2021: ಮುಂದುವರಿದ ಧೋನಿ, ರೈನಾ ವೈಫಲ್ಯ ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಸುರೇಶ್ ರೈನಾ ಕಳಪೆ ಬ್ಯಾಟಿಂಗ್ ಪ್ರದರ್ಶನ ಮುಂದುವರಿದಿದೆ. ಕೋವಿಡ್‌ನಿಂದಾಗಿ ಐಪಿಎಲ್ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲಾಗಿತ್ತು. ಆದರೆ ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಧೋನಿ ಹಾಗೂ ರೈನಾಗೆ ಮಿಂಚಲಾಗಲಿಲ್ಲ. ಆರಂಭದಲ್ಲೇ ಆಘಾತ ಎದುರಿಸಿದ ಚೆನ್ನೈಗೆ ಅನುಭವಿ ಆಟಗಾರರಾದ ಧೋನಿ ಹಾಗೂ ರೈನಾ ನೆರವಾಗುವ ಭರವಸೆಯಿತ್ತು. ಆದರೆ ಬೇಗನೇ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ! # . 3. - ://./ # # ../Bl01ctiRah ರೈನಾ 4 ಹಾಗೂ ಧೋನಿ 3 ರನ್ ಗಳಿಸಿ ಔಟಾದರು. ಈ ಎರಡು ವಿಕೆಟ್‌‌ಗಳನ್ನು ಟ್ರೆಂಟ್ ಬೌಲ್ಟ್ ಹಾಗೂ ಆ್ಯಡಂ ಮಿಲ್ನೆ ಹಂಚಿಕೊಂಡರು. ಭಾರತದಲ್ಲಿ ನಡೆದ ಮೊದಲ ಹಂತದ ಪಂದ್ಯಗಳಲ್ಲೂ ಧೋನಿ ಹಾಗೂ ರೈನಾ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಪ್ರಮುಖ ಆಟಗಾರರ ವೈಫಲ್ಯದಿಂದಾಗಿ ಚೆನ್ನೈ ತಂಡವು ಹೆಚ್ಚಿನ ಒತ್ತಡಕ್ಕೊಳಗಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.