2021: ಐಪಿಎಲ್‌ನಲ್ಲಿ ಮಗದೊಂದು ದಾಖಲೆ ಬರೆದ ಕ್ರಿಸ್ ಗೇಲ್ ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಇತಿಹಾಸದಲ್ಲೇ ವೆಸ್ಟ್‌ಇಂಡೀಸ್‌ನ ಕ್ರಿಸ್ ಗೇಲ್, ದಾಖಲೆಯ 350ನೇ ಸಿಕ್ಸರ್ ಸಿಡಿಸಿದ್ದಾರೆ. ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಗೆ ಕ್ರಿಸ್ ಗೇಲ್ ಪಾತ್ರವಾಗಿದ್ದಾರೆ. ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ 42 ವರ್ಷದ ಗೇಲ್, ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಈ ಮಹತ್ವದ ಮೈಲುಗಲ್ಲು ತಲುಪಿದ್ದಾರೆ. ಐಪಿಎಲ್‌ನಲ್ಲಿ 133ನೇ ಪಂದ್ಯದ 132 ಇನ್ನಿಂಗ್ಸ್‌ನಲ್ಲಿ ಗೇಲ್ ಈ ಮೈಲುಗಲ್ಲು ತಲುಪಿದ್ದಾರೆ. ಅಲ್ಲದೆ ಇದುವರೆಗೆ 41.12ರ ಸರಾಸರಿಯಲ್ಲಿ 4,812 ರನ್ ಪೇರಿಸಿದ್ದಾರೆ. ಇದರಲ್ಲಿ ಆರು ಶತಕಗಳು ಸೇರಿವೆ. ಹಾಗೆಯೇ 150.04ರ ಸ್ಟ್ರೇಕ್‌ರೇಟ್ ಕಾಯ್ದುಕೊಂಡಿದ್ದಾರೆ. 🚨 - 3⃣5⃣0⃣ 💥💥# | # | @ ../bhIxAAmq2J ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಕ್ರಿಸ್ ಗೇಲ್ ಬಳಿಕ ಎರಡನೇ ಸ್ಥಾನದಲ್ಲಿರುವ ಮಿಸ್ಟರ್ 360 ಡಿಗ್ರಿ ಖ್ಯಾತಿಯ ಬ್ಯಾಟ್ಸ್‌ಮನ್ ಎಬಿ ಡಿ ವಿಲಿಯರ್ಸ್ ಇದುವರೆಗೆ 237 ಸಿಕ್ಸರ್‌‌ಗಳನ್ನು ಬಾರಿಸಿದ್ದಾರೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟಾಪ್ 5 ಪಟ್ಟಿ ಇಲ್ಲಿದೆ: 1. ಕ್ರಿಸ್ ಗೇಲ್ (351*) 2. ಎಬಿ ಡಿ ವಿಲಿಯರ್ಸ್ (237) 3. ಎಂ.ಎಸ್. ಧೋನಿ (216) 4. ರೋಹಿತ್ ಶರ್ಮಾ (214) 5. ವಿರಾಟ್ ಕೊಹ್ಲಿ (201) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.