರಿಲ್ 12ರಂದು ನಡೆದಿದ್ದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಕ್ರಿಸ್ ಗೇಲ್ ಅವರ ಬೌಂಡರಿಗೆ ಅಟ್ಟಿದ ಬಾಲ್ ಕ್ಯಾಚ್ ಹಿಡಿಯುವ ಯತ್ನದಲ್ಲಿ, ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಎಲ್ಲ ರೀತಿಯಿಂದಲೂ ಆಧಾರ ಮತ್ತು ಆಲ್‌ರೌಂಡರ್ ಆಗಿದ್ದ ಬೆನ್ ಸ್ಟೋಕ್ಸ್ ನಿರ್ಗಮನ ತಂಡಕ್ಕೆ ಹಿನ್ನಡೆ ತರಲಿದೆ. ಆಟವಾಡಲು ಸಾಧ್ಯವಾಗದಿದ್ದರೂ, ಬೆನ್ ತಂಡದ ಜತೆಗೇ ಇರಲಿದ್ದು, ಪಂದ್ಯದ ಕುರಿತು ಸಲಹೆ ಸೂಚನೆ ನೀಡಲಿದ್ದಾರೆ. ಬೆನ್ ಬದಲು ಯಾರು ಆಡಲಿದ್ದಾರೆ ಎನ್ನುವುದನ್ನು ರಾಜಸ್ಥಾನ್ ರಾಯಲ್ಸ್ ಇನ್ನಷ್ಟೇ ಪ್ರಕಟಿಸಬೇಕಿದೆ. ಐಪಿಎಲ್ ಹರಾಜಿಗೂ ಮೊದಲೇ ಮ್ಯಾಕ್ಸ್‌ವೆಲ್ ಖರೀದಿಗೆ ಆರ್‌ಸಿಬಿ ಮಾಸ್ಟರ್ ಪ್ಲ್ಯಾನ್? ರಾಜಸ್ಥಾನ್ ರಾಯಲ್ಸ್ ಜತೆಗಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ 222 ಬೃಹತ್ ಮೊತ್ತ ಪೇರಿಸಿತ್ತು. ಗಾಯಗೊಂಡಿರುವ ಬೆನ್ ಸ್ಟೋಕ್ಸ್‌ಗೆ ಮುಂಬಯಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. 2021: ಕೋಲ್ಕತ್ತಗೆ ಸೋಲಿನ ಶಾಕ್ ನೀಡಿದ ಮುಂಬೈ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.